ಖಾಸಗಿಯವರ ಪಾಲಾದ ಆರ್‌ಟಿಪಿಎಸ್, ವೈಟಿಪಿಎಸ್ ವಿದ್ಯುತ್ ಘಟಕಗಳ ಕಲ್ಲಿದ್ದಲು!
ರಾಯಚೂರು ನವೆಂಬರ್ 22: ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಸಂಪೂರ್ಣವಾಗಿ ತಲುಪಬೇಕಾದ ಕಲ್ಲಿದ್ದಲು ಕಳ್ಳ ಮಾರ್ಗದಲ್ಲಿಕಂಡವರ ಪಾಲಾಗುತ್ತಿದೆ. ರಾಯಚೂರು ತಾಲ್ಲೂಕಿನ ಯರಮರಸ್ , ಚಿಕ್ಕಸೂಗೂರು, ಡಿ.ಯದ್ಲಾಪುರ ಮತ್ತು ತೆಲಂಗಾಣ ಗಡಿಭಾಗದ ಕೃಷ್ಣಾ ರೇಲ್ವೆ ಸ್ಟೇಷನ್ ಮಾರ್ಗದ ರಸ್ತೆಯಲ್ಲಿ ರಾಶಿ ರಾಶಿಯಾಗಿ ಕಲ್ಲಿದ್ದಲು ಹಾಕಿರುವ ಗುಡ್ಡೆಗಳು ಕಂಡು ಬರುತ್ತದೆ.
ಪ್ರತಿನಿತ್ಯ ಟನ್‌ಗಟ್ಟಲೇ ಕಲ್ಲಿದ್ದಲು ಖಾಸಗಿಯವರ ಕೈ ಸೇರುತ್ತಿದೆ. ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಇಡೀ ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಸರಬರಾಜು ಮಾಡುತ್ತಿವೆ. ಈಗ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಹಿಂದೆ ಬಿದ್ದಿವೆ. ಇದರ ಹಿಂದೆ ಕಲ್ಲಿದ್ದಲು ಕಳ್ಳಾಟ ನಡೆಯುತ್ತಿರುವುದು ಬಯಲಾಗಿದೆ.

ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಸರಬರಾಜಾಗುವ ಕಲ್ಲಿದ್ದಲನ್ನ ಸಂಪರ್ಣಾವಾಗಿ ಬಳಕೆ ಮಾಡದೆ, ಎಲ್ಲೆಂದರಲ್ಲೇ ಕಲ್ಲಿದ್ದಲು ಗುಡ್ಡೆಗಳು ಹಾಕಿ ಟ್ರಾöಕ್ಟರ್ ಮತ್ತು ಲಾರಿಗಳ ಮೂಲಕ ಬೇರೆಡೆಗೆ ಸಾಗಣೆ ಮಾಡುತ್ತಿರುವುದು ಬಯಲಿಗೆ ಬಂದಿದೆ. ಈ ಕಲ್ಲಿದ್ದಲೇ ಈಗ ನೂರಾರು ಟನ್ ಇದ್ದು, ಲಕ್ಷಾಂತರ ರೂಪಾಯಿ ಗೋಲ್ ಮಾಲ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ವ್ಯಾಗನ್ ಸ್ವಚ್ಛತೆ ಹೆಸರಲ್ಲಿ ಗುತ್ತಿಗೆದಾರ ನೂರಾರು ಟನ್ ಕಲ್ಲಿದ್ದಲು ಎತ್ತುವಳಿ ಮಾಡುತ್ತಿರುವುದರ ಹಿಂದೆ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಅಧಿಕಾರಿಗಳು, ಸಿಬ್ಬಂದಿ ಪಾತ್ರ ಬಯಲಾಗಿದೆ. ರೈಲ್ವೇ ಇಲಾಖೆ ಕಲ್ಲಿದ್ದಲು ಸಾಗಣೆ ಮಾಡುವ ವ್ಯಾಗನಗಳ ಸ್ವಚ್ಚತೆಗಾಗಿ ಗುತ್ತಿಗೆದಾರರಿಗೆ ಟೆಂಡರ್ ಕರೆದಿತ್ತು. ಆಂಧ್ರಪ್ರದೇಶ ರಾಜ್ಯದ ಗುಂತಕಲ್ ಮೂಲದ ಗುತ್ತಿಗೆದಾರನಿಗೆ ಗುತ್ತಿಗೆ ನೀಡಿತ್ತು. ಟೆಂಡರ್‌ನಲ್ಲಿ ಅಳಿದುಳಿದ ಕಲ್ಲಿದ್ದಲು ಹಾಗೂ ಇತರೆ ವಸ್ತುಗಳನ್ನ ಸ್ವಚ್ಛ ಮಾಡಲು ಅನುಮತಿ ನೀಡಲಾಗಿದೆ.

