Get Updates
Get notified of breaking news, exclusive insights, and must-see stories!

ರಾಯಚೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಬಂಧಿಸಿದ್ದ ಯುವಕ ಸಾವು; ಪಿಎಸ್ ಐ ಅಮಾನತು

ರಾಯಚೂರು, ಸೆಪ್ಟೆಂಬರ್ 16: ಗಣೇಶ ವಿಸರ್ಜನೆ ಸಂದರ್ಭ ಬಂಧಿಸಲಾಗಿದ್ದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಈ ಸಂಬಂಧ ರಾಯಚೂರು ಜಿಲ್ಲೆಯ ಗಬ್ಬೂರು ಪೊಲೀಸ್ ಠಾಣೆ ಪಿಎಸ್ ಐ ಮುದ್ದುರಂಗಸ್ವಾಮಿ ಹಾಗೂ ಇಬ್ಬರು ಕಾನ್‌ ಸ್ಟೆಬಲ್ ಗಳನ್ನು ಅಮಾನತು ಮಾಡಲಾಗಿದೆ.

ಗಣೇಶ ವಿಸರ್ಜನೆ ಸಂದರ್ಭ ಅತಿರೇಕ ವರ್ತನೆ ತೋರಿದ್ದ ಎಂಬ ಕಾರಣಕ್ಕೆ ಶಿವು ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಆತನನ್ನು ರಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಪಿಎಸ್ ಐ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶಿವು ಸಾವನ್ನಪ್ಪಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PSI Suspended For Lockup Death Of Youth In Gabbur

ಶಿವು ಸಾವಿನಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಠಾಣೆ ಮೇಲೆ, ಪಿಎಸ್ ಐ, ಸಿಪಿಐ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿದ್ದರು. ಇದೀಗ ಪಿಎಸ್ ಐ ಮುದ್ದುರಂಗಸ್ವಾಮಿ ಹಾಗೂ ಕಾನ್‌ ಸ್ಟೆಬಲ್ ಗಳಾದ ಬಾಲಪ್ಪ ಮತ್ತು ಪಂಚಮುಖಿ ಎಂಬವರನ್ನು ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ಆದೇಶ ಹೊರಡಿಸಿದ್ದಾರೆ.

PSI Suspended For Lockup Death Of Youth In Gabbur
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+