ರಾಯಚೂರು: ದಲಿತನೆಂಬ ಕಾರಣಕ್ಕೆ ಯುವಕನಿಗೆ ಸರ್ಕಾರಿ ಕೆಲಸ ಸಿಗ್ತಿಲ್ಲ!

ರಾಯಚೂರು, ಜುಲೈ.18: ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದ್ದು, ದಲಿತನೆಂಬ ಕಾರಣಕ್ಕೆ ನೀರಗಂಟಿ(ವಾಟರ್​ ಮ್ಯಾನ್​​) ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ವಿಳಂಬ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಲಿಂಗಸುಗೂರು ತಾಲೂಕಿನ ಮಾವಿನಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ನೀರಗಂಟಿ(ವಾಟರ್​ ಮ್ಯಾನ್​​) ಹುದ್ದೆಗೆ ಎಸ್​ಎಸ್​ಎಲ್​​ಸಿ ಆಧಾರದ ಮೇಲೆ ಅರ್ಜಿ ಕರೆಯಲಾಗಿತ್ತು.

13 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ದಲಿತ ಸಮುದಾಯದ ಹುಲಗಪ್ಪ ಎಂಬ ಯುವಕ ಅತಿ ಹೆಚ್ಚು ಅಂಕ ಪಡೆದಿದ್ದಾನೆ. ಮೆರಿಟ್​ ಆಧಾರದ ಮೇಲೆ ದಲಿತ ಯುವಕ ಹುಲಗಪ್ಪ ನೇಮಕಾತಿ ಆಗಬೇಕಿತ್ತು.

young man is not getting government job for reason of dalith

ಆದರೆ ಅಸ್ಪೃಶ್ಯನೆಂಬ ಕಾರಣಕ್ಕೆ ಆತನನ್ನು ನೇಮಕಾತಿ ಮಾಡಿಕೊಂಡಿಲ್ಲ. ದಲಿತ ಯುವಕ ಬಿಡುವ ನೀರನ್ನು ಕುಡಿಯಲು ಆಗಲ್ಲ ಎಂದು ನೇಮಕಾತಿಯನ್ನು ಮುಂದೂಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ದಲಿತ ಯುವಕ ಹುಲಗಪ್ಪ ಸರ್ಕಾರಿ ಕಚೇರಿಗಳಿಗೆ ಅಲೆದು ಹೈರಾಣಾಗಿದ್ದಾನೆ.

young man is not getting government job for reason of dalith

ರೈಲ್ವೆ ಇಲಾಖೆ ದಲಿತರಿಗೆ ಅನ್ಯಾಯ ಮಾಡುತ್ತಿದೆ, ದಲಿತರೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದಲಿತ ಮುಖಂಡರು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಗಮನ ಸೆಳೆಯಲು ಪ್ರಯತ್ನಿಸಿದ್ದರು.

young man is not getting government job for reason of dalith

ರೈಲ್ವೆ ನೇಮಕ ವಿಚಾರವೂ ಸೇರಿದಂತೆ ದಲಿತ ಮುಖಂಡರ ಪ್ರಶ್ನೆಗಳಿಗೆ ಅಮಿತ್‌ ಶಾ ನೀಡಿದ ಉತ್ತರಕ್ಕೆ ದಲಿತರಿಂದ ಧಿಕ್ಕಾರದ ಪ್ರತಿಕ್ರಿಯೆ ಸಿಕ್ಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+