ಮನೆಯಲ್ಲಿ ಮಲಗಿದ್ದ ಮಗುವನ್ನು ಎಳೆದೊಯ್ದು ಕೊಂದು ತಿಂದ ಚಿರತೆ

ರಾಮನಗರ, ಮೇ 9: ಮನೆಯಲ್ಲಿ ಮಲಗಿದ್ದ ಮಗುವನ್ನು ಎಳೆದೊಯ್ದು ಚಿರತೆಯೊಂದು ಕೊಂದು ತಿಂದಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಮನೆಯಲ್ಲಿ ಮಲಗಿದ್ದ ಮೂರು ವರ್ಷದ ಗಂಡು ಮಗುವನ್ನು ಚಿರತೆ ಕೊಂದು ತಿಂದಿದೆ. ಇದು ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ತುಂಬಾ ಸೆಕೆ ಇದೆ ಎಂದು ಮನೆಯ ಬಾಗಿಲು ತೆರೆದು ಮಲಗಿದ್ದರು, ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಚಿರತೆ ಬಂದು ಮಗುವನ್ನು ಎಳೆದೊಯ್ದಿದೆ.

Lopard

ಕತ್ತಲೆಯಲ್ಲಿ ಹುಡುಕಿದಾಗ ಮನೆಯುಂದ ಸುಮಾರು ಅರವತ್ತು ಮೀಟರ್ ದೂರದಲ್ಲಿ ಮಗುವಿನ ಶವ ಪತ್ತೆಯಾಗಿದೆ.

ಚಿರತೆ ದಾಳಿಗೊಳಗಾದ ಮಗುವಿನ ಹೆಸರು ಹೇಮಂತ್, ಚಂದ್ರಪ್ಪ ಹಾಗೂ ಮಂಗಳಗೌರಮ್ಮ ದಂಪತಿಯ ಪ್ರೀತಿಯ ಪುತ್ರನಾಗಿದ್ದ. ಮಂಗಳಗೌರಮ್ಮ ಅವರ ತಾಯಿ ಮನೆ ಕದರಯ್ಯನ ಪಾಳ್ಯವಾಗಿದ್ದು ಕಳೆದ ವಾರವಷ್ಟೇ ಊರಿಗೆ ಮರಳಿದ್ದರು.

ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಘಟನೆಯ ವಿವರ ಪಡೆದಿದ್ದಾರೆ, ಅಲ್ಲಿ ಹಿಂದೆ ಇಂಥದ್ದೇ ಘಟನೆ ನಡೆದಿತ್ತಾ ಎನ್ನುವುದರ ಕುರಿತು ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+