ಮಸ್ಕಿಯಲ್ಲಿ ಬಿಜೆಪಿಗೆ ಸೋಲು: ಆದರೂ, ಸಿಎಂ ಬಿಎಸ್ವೈಗೆ ನಿರಾಳತೆ!
ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿದ್ದ ಬಾಂಬೆ ಟೀಂನ ಮುಖಂಡರಲ್ಲೊಬ್ಬರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಮಸ್ಕಿ ಕ್ಷೇತ್ರದಲ್ಲಿ ಸೋಲಾಗಿದೆ. ಯಡಿಯೂರಪ್ಪನವರ ಪುತ್ರ, ಕ್ಷೇತ್ರದ ಉಸ್ತುವಾರಿಯಾಗಿದ್ದ ವಿಜಯೇಂದ್ರ ಅವರ ಗೇಂ ಪ್ಲ್ಯಾನ್ ಈ ಬಾರಿ ಕೆಲಸ ಮಾಡಲಿಲ್ಲ.
ಮಸ್ಕಿಯಲ್ಲಿ ಇದುವರೆಗಿನ ಮೂರೂ ಚುನಾವಣೆಯಲ್ಲಿ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ಸಿನ ಅಭ್ಯರ್ಥಿ ಬಸನಗೌಡ ತುರ್ವಿಹಾಳ ವಿರುದ್ದ ಪರಾಭವಗೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಇದೇ ತುರ್ವಿಹಾಳ ವಿರುದ್ದ ಪ್ರತಾಪ್ ಗೌಡ್ರು ಕೇವಲ 213 ಮತಗಳ ಅಂತರದ ಗೆಲುವು ಸಾಧಿಸಿದ್ದರು.
ಮಸ್ಕಿಯಲ್ಲಿ ಈ ಬಾರಿ ಬಿಜೆಪಿಗೆ ಸೋಲಾಗುವ ಮೂಲಕ, ಆಪರೇಶನ್ ಕಮಲಕ್ಕೆ ಮತದಾರ ಪಾಠ ಕಲಿಸಿದ್ದಾನೆ ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ. ಫಲಿತಾಂಶ ಬರುವ ಮುನ್ನವೇ ಮತ ಎಣಿಕೆ ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ಹೊರ ನಡೆದಿದ್ದಾರೆ.
"ನನಗೆ ಸೋಲಾಗುವುದಿಲ್ಲ ಎಂದೇ ಬಾವಿಸಿದ್ದೆ, ಇನ್ನೂ ಎರಡು ವರ್ಷ ನಮ್ಮ ಪಕ್ಷದ ಸರಕಾರ ಅಧಿಕಾರದಲ್ಲಿ ಇರುತ್ತೆ. ಸೋತೆ ಎಂದು ಕ್ಷೇತ್ರವನ್ನು ನಿರ್ಲ್ಯಕ್ಷ ಮಾಡುವುದಿಲ್ಲ" ಎಂದು ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ. ಮಸ್ಕಿಯಲ್ಲಿ ಸೋತರೂ ಪಕ್ಷಕ್ಕೆ, ಬಿಎಸ್ವೈಗೆ ನಿರಾಳತೆ.

ಎಂ.ಟಿ.ಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಬಿಎಸ್ವೈ ಹರಸಾಹಸ
ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿದ ಮುಖಂಡರಿಗೆ ಸಚಿವ ಸ್ಥಾನ ನೀಡುವಲ್ಲಿ ಯಡಿಯೂರಪ್ಪ ಸುಸ್ತಾಗಿ ಹೋಗಿದ್ದರು. ಎಂ.ಟಿ.ಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಬಿಎಸ್ವೈ ಹರಸಾಹಸವನ್ನೇ ಪಟ್ಟಿದ್ದರು. ಈಗ, ಪ್ರತಾಪ್ ಗೌಡ ಪಾಟೀಲ್ ಗೆದ್ದಿದ್ದರೆ ಪಕ್ಷದಲ್ಲಿ ಅವರಿಗೂ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಎದುರಾಗುತ್ತಿತ್ತು.

