ರಾಮನಗರ ಜಿಲ್ಲೆಯಲ್ಲಿ ಮತ್ತೊಬ್ಬ ಕೊರೊನಾ ಶಂಕಿತ ಪತ್ತೆ?
ರಾಮನಗರ, ಮಾರ್ಚ್ 17: ಇಂಡೋನೇಷ್ಯಾದ ಬಾಲಿ ಗೆ ಹೋಗಿ ಬಂದಂತಹ ಮಾಗಡಿ ವ್ಯಕ್ತಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ಪತ್ತೆಯಾಗಿದೆಯೇ ಎಂಬ ಅನುಮಾನ ಕಾಡಿದ್ದು, ಸದ್ಯ ಅವರನ್ನು ಮಾಗಡಿಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ರಾಮನಗರ ಜಿಲ್ಲೆಯ ಮಾಗಡಿ ನಿವಾಸಿಯಾಗಿದ್ದು, ಇತ್ತೀಚಿಗೆ ಬಾಲಿ ಗೆ ಪ್ರವಾಸಕ್ಕೆ ಹೋಗಿ, ಐದು ದಿನಗಳಳ ಹಿಂದೆ ವಾಪಸ್ ಬಂದಿದ್ದರು. ನಿನ್ನೆ ಮಧ್ಯ ರಾತ್ರಿ ಈ ವ್ಯಕ್ತಿಗೆ ಜ್ವರ ಬಂದ ಹಿನ್ನೆಲೆಯಲ್ಲಿ ಮಾಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ರಾತ್ರಿಯೇ ಮುಂಜಾಗ್ರತಾ ಕ್ರಮವಾಗಿ ಅವರ ರಕ್ತ, ಕಫಾ ವನ್ನು ಪರೀಕ್ಷೆಗೆಂದು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಏನಾಗಿದೆ ಅಂತ ರಿಪೋರ್ಟ್ ಸಿಗಲಿದೆ. ಆತಂಕ ಅಗತ್ಯವಿಲ್ಲ, ವ್ಯಕ್ತಿ ಆರೋಗ್ಯವಾಗಿದ್ದಾರೆ ಎಂದು ರಾಮನಗರ ಡಿಹೆಚ್ಒ ಡಾ.ನಿರಂಜನ್ ಮಾಹಿತಿ ನೀಡಿದರು.












Click it and Unblock the Notifications