• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರದಲ್ಲಿ ದಿನಸಿ ಕಿಟ್ ವಿತರಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್

|

ರಾಮನಗರ, ಮೇ 8: ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳಲ್ಲಿ ರಾಮನಗರ ಶಾಸಕರಾದ ಅನಿತಾ ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದು ದಿನಸಿ ಕಿಟ್ ಗಳನ್ನ ವಿತರಣೆ ಮಾಡಿದರು.

ರಾಮನಗರ ರಕ್ಷಣೆಗೆ ಬೀದಿಗಿಳಿಯುವೆ: ಶಾಸಕಿ ಅನಿತಾ ಕುಮಾರಸ್ವಾಮಿ ಎಚ್ಚರಿಕೆ

   ರಾಮನಗರದಲ್ಲಿ ಮಾಜಿ ಶಾಸಕ K.Raju ಹಾಗು ಪೊಲೀಸ್ ನಡುವೆ ಮಾತಿನ ಚಕಮಕಿ | Ramanagar | MLA

   ''ಕೊರೊನಾದಿಂದ ಇಡೀ ವಿಶ್ವವೇ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯವನ್ನ ನಾವು ಮಾಡ್ತಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ 45 ದಿನಗಳ ಕಾಲ ಬಡವರ್ಗದ ಜನರಿಗೆ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಉಚಿತವಾಗಿ ಆಹಾರ ವಿತರಣೆ ಮಾಡಲಾಗಿದೆ. ಈಗ ರಾಮನಗರ ಮತ್ತು ಚನ್ನಪಟ್ಡಣ ಕ್ಷೇತ್ರದ ಸುಮಾರು 1 ಲಕ್ಷದ 10 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನ ವಿತರಿಸಲಾಗ್ತಿದೆ'' ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

   ನಂತರ ಮಾತನಾಡಿದ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ''ಕಷ್ಟಕ್ಕೆ ಮಿಡಿಯುವ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರು ಸಂಕಷ್ಟದಲ್ಲಿರುವ ಬಡವರ್ಗದ ಜನರಿಗೆ ಸಹಾಯ ಮಾಡುವ ಕೆಲಸ ಮಾಡ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾನು ಕೂಡ ಸಮಾಜಮುಖಿಯಾದ ಸೇವೆಯನ್ನ ಮಾಡ್ತಿದ್ದೇನೆ'' ಎಂದರು.

   ''ಕೊರೊನಾದಿಂದ ಪಾರಾಗಲು ನಾವೆಲ್ಲರೂ ಸೇರಿ ಪ್ರಾರ್ಥಿಸೋಣ. ಮುಂದಿನ ದಿನಗಳಲ್ಲಿ ರಾಮನಗರ ಕ್ಷೇತ್ರದಲ್ಲಿ ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನ ಆಲಿಸುವ ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ. ನನ್ನ ತಂದೆಯ ಕರ್ಮಭೂಮಿ ರಾಮನಗರ. ಹೀಗಾಗಿ ರಾಮನಗರದ ಜನತೆ ನನ್ನ ತಂದೆಯನ್ನ ಆಶೀರ್ವದಿಸಿ ಎರಡು ಬಾರಿ ಮುಖ್ಯಮಂತ್ರಿಯಾಗಲಿಕ್ಕೆ ಕಾರಣರಾಗಿದ್ದೀರಿ. ನಾನು ರಾಮನಗರದ ಜನತೆಗೆ ಸದಾ ಋಣಿಯಾಗಿರ್ತೇನೆ'' ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

   English summary
   Anitha Kumaraswamy and Nikhil Kumar distributed Ration Kits in Ramanagar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X