ಬರದಿಂದಾಗಿ ರಾಯಚೂರಲ್ಲಿ ಕುಸಿದ ಭತ್ತ ಇಳುವರಿ: ಇಲ್ಲಿನ ಮಾರುಕಟ್ಟೆಯಲ್ಲಿ ನೆರೆ ರಾಜ್ಯಗಳ ರೈತರದ್ದೇ ಹಾವಳಿ!
ರಾಯಚೂರು ನವೆಂಬರ್ 28: ಜಿಲ್ಲೆಯ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರು ನಗರದ ರಾಜೇಂದ್ರ ಗಂಜ್ ಮಾರುಕಟ್ಟೆಯಲ್ಲಿ ಒಂದೇ ದಿನ ದಾಖಲೆಯ 66 ಸಾವಿರ ಚೀಲ ಭತ್ತ ಮಾರಾಟ ಮಾಡಿ ಉತ್ತಮ ಲಾಭ ಪಡೆದಿದ್ದಾರೆ. ಇಲ್ಲಿನ ಎಪಿಎಂಸಿಗೆ ಕಳೆದೊಂದು ವಾರದಿಂದ ಭತ್ತದ ಆವಕ ಹೆಚ್ಚಿದೆ.
ಜಿಲ್ಲೆಯ ಭತ್ತದ ನಾಡು ಸಿಂಧನೂರು ತಾಲೂಕುವೊಂದರಲ್ಲೇ ಸುಮಾರು 5,600 ಹೆಕ್ಟೇರ್ ಬಿತ್ತನೆಯಾಗಿದೆ. ಕಟಾವಿಗೂ ಮುನ್ನವೇ ಕ್ವಿಂಟಾಲ್‌ಗೆ 3 ರಿಂದ 3,200 ರೂಪಾಯಿ ದರವಿದೆ. ಎಪಿಎಂಸಿಯಲ್ಲಿ 66,145 ಚೀಲ ಮಾರಾಟವಾಗಿ ದಾಖಲೆ ಮೂಡಿಸಿದೆ. ಕಳೆದ ಎರಡ್ಮೂರು ದಿನಗಳಿಂದಲೂ 56 ಸಾವಿರ ಕ್ವಿಂಟಾಲ್ ಆವಕವಾಗಿದೆ.

ಎಪಿಎಂಸಿಯಲ್ಲಿ ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶದ ರೈತರದ್ದೇ ಪಾರುಪತ್ಯ ಎನ್ನುವಂತಾಗಿದೆ. ಜಿಲ್ಲೆಯ ಸಿಂಧನೂರು, ಸಿರವಾರ, ಮಾನ್ವಿ, ರಾಯಚೂರು ತಾಲೂಕುಗಳಲ್ಲೂ ಅಲ್ಲಲ್ಲಿ ಭತ್ತದ ಕಟಾವು ನಡೆದಿದ್ದು, ಉತ್ತಮ ಬೆಲೆ ಇರುವುದರಿಂದ ಕೆಲವರು ಮಾರಾಟಕ್ಕೆ ಮುಂದಾಗಿದ್ದಾರೆ.
ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಭತ್ತಕ್ಕೆ ಸರಿಯಾದ ದರ ದೊರಕದ ಹಿನ್ನೆಲೆಯಲ್ಲಿ ಅಲ್ಲಿನ ರೈತರು ಇಲ್ಲಿಗೇ ಆಗಮಿಸಿ ಭತ್ತ ಮಾರಾಟ ಮಾಡುವುದು ಕಳೆದ ಹಲವು ವರ್ಷಗಳಿಂದ ನಡೆದುಕೊಂಡೇ ಬಂದಿದೆ. ಈ ಬಾರಿಯಂತೂ ಇಲ್ಲಿ ಇಳುವರಿ ಬಿದ್ದಿರುವ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳ ರೈತರು ತಂದಿರುವ ಭತ್ತ ಬಿಸಿ ದೋಸೆಯಂತೆ ಖರೀದಿಯಾಗಿದ್ದು ಭರಪೂರ ದುಡ್ಡು ದೊರೆತಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸೋನಾ ಮಸೂರಿ ಹಾಗೂ ರಾಜಹಂಸ ಭತ್ತಕ್ಕೆ ಕ್ವಿಂಟಾಲ್‌ಗೆ 1,750 ರೂ. ದರವಿದ್ದರೆ, ಈ ಬಾರಿ ಪ್ರತಿ 75 ಕೆ.ಜಿ. ಭತ್ತಕ್ಕೆ 1,880 ರಿಂದ 2,100 ರೂ ವರೆಗೆ ದರವಿದೆ. ಸಿಂಧನೂರು ಭಾಗದಲ್ಲಿ ಕಳೆದ ವರ್ಷ ಆರ್‌ಎನ್‌ಆರ್ ಕ್ವಿಂಟಾಲ್ ಭತ್ತಕ್ಕೆ 1,800 ರೂ ಇತ್ತು. ಈ ಬಾರಿ 75 ಕೆಜಿಗೆ 2,500 ರೂ ವರೆಗೂ ಮಾರಾಟವಾಗುತ್ತಿದೆ.
ರಾಯಚೂರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಿ ಕೃಷ್ಣ, ಜಿಲ್ಲೆಯಲ್ಲಿ ಈ ಬಾರಿ ಬರಗಾಲದ ಹಿನ್ನೆಲೆ ಅಲ್ಪ ಸ್ವಲ್ಪ ರೈತರು ಮಾತ್ರ ಭತ್ತ ಬೆಳೆದಿದ್ದು, ಕಟಾವು ಹಂತದಲ್ಲಿದೆ. ಆದರೆ, ಆಂಧ್ರ ಹಾಗೂ ತೆಲಂಗಾಣ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮಾರಾಟ ಮಾಡಲು ಜಿಲ್ಲೆಗೆ ಆಗಮಿಸಿ ಕ್ವಿಂಟಾಲ್‌ಗೆ 2,500 ರೂ. ವರೆಗೆ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಇಲ್ಲಿನ ಮಾರುಕಟ್ಟೆಯಲ್ಲಿ ಉತ್ತಮ ದರ ದೊರಕಿದ್ದಕ್ಕಾಗಿ ನೆರೆ ರಾಜ್ಯದ ರೈತ ನರಸಿಂಹಲು ಸಂತಸ ವ್ಯಕ್ತಪಡಿಸಿದ್ದಾರೆ. ''ನಮ್ಮ ರಾಜ್ಯದಲ್ಲಿ ಭತ್ತದ ಬೆಳೆಗೆ ಸರಿಯಾದ ಬೆಲೆ ದೊರೆಯದ ಹಿನ್ನೆಲೆಯಲ್ಲಿ ಕಳೆದ 10 ವರ್ಷದಿಂದ ನಿರಂತರವಾಗಿ ರಾಯಚೂರು ಎಪಿಎಂಸಿಯಲ್ಲಿ ಭತ್ತ ಮಾರಾಟ ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ನಿರೀಕ್ಷೆ ಮೀರಿ ದರ ಸಿಕ್ಕಿರುವುದು ಖುಷಿಯಾಗಿದೆ'' ಎಂದು ತಿಳಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications