ರಾಯಚೂರಿನ ಸಂಕ್ಷಿಪ್ತ ಸುದ್ದಿಗಳ ಗುಚ್ಛ

Posted By: Gururaj
Subscribe to Oneindia Kannada

ರಾಯಚೂರು, ಅಕ್ಟೋಬರ್ 25 : ರಾಯಚೂರಿನ ಲಿಂಗಸುಗೂರು ತಾಲೂಕಿನ ಹಟ್ಟಿಕ್ಯಾಂಪ್‌ ನಲ್ಲಿ ಶ್ರೀಗಂಧದ ಮರವನ್ನು ಕಳ್ಳತನ ಮಾಡಲಾಗಿದೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ರಾತ್ರಿ ಯಂತ್ರದ ಮೂಲಕ ಶ್ರೀಗಂಧದ ಮರವನ್ನು ಕತ್ತರಿಸಲಾಗಿದೆ. ಸುಮಾರು 15 ವರ್ಷಗಳಿಂದ ಈ ಮರವಿತ್ತು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರವಿದಾಗಿದೆ ಎಂದು ಅಂದಾಜಿಸಲಾಗಿದೆ.

Raichur district news, October 25, 2017

ಹೆಣ್ಣು ಶಿಶು ಶವ ಪತ್ತೆ : ರಾಯಚೂರಿನ ತೀನ್ ಕಂದಿಲ್ ವೃತ್ತದ ದರ್ಗಾ ಬಳಿಯ ಚರಂಡಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದೆ. ರಾತ್ರಿ ಶವನ್ನು ತಂದು ಎಸೆದಿರುವ ಸಾಧ್ಯತೆ ಇದೆ. ಸದರ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಶವಪತ್ತೆ : ಲಿಂಗಸೂಗುರು ಪಟ್ಟಣದ ರಿಟೈರ್ಡ ವಿಲೇಜ್ ಅಕೌಟೆಂಟ್ ಚನ್ನಬಸಪ್ಪ ಶವವಾಗಿ ಪತ್ತೆಯಾಗಿದ್ದಾರೆ.
ಮಸ್ಕಿ ಪಟ್ಟಣದ ಸಪ್ತಗಿರಿ ಬಾರ್ ಹಿಂಭಾಗದಲ್ಲಿ ಶವ ಪತ್ತೆಯಾಗಿದೆ. ಕೊಲೆ ಮಾಡಿ ತಂದು ಶವವನ್ನು ಬಿಸಾಡಿರಬಹುದು ಎಂದು ಶಂಕಿಸಲಾಗಿದೆ. ಮಸ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನಿಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sandalwood tree stolen in Lingasugur, Raichur. Raichur district news of October 25, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