ಇಬ್ಬರ ನಡುವಿನ ತಿಕ್ಕಾಟದಲ್ಲಿ ಮಣ್ಣು ಪಾಲಾಯ್ತು 1500 ಲೀಟರ್ ಹಾಲು

ಕನಕಪುರ, ನವೆಂಬರ್ 18: ಹಾಲಿನ ಡೈರಿ ಕಾರ್ಯದರ್ಶಿ ಮತ್ತು ಅಧ್ಯಕ್ಷರು ಸೇರಿ ಹಾಲು ಉತ್ಪಾದಕರ ವಿರುದ್ಧ ರಾಜಕೀಯ ಮಾಡಿ ಎರಡು ದಿನಗಳ ಕಾಲ ಹಾಲನ್ನು ಡೈರಿಗೆ ಹಾಕಿಸಿಕೊಳ್ಳದೇ ಸರಿಸುಮಾರು 1500 ಲೀಟರ್ ಹಾಲನ್ನು ಮಣ್ಣುಪಾಲು ಮಾಡಿರುವ ಘಟನೆ ಅಗರ ಗ್ರಾಮದಲ್ಲಿ ನಡೆದಿದೆ.

ಕಳೆದ ಎರಡು ದಿನಗಳಿಂದ ಹಾಲಿನ ಡೈರಿಗೆ ಬೀಗ ಹಾಕಿ ಗ್ರಾಮಸ್ಥರು ತಂದಿದ್ದ ಹಾಲನ್ನು ನಿರಾಕರಿಸಿದ ಡೈರಿ ವ್ಯವಸ್ಥಾಪಕನ ಕ್ರಮ ಖಂಡಿಸಿ ಇಂದು ಗ್ರಾಮದ ಜನರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅಗರ ಗ್ರಾಮದ ಹಾಲಿನ ಡೈರಿ ಕಾರ್ಯದರ್ಶಿ ವೆಂಕಟಾಚಲಾ ಹಾಗೂ ಡೈರಿ ಅಧ್ಯಕ್ಷ ಕೆಂಪೇಗೌಡ ಎಂಬುವವರು ಎರಡು ದಿನಗಳಿಂದ ಹಾಲು ಉತ್ಪಾದಕರು ತಂದಿದ್ದ ಹಾಲನ್ನು ಹಾಕಿಸಿಕೊಳ್ಳದೇ ಸರಿ ಸುಮಾರು 1500 ಲೀಟರ್‌ಗೂ ಹೆಚ್ಚು ಹಾಲನ್ನು ಮಣ್ಣುಪಾಲು ಮಾಡಿದ್ದನ್ನು ರೈತ ಸಂಘಗಳು ತೀವ್ರವಾಗಿ ಖಂಡಿಸಿದ ನಂತರ ಸಂಜೆ ಹಾಲನ್ನು ಹಾಕಿಸಿಕೊಂಡಿದ್ದರು.

1500 Liters Of Milk Wasted In Fight Between Two In Ramanagar

ಆದರೆ ಮುಂದೆ ಇದೇ ಸಮಸ್ಯೆ ಮತ್ತೆ ಎದುರಾಗಬಾರದು ಎಂದು ಎಚ್ಚರಿಸುವಂತೆ ಇಂದು ಗ್ರಾಮದ ಜನರು ಹಾಗೂ ಹಾಲು ಉತ್ಪಾದಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ವಿಜಯ್‌ ಅವರಿಗೆ ಈ ಕೂಡಲೇ ತನಿಖೆ ನಡೆಸಬೇಕೆಂದು ಮನವಿ ಮಾಡಿದರು. ಹಾಗೆಯೇ ಎರಡು ದಿನಗಳಲ್ಲಿ ಹಾಲನ್ನು ಡೈರಿಗೆ ಹಾಕಿಸಿಕೊಳ್ಳದೇ ವ್ಯರ್ಥ ಮಾಡಿರುವುದಕ್ಕೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+