ಆದರೆ ಇಲ್ಲಿ ಸ್ವಚ್ಛತೆ ಹೆಸರಲ್ಲಿ ಗುತ್ತಿಗೆದಾರ ಪ್ರತಿನಿತ್ಯ ಟನ್‌ಗಟ್ಟಲೇ ಗುಣಮಟ್ಟದ ಕಲ್ಲಿದ್ದಲು ಪಡೆಯುತ್ತಿದ್ದಾನೆ. ಸ್ಟಾಕ್ ಯರ್ಡ್ನ ಲ್ಲಿ ನೂರಾರು ಟನ್ ಕಲ್ಲಿದ್ದಲು ಸಂಗ್ರಹವಾಗಿದೆ. ಗುಣಮಟ್ಟದ ಕಲ್ಲಿದ್ದಲನ್ನ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಂಪರ್ಣವ ಬಳಸಿಕೊಳ್ಳದೆ ಹೊರಗಡೆ ಕಳುಹಿಸುತ್ತಿರುವುದು ಅಕ್ರಮದ ಜಾಡು ಕಂಡು ಬಂದಿದೆ. ಈ ಅಕ್ರಮದ ಕಲ್ಲಿದ್ದಲು ಸಾಗಣೆ ಕುರಿತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.
ರಾಜ್ಯ ಸರ್ಕಾರದ ಕ್ರಮ
ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರ ವೈಟಿಪಿಎಸ್‌ಗೆ ಸೇರಿದ ಗುಣಮಟ್ಟದ ಕಲ್ಲಿದ್ದಲು ಕಳ್ಳ ಸಾಗಾಣಿಕೆ ಪ್ರಕರಣವನ್ನು ಇಂಧನ ಸಚಿವ ಕೆಜೆ ಜಾರ್ಜ್ ಗಂಭೀರವಾಗಿ ಪರಿಗಣಿಸಿದ್ದಾರೆ. ವೈಟಿಪಿಎಸ್‌ನ ಅಧಿಕಾರಿಗಳು ಹಾಗೂ ಅಲ್ಲಿನ ಕಲ್ಲಿದ್ದಲು ನಿರ್ವಹಣಾ ಏಜೆನ್ಸಿ, ರೈಲ್ವೇ ಗುತ್ತಿಗೆದಾರ, ರೈಲ್ವೇ ಇಲಾಖೆ ಅಧಿಕಾರಿಗಳು ಎಲ್ಲರ ಪಾತ್ರಗಳು ಇಲ್ಲಿ ಮೇಲ್ನೋಟಕ್ಕೆ ಅನುಮಾನ ಮೂಡಿಸಿವೆ.

ಕಲ್ಲಿದ್ದಲು ತುಂಬಿದ ವ್ಯಾಗನ್‌ಗಳಿಂದಲೇ ಕಲ್ಲಿದ್ದಲು ಕದಿಯುತ್ತಿರುವ ಸಂಶಯವನ್ನು ವ್ಯಕ್ತಪಡಿಸಿ ತಾವು ಪಾರಾಗಲು ವೈಟಿಪಿಎಸ್ ಅಧಿಕಾರಿಗಳು ಮುಂದಾಗಿದ್ದಾರೆ. ತಮ್ಮ ಮೇಲೆ ಬಂದ ಆರೋಪವನ್ನು ಬೇರೆಡೆ ಸುಲಭವಾಗಿ ಎತ್ತಿಹಾಕಲು ವೈಟಿಪಿಎಸ್ ಅಧಿಕಾರಿಗಳು ಮುಂದಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ.
ರೈಲ್ವೇ ಇಲಾಖೆ ಅಧಿಕಾರಿಗಳು ಹಾಗೂ ಖಾಲಿ ವ್ಯಾಗನ್ ಸ್ವಚ್ಚತೆ ಗುತ್ತಿಗೆ ಪಡೆದ ಗುತ್ತಿಗೆದಾರರು ಕೂಡ ಕಲ್ಲಿದ್ದಲು ಕಳ್ಳಾಟದಲ್ಲಿ ಭಾಗಿದಾರರೇ ಎಂಬ ಅನುಮಾನಕ್ಕೂ ಪುಷ್ಠಿ ಸಿಕ್ಕಿದೆ. ವಿದ್ಯುತ್ ಕೇಂದ್ರಕ್ಕೆ ಮಾಹಿತಿ ನೀಡದೇ ಕಲ್ಲಿದ್ದಲು ಸಾಗಣೆ, ಸಂಗ್ರಹ, ಮಾರಾಟಕ್ಕೆ ಗುತ್ತಿಗೆ ನೀಡಿದ್ದು ಒಂದೆಡೆಯಾದರೆ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ ರೈಲ್ವೇ ನಿಲ್ದಾಣ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸದೇ ಕಲ್ಲಿದ್ದಲು ಸಾಗಿಸುತ್ತಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ. ಆದರೆ ಕಲ್ಲಿದ್ದಲು ಕಳ್ಳಾಟದ ನಿಜವಾದ ಕಳ್ಳರು ಯಾರು ಅನ್ನೋದು ಮಾತ್ರ ಸಮಗ್ರ ತನಿಖೆಯ ಬಳಿಕವೇ ಬಯಲಾಗಬೇಕಿದೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿ ಸೂಕ್ತ ಕ್ರಮಕ್ಕೆ ಮುಂದಾಗಿದೆ.












Click it and Unblock the Notifications