ಮಸ್ಕಿ ಸೋಲು, ಯಡಿಯೂರಪ್ಪನವರಿಗೆ ಅಷ್ಟೇನೂ ತಲೆನೋವು ಪಡುವ ವಿಚಾರವಲ್ಲ
ಹೈಕಮಾಂಡ್ ನಿಂದ ಯಾವುದೇ ವಿಚಾರಕ್ಕೂ ಅನುಮತಿ ಸಿಗುವುದು ಯಡಿಯೂರಪ್ಪನವರಿಗೆ ಸಿಗುವುದು ಕಷ್ಟವಾಗಿರುವ ಈ ಸಮಯದಲ್ಲಿ ಪ್ರತಾಪ್ ಗೌಡ ಪಾಟೀಲ್ ಸೋಲು, ಯಡಿಯೂರಪ್ಪನವರಿಗೆ ಅಷ್ಟೇನೂ ತಲೆನೋವು ಪಡುವ ವಿಚಾರ ಅಲ್ಲ ಎಂದೇ ಹೇಳಬಹುದಾಗಿದೆ. ಯಾಕೆಂದರೆ, ಕೇಂದ್ರದಿಂದ ಬರುವ ಅನುದಾನದಿಂದ ಹಿಡಿದು, ಪಕ್ಷಕ್ಕೆ ಸಂಬಂಧಿಸಿದ ವಿಚಾರದಲ್ಲೂ ಬಿಎಸ್ವೈಗೆ ವರಿಷ್ಠರ ಸಹಕಾರ ಅಷ್ಟಕಷ್ಟೇ..

ಹುಣಸೂರಿನಿಂದ ಎಚ್.ವಿಶ್ವನಾಥ್ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಸೋತಿದ್ದರು
ಆದರೂ, ಹುಣಸೂರಿನಿಂದ ಎಚ್.ವಿಶ್ವನಾಥ್ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಸೋತಿದ್ದರೂ, ಪರಿಷತ್ ಸದಸ್ಯರನ್ನಾಗಿ ಮಾಡಲು ಬಿಎಸ್ವೈ ದಂಬಾಲು ಬಿದ್ದಿದ್ದರು. ಕೊನೆಗೆ, ಸಾಹಿತ್ಯ ಕ್ಷೇತ್ರದ ಕೋಟಾದಿಂದ ಅವರನ್ನು ಸದಸ್ಯರನ್ನಾಗಿ ಮಾಡಲಾಯಿತು. ಇದಾದ ಮೇಲೆ, ಸಚಿವ ಸ್ಥಾನ ಮಾಡುವಂತೆ ಸಿಎಂ ಹಿಂದೆ ವಿಶ್ವನಾಥ್ ಸುತ್ತುತ್ತಿದ್ದರೂ, ಬಿಎಸ್ವೈ ಇದಕ್ಕೆ ಸೊಪ್ಪು ಹಾಕಿರಲಿಲ್ಲ.
Recommended Video

ಮಸ್ಕಿಯಲ್ಲಿನ ಸೋಲು, ಇನ್ನೊಂದು ಸಂಪುಟ ವಿಸ್ತರಣೆ ಸರ್ಕಸ್ ನಿಂದ ಬಚಾವ್
ಹೀಗಾಗಿ, ವಿಶ್ವನಾಥ್ ರೀತಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಕೂಡಾ ಪರಿಷತ್ ಸದಸ್ಯರನ್ನಾಗಿ ಮಾಡಲು ಯಡಿಯೂರಪ್ಪ ಹಿಂದೆ ಬೀಳುತ್ತಾರಾ ಎನ್ನುವುದಕ್ಕೆ ಸದ್ಯಕ್ಕೆ ಉತ್ತರವಿಲ್ಲದಿದ್ದರೂ, ಮಸ್ಕಿಯಲ್ಲಿನ ಸೋಲು, ಇನ್ನೊಂದು ಸಂಪುಟ ವಿಸ್ತರಣೆ ಸರ್ಕಸ್ ನಿಂದ ಬಿಜೆಪಿ ಮತ್ತು ಯಡಿಯೂರಪ್ಪ ಬಚಾವ್ ಆಗಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications