ರಾಯಚೂರು: ಮೂಳೆ ಮುರಿತಕ್ಕೆ ಉಚಿತ ಚಿಕಿತ್ಸೆ ನೀಡುವ ನಾಟಿ ವೈದ್ಯ

ರಾಯಚೂರು, ಅಕ್ಟೋಬರ್‌ 16: ಮೂಳೆ ಮುರಿದಾಗ ಖಾಸಗಿ ವೈದ್ಯರ ಬಳಿ ಹೋದರೆ ಲಕ್ಷಾಂತರ ರೂಪಾಯಿ ಹಣ ಪೀಕುತ್ತಾರೆ. ಆದರೆ, ರಾಯಚೂರಿನ ನಾಟಿ ವೈದ್ಯ ಕೇವಲ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಎಲ್ಲರಿಗೆ ನೆರವಾಗುತ್ತಿದ್ದಾರೆ.

ದೇಹದ ಯಾವುದೇ ಭಾಗದ ಮೂಳೆ ಮುರಿದರೂ, ರಾಯಚೂರಿನ ಈ ನಾಟಿ ವೈದ್ಯರು ಕೇವಲ ಮೂರು-ನಾಲ್ಕು ವಾರಗಳಲ್ಲಿ ಸರಳ ಚಿಕಿತ್ಸೆ ಮೂಲಕ ಗುಣಮುಖರನ್ನಾಗಿ ಮಾಡುತ್ತಾರೆ. ಇವರ ಚಿಕಿತ್ಸೆಯಿಂದ ಅನೇಕರು ಗುಣಮುಖರಾಗಿದ್ದಾರೆ.

ಆಯುರ್ವೇದ ಚಿಕಿತ್ಸೆ ಎನ್ನುವುದು ಕೆಲವೇ ಕೆಲ ವ್ಯಕ್ತಿಗಳಿಗೆ ತಿಳಿದಿರುತ್ತದೆ. ಈ ರೀತಿ ತಮ್ಮ ಹಿರೀಕರಿಂದ ಕಲಿತ ವಿದ್ಯೆಯನ್ನು ಉರುಕುಂದಪ್ಪ ಬಡಿಗೇರ್ ಎನ್ನುವವರು ಬಡವರಿಗೆ ಸಹಾಯವಾಗಲಿ ಎಂದು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.

ಮೂಳೆ ಮುರಿತಕ್ಕೆ ಉಚಿತ ಚಿಕಿತ್ಸೆ

ಮೂಳೆ ಮುರಿತಕ್ಕೆ ಉಚಿತ ಚಿಕಿತ್ಸೆ

ರಾಯಚೂರು ತಾಲೂಕಿನ ಸಗಮಕುಂಟ ಗ್ರಾಮದ ಉರುಕುಂದಪ್ಪ ಬಡಿಗೇರ್ ಎಂಬುವರು ತಮ್ಮ ಉಚಿತ ಸೇವೆಯಿಂದ ಹೆಸರುವಾಸಿಯಾಗಿದ್ದಾರೆ. ಬಡವರ ಪಾಲಿಗೆ ದೇವರಂತೆ ಕೆಲಸ ಮಾಡುತ್ತಿರುವ ಉರುಕುಂದಪ್ಪ ಬಡಿಗೇರ್, ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುತ್ತಾರೆ. ಗಿಡಮೂಲಿಕೆಗಳಿಂದ ಔಷಧ ನೀಡುವ ಇವರು, ನಿಗದಿತ ಸಮಯದಲ್ಲೇ ಮೂಳೆ ಮುರಿತವನ್ನು ಗುಣ ಮಾಡುತ್ತಾರೆ. ತಮಗೆ ಪಾರಂಪರಿಕವಾಗಿ ಬಂದ ಈ ಕಲೆಯನ್ನು ಜನರಿಗೆ ಉಪಯೋಗವಾಗಲು ಉರುಕುಂದಪ್ಪ ಬಡಿಗೇರ್ ಬಳಸಿಕೊಳ್ಳುತ್ತಿದ್ದಾರೆ.

ವೃತ್ತಿಯಲ್ಲಿ ಬಡಗಿ ಪ್ರವೃತ್ತಿಯಲ್ಲಿ ನಾಟಿ ವೈದ್ಯ

ವೃತ್ತಿಯಲ್ಲಿ ಬಡಗಿ ಪ್ರವೃತ್ತಿಯಲ್ಲಿ ನಾಟಿ ವೈದ್ಯ

ಉರುಕುಂದಪ್ಪ ಬಡಿಗೇರ್ ಇವರು ವೃತ್ತಿಯಲ್ಲಿ ಬಡಗಿಯಾಗಿದ್ದಾರೆ. ಜೊತೆಗೆ ಕಳೆದ ಮೂವತ್ತು ವರ್ಷಗಳಿಂದ ವಂಶ ಪರಂಪರಾಗತವಾಗಿ ನಾಟಿ ಚಿಕಿತ್ಸೆ ನೀಡುತ್ತಿದ್ದಾರೆ. ತಮ್ಮ ಚಿಕಿತ್ಸೆ ಮೂಲಕ ಉರುಕುಂದಪ್ಪ ಬಡಿಗೇರ್ ರಾಯಚೂರು ಸೇರಿದಂತೆ ತೆಲಂಗಾಣ ರಾಜ್ಯದ ವಿವಿಧ ಗ್ರಾಮಗಳ ಜನರಿಗೆ ಸಂಜೀವಿನಿಯಾಗಿದ್ದಾರೆ. ಬೇರೆ ಬೇರೆ ಊರುಗಳಿಂದ ಇವರ ಚಿಕಿತ್ಸೆಗಾಗಿ ಜನ ಹುಡುಕಿಕೊಂಡು ಬರುತ್ತಾರೆ.

ಉರುಕುಂದಪ್ಪ ಬಡಿಗೇರ್ ಕೈಗುಣಕ್ಕೆ ಜನ ಮೆಚ್ಚುಗೆ

ಉರುಕುಂದಪ್ಪ ಬಡಿಗೇರ್ ಕೈಗುಣಕ್ಕೆ ಜನ ಮೆಚ್ಚುಗೆ

ಉರುಕುಂದಪ್ಪ ಬಡಿಗೇರ್ ಅವರು ಕೇವಲ ಎಣ್ಣೆಯಿಂದ ಮಸಾಜ್ ಮಾಡಿ ಮುರಿದಂತಹ ಕೈ ಕಾಲುಗಳಿಗೆ ಕೈಕಟ್ಟು ಕಟ್ಟುವುದರ ಮೂಲಕ ಸರಿಪಡಿಸುತ್ತಾರೆ. ಬಳಿಕ ಮೂಳೆ ಮುರಿತ ಪರೀಕ್ಷಿಸಿ, ಮೂಳೆ ಜೋಡಣೆ ಮಾಡುತ್ತಾರೆ. ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರೂ ಇವರ ಬಳಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಉರುಕುಂದಪ್ಪ ಬಡಿಗೇರ್ ಅವರು ತಾವು ಬಳಸುವ ಎಣ್ಣೆಯ ಹಣವನ್ನು ಪಡೆಯದೇ ಜನರಿಗೆ ಚಿಕಿತ್ಸೆ ನೀಡುತ್ತಾರೆ.

ಎಣ್ಣೆ ಮಸಾಜ್‌ನಿಂದಲೇ ಉಳುಕು ಗುಣಮುಖ

ಎಣ್ಣೆ ಮಸಾಜ್‌ನಿಂದಲೇ ಉಳುಕು ಗುಣಮುಖ

ಕೈಕಾಲು ಮುರಿದರೆ, ಉಳುಕಿದರೆ ಎಣ್ಣೆಯಿಂದ ಮಸಾಜ್ ಮಾಡುವಂತಹ ಕೆಲಸದ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ . ಉರುಕುಂದಪ್ಪ ಬಡಿಗೇರ್ ಅವರು ತಮ್ಮ ದೊಡ್ಡಪ್ಪನವರಿಂದ ಈ ಚಿಕಿತ್ಸೆ ನೀಡುವುದನ್ನು ಕಲಿತು ಮುಂದುವರಿಸಿದ್ದಾರೆ. ಇವರು ತಮ್ಮ ಸೇವೆಗೆ ಯಾವುದೇ ಹಣ ಪಡೆಯುವುದಿಲ್ಲ. ಯಾವುದೇ ಔಷದ ಬಳಸದೆ ಕೇವಲ ಎಣ್ಣೆಯಿಂದ ಮಸಾಜ್ ಮಾಡಿ ಮುರಿದಂತಹ ಕೈ ಕಾಲುಗಳಿಗೆ ಕೈಕಟ್ಟು ಕಟ್ಟುವುದರ ಮೂಲಕ ಸರಿಪಡಿಸುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಿಂದ ಅನೇಕ ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಸರಿ ಹೋದಂತಹ ಸಾಕಷ್ಟು ಉದಾಹರಣೆಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+