ಫೋಟೋ ತೆಗಿತೀನಿ ಅಂತೇಳಿ ಪತಿಯನ್ನೇ ನದಿಗೆ ಬೀಳಿಸಿದ ಪಾಪಿ ಪತ್ನಿ; ವಿಡಿಯೋ ಭಾರೀ ವೈರಲ್
ರಾಯಚೂರು, ಜುಲೈ 12: ಭಾರೀ ಮಳೆ ಮುಂದುವರೆದ ಹಿನ್ನೆಲೆ ರಾಜ್ಯದ ಹಲವೆಡೆ ಹಳ್ಳ-ಕೊಳ್ಳ, ನದಿಗಳು, ಜಲಪಾತಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇಂತಹ ಪ್ರದೇಶಗಳಲ್ಲಿ ಯುವಕ-ಯುವತಿಯರು ರೀಲ್ಸ್ ಮಾಡಿ ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಈ ನಡುವೆಯೇ ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಪತ್ನಿ ತನ್ನ ಪತಿಯನ್ನೇ ನದಿಗೆ ತಳ್ಳಿದ ವಿಚಿತ್ರ ಘಟನೆಯೊಂದು ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆ ಗಂಡ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದಂತಹ ಸುಮಾರು ಘಟನೆಗಳು ನಡೆದಿವೆ. ಆದರೆ, ಇದೀಗ ಫೋಟೋ ಶೂಟ್ ನೆಪದಲ್ಲಿ ಪತ್ನಿಯೇ ತನ್ನ ಪತಿಯನ್ನ ನದಿಗೆ ತಳ್ಳಿದ ಘಟನೆ ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದಿದೆ. ಈ ದೃಶ್ಯ ಕಂಡಂತಹ ಅಲ್ಲಿನ ಸ್ಥಳೀಯರು ತಕ್ಷಣವೇ ಹಗ್ಗಗಳ ಸಹಾಯದಿಂದ ಆತನನ್ನ ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ರಾಯಚೂರಿನ ಶಕ್ತಿನಗರ ನಿವಾಸಿ ತಾತಪ್ಪ ನೀರಿಗೆ ಬಿದ್ದ ಪತಿ ಆಗಿದ್ದು, ಅವರ ಪತ್ನಿ ಗದ್ದೆಮ್ಮ ಅವರೇ ನೀರಿಗೆ ತಳ್ಳಿದವರಾಗಿದ್ದಾರೆ. ನೀರಿಗೆ ಬಿದ್ದ ತಕ್ಷಣ ನದಿಯಲ್ಲಿ ಈಜಿ ಕಲ್ಲು ಬಂಡೆಯ ಮೇಲೆ ನಿಂತು ಯಾರಾದರೂ ಇದ್ದೀರಾ.. ಕಾಪಾಡಿ.. ಕಾಪಾಡಿ ಎಂದು ಕೂಗಾಡಿದ್ದಾನೆ. ಆಗ ಬ್ರಿಡ್ಜ್ ಕಂ ಬ್ಯಾರೇಜ್ ಮಾರ್ಗದಲ್ಲಿ ಹೊರಟಿದ್ದ ಬುಲೆರೋ ವಾಹನದಲ್ಲಿದ್ದವರು ಮತ್ತು ಕೆಬಿಜೆಎನ್‌ಎಲ್ ಸಿಬ್ಬಂದಿ, ಸ್ಥಳೀಯರು ನದಿಗೆ ಹಗ್ಗ ಎಸೆದು ತಾತಪ್ಪ ಅವರನ್ನು ರಕ್ಷಣೆ ಮಾಡಿದ್ದಾರೆ.
ಇನ್ನು ನದಿಯಿಂದ ಹೊರಗೆ ಬಂದ ಪತಿ ತನ್ನ ಪತ್ನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಫೋನ್ ಕರೆ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಪತಿಯ ಆರೋಪವೇನು?: ಯಾದಗಿರಿಯ ಈ ದಂಪತಿಗಳು ಕಳೆದ ಏಪ್ರಿಲ್ 10ರಂದು ವಿವಾಹ ಆಗಿದ್ದರು. ಮದುವೆಯಾಗಿ ಮೂರೇ ತಿಂಗಳಿನಲ್ಲಿ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡು, ಜಗಳ ಆಡುತ್ತಿದ್ದರು. ಆ ಜಗಳವನ್ನೇ ಕಾರಣವಾಗಿಕೊಂಡು ಈ ಕೆಲಸ ಮಾಡಿದ್ದಾಳೆ ಎಂದು ತಾತಪ್ಪ ಆರೋಪ ಮಾಡಿದ್ದಾರೆ.
A newlywed man in #Raichur was allegedly pushed into the River by his wife during a photoshoot near Gurjapur Bridge.He clung to rocks & was rescued by fishermen.The wife claimed it was accidental but husband accused her of a deliberate act.Police are investigating the viral video pic.twitter.com/4Da9x8ShXx
— Yasir Mushtaq (@path2shah) July 12, 2025
ಘಟನೆ ಬಗ್ಗೆ ಮಾತನಾಡಿದ ಪತಿ ತಾತಪ್ಪ, ಪತ್ನಿಯನ್ನು ನಂಬಿ ಫೋಟೋ ತೆಗೆಸಿಕೊಳ್ಳಲು ನಿಂತುಕೊಂಡಿದ್ದೆ. ಆದರೆ ಆಕೆ ನನ್ನನ್ನು ನದಿಗೆ ತಳ್ಳಿದಳು ಎಂದು ತಾತಪ್ಪ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಪತ್ನಿ ನಾನು ಅವರನ್ನು ತಳ್ಳಿಲ್ಲ. ಅವರೇ ಕಾಲು ಜಾರಿ ನದಿಗೆ ಬಿದ್ದರು ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ. ಸದ್ಯ ಈ ಪ್ರಕರಣ ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ಹಿಂದೆಯೂ ಸಹ ಸಾಕಷ್ಟು ನಡೆದಿವೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೆಚ್ಚಾಗಿ ಇಂತಹ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಯಾವುದೋ ವಿಚಾರಕ್ಕೆ ಗಂಡ-ಹೆಂಡತಿ ಜಗಳ ಮಾಡಿಕೊಂಡು ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆಗಳು ನಡೆದಿವೆ. ಇನ್ನೂ ರಾಯಚೂರಿನಲ್ಲಿ ನಡೆದಿರುವ ಈ ವಿಚಿತ್ರ ಘಟನೆಗೆ ನಿಖರ ಕಾರಣ ಏನೆಂದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications