ಕೃಷ್ಣಾ ನದಿಯಲ್ಲಿ ಪತ್ತೆಯಾದ ಕೃಷ್ಣದೇವರಾಯನ ಕಾಲದ ವಿಗ್ರಹಗಳ ಬಗ್ಗೆ ಇತಿಹಾಸಕಾರರು ಹೇಳೋದೇನು?
ರಾಯಚೂರು ಫೆಬ್ರವರಿ 6: ರಾಯಚೂರು ಜಿಲ್ಲೆಯ ತೆಲಂಗಾಣ ಗಡಿಭಾಗದ ಕೃಷ್ಣಾನದಿಯಲ್ಲಿ ದೊರೆತ ವಿಷ್ಣುವಿನ ವಿಗ್ರಹಕ್ಕೆ ಸಂಬಂಧಿಸಿದಂತೆ ಅನೇಕ ಕುತೂಹಲಕಾರಿ ಅಂಶಗಳು ಹೊರಬರುತ್ತಿವೆ. ಈ ಹಳೇಕಾಲದ ವಿಗ್ರಹಗಳನ್ನು ಕಂಡು ಸಂಶೋಧನಾಕಾರರು ಮತ್ತು ಇತಿಹಾಸಕಾರರು ಸಂಸತ ವ್ಯಕ್ತಪಡಿಸಿದ್ದಾರೆ.
ಕೃಷ್ಣಾ ನದಿಯಲ್ಲಿ ದೊರೆತ ವಿಷ್ಣು ಮತ್ತು ಈಶ್ವರ ಲಿಂಗ 12 ರಿಂದ 15 ನೇ ಶತಮಾನದ ವಿಗ್ರಹಗಳು ಎಂದು ಇತಿಹಾಸಕಾರರು ಅಂದಾಜಿಸಿದ್ದು, ಈಗ ದೊರೆತ ವಿಗ್ರಹಗಳು ರಾಣಿ ರುದ್ರಮ್ಮ ದೇವಿ ಹಾಗೂ ಶ್ರೀಕೃಷ್ಣದೇವರಾಯನ ಆಳ್ವಿಕೆ ವೇಳೆಯ ವಿಗ್ರಹಗಳು ಎಂದು ಇತಿಹಾಸಕಾರರು ಊಹಿಸಿದ್ದಾರೆ.

ಆ ಕಾಲದಲ್ಲಿ ರಾಣಿ ರುದ್ರಮ್ಮ ದೇವಿ ಶಿವನ ಆರಾಧಕಿಯಾಗಿದ್ದರು, ತೌಳವ ವಂಶದ ಅರಸ ಶ್ರೀಕೃಷ್ಣ ದೇವರಾಯ ವಿಷ್ಣುವಿನ ಆರಾಧಕನಾಗಿದ್ದರು. ಹೀಗಾಗಿ ಕೃಷ್ಣಾ ನದಿಯಲ್ಲಿ ದೊರೆತ ವಿಗ್ರಹಗಳು ಆ ವೇಳೆ ಕೃಷ್ಣದೇವರಾಯ ಸ್ಥಾಪಿಸಿದ ವಿಗ್ರಹಗಳು ಇರಬಹುದು ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.
ತನ್ನ ಆಳ್ವಿಕೆಯ ಕಾಲದಲ್ಲಿ ವಿಜಯನಗರದ ಅರಸ ಶ್ರೀಕೃಷ್ಣ ದೇವರಾಯ ವಿಜಯಪುರದ ಆದಿಲ್ ಶಾಹಿಗಳನ್ನ ಹಿಮ್ಮೆಟ್ಟಿಸಿ ವಿಜಯನಗರದ ಸಾಮ್ರಾಜ್ಯ ಮರುವಿಸ್ತರಣೆ ಮಾಡಿದ್ದ. ಇದಕ್ಕೂ ಮುನ್ನ ಶ್ರೀಕೃಷ್ಣ ದೇವರಾಯನ ತಂದೆಯಿಂದ ಆದಿಲ್‌ಶಾಹಿಗಳು ಸಾಮ್ರಾಜ್ಯವನ್ನು ಕಸಿದಿದ್ದರು. ನಂತರ ವಿಜಯಪುರದ ಆದಿಲ್‌ಶಾಹಿಗಳನ್ನ ಸೋಲಿಸಿ ರಾಯಚೂರನ್ನು ಮರಳಿ ಪಡೆಯುವಂತೆ ಶ್ರೀಕೃಷ್ಣ ದೇವರಾಯನಿಗೆ ತಂದೆ ಹೇಳಿದ್ದರು.
ತಂದೆಯ ಮಾತಿನಂತೆ 1275ರಲ್ಲಿ ಆದಿಲ್ ಶಾಹಿಗಳನ್ನು ಹಿಮ್ಮೆಟ್ಟಿಸಿ ರಾಯಚೂರನ್ನು ಶ್ರೀ ಕೃಷ್ಣದೇವರಾಯ ವಾಪಸ್ ಪಡೆದಿದ್ದ ಎಂದು ಇತಿಹಾಸಕಾರರು ಇತಿಹಾಸವನ್ನು ಮೆಲುಕು ಹಾಕಿದ್ದಾರೆ. ಹೀಗಾಗಿ ತುಳುವ ದೊರೆ ಶ್ರೀ ಕೃಷ್ಣ ದೇವರಾಯ ವಿಷ್ಣುವಿನ ಆರಾಧಕನಾಗಿದ್ದರಿಂದ ನದಿಯಲ್ಲಿ ದೊರೆತ ವಿಷ್ಣುವಿನ ವಿಗ್ರಹ ಆ ಕಾಲಘಟ್ಟದವು ಎಂದು ಸಂಶೋಧನಾಕಾರರು ಅಂದಾಜಿಸಿದ್ದಾರೆ.

ಹಿರಿಯ ಸಾಹಿತಿ, ಇತಿಹಾಸ ಸಂಶೋಧನಾಕಾರ ವೀರಹನುಮಾನ್, ಕೃಷ್ಣ ನದಿಯಲ್ಲಿ ದೊರೆತ ವಿಷ್ಣುವಿನ ವಿಗ್ರಹ ನಮ್ಮ ಭಾರತದ ಸಂಸ್ಕೃತಿಯ ಪ್ರತೀಕ. ಅಯೋಧ್ಯೆಯ ಬಾಲರಾಮನ ವಿಗ್ರಹ ಹಾಗೂ ಇಂದು ದೊರೆತ ವಿಷ್ಣುವಿನ ವಿಗ್ರಹ ಎರಡೂ ದಶಾವತಾರಗಳನ್ನು ಒಳಗೊಂಡಿವೆ. ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ ಸ್ಥಾಪನೆಯಾದ ಬೆನ್ನಲ್ಲೇ ರಾಯಚೂರಿನ ಕೃಷ್ಣಾ ನದಿಯಲ್ಲಿ ವಿಷ್ಣು ವಿಗ್ರಹ ದೊರೆತಿರುವುದು ಕಾಕತಾಳೀಯವಾದರೂ ಸತ್ಯ.
12 ರಿಂದ 15ನೇ ಶತಮಾನದ ಈ ವಿಗ್ರಹ ಪ್ರವಾಹದ ಹೊಡೆತಕ್ಕೆ ಸಿಲುಕಿರಬಹುದು, ವಿರೋಧಿಗಳಿಂದ ದಾಳಿಗೊಳಗಾಗಿರುವುದಕ್ಕೆ ಯಾವುದೃ ಪುರಾವೆಗಳಿಲ್ಲ. ಸಂಶೋಧನೆಯಿಂದ ಮಾತ್ರ ಇದು ಹೊರ ಬರಬೇಕಿದೆ ಎಂದು ಹೇಳಿದ್ದಾರೆ. ರಾಯಚೂರು ವಿ.ವಿ. ಇತಿಹಾಸ ಮತ್ತು ಪುರಾತತ್ವ ವಿಭಾಗದ ಉಪನ್ಯಾಸಕಿ ಡಾ.ಪದ್ಮಜಾ ದೇಸಾಯಿ ಮಾಹಿತಿ ನೀಡಿದ್ದು, ನದಿಯಲ್ಲಿ ದೊರೆತ ವಿಗ್ರಹ 11 ಶತಮಾನಕ್ಕೆ ಸೇರಿದ ವಿಷ್ಣುವಿನ ವಿಗ್ರಹ. ಅದರಲ್ಲಿ ವಿಭಾಗ ಮಾಡಿದಾಗ ಅದನ್ನು ವೆಂಕಟೇಶನ ಶಿಲ್ಪ ಎಂದು ಗುರುತಿಸಬಹುದು.
ಮುಸ್ಲಿಂ ರಾಜರಾದ ಶಾಹಿ ಅಥವಾ ಬಹುಮನಿ ಸುಲ್ತಾನರ ಆಳ್ವಿಕೆ ಕಾಲದಲ್ಲಿ ದಾಳಿಗೊಳಗಾದ ವಿಗ್ರಹಗಳು ಎಂಬ ಅನುಮಾನ ಇದೆ. ಪ್ರಭಾವಳಿಯಲ್ಲಿ ಈ ವಿಗ್ರಹವನ್ನು ದಶಾವತಾರದಲ್ಲಿ ಕೆತ್ತಲಾಗಿದೆ. ನಂತರದಲ್ಲಿ ವಿಷ್ಣುವಿನ ನಿಂತ ಭಂಗಿಯಲ್ಲಿ, ಯಾವಾಗಲೂ ವೆಂಕಟೇಶನ ಶಿಲ್ಪವನ್ನು ಪ್ರತಿಮಾ ಲಕ್ಷಣದ ಮೂಲಕ ತೋರಿಸಬೇಕಾದರೆ, ನಿಂತ ಭಂಗಿಯಲ್ಲಿ ಸಮಪಾದ ಭಂಗಿಯಲ್ಲಿ ದೊರೆತಿದೆ ಎಂದು ಹೇಳಿದ್ದಾರೆ.\

ಅಲ್ಲದೇ, ಈ ವಿಗ್ರಹಗಳು ನದಿಯಲ್ಲಿ ದೊರೆತಿರುವುದಕ್ಕೆ ಕಾರಣ ಶಾಹಿ ಮನೆತನಗಳ ದಾಳಿ ಅಥವಾ ಯಾವುದೇ ಒಂದು ದೇಗುಲದ ಗರ್ಭಗುಡಿಯ ಮೂಲ ಮೂರ್ತಿ ಭಗ್ನವಾದರೆ ನೀರಿಗೆ ಬಿಟ್ಟಿರುವ ಸಾಧ್ಯತೆ ಇರಬಹುದು. ಆದರೆ ಕೃಷ್ಣಾ ನದಿಯಲ್ಲಿ ದೊರೆತ ಈ ಮೂರ್ತಿ ಪ್ರತಿಮಾ ಲಕ್ಷಣ ಹೊಂದಿದೆ ಎಂದು ಹೇಳಿದ್ದಾರೆ.












Click it and Unblock the Notifications