ಸೇಲ್ ಆಯ್ತು ಕಾಟೇರ ಸಿನಿಮಾ: ಮಾರಾಟವಾಗಿದ್ದು ಜಸ್ಟ್ 40 ರೂಪೀಸ್‌ಗೆ- ದರ್ಶನ್ ಫ್ಯಾನ್ಸ್ ಕೆಂಡಾಮಂಡಲ!

ರಾಯಚೂರು ಜನವರಿ 5: ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡದ ಯುವಕನೊಬ್ಬ 40 ರೂಪಾಯಿಗೆ 'ಕಾಟೇರ' ಸಿನಿಮಾದ ಪೈರಸಿ ಲಿಂಕ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಈ ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅಭಿನಯದ 'ಕಾಟೇರ' ಸಿನಿಮಾವನ್ನು ದಾಸನ ಫ್ಯಾನ್ಸ್​ ಮೆಚ್ಚಿಕೊಂಡಿದ್ದಾರೆ. ಭರ್ಜರಿ ಓಪನಿಂಗ್ ಪಡೆದ ಕಾಟೇರ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಸಾಲು ಸಾಲು ಸಿನಿಮಾ ಸೋತ ಬಳಿಕ ದರ್ಶನ್ ಹಿಟ್ ಸಿನಿಮಾ ನೀಡಿದ ಖುಷಿಯಲ್ಲಿದ್ದಾರೆ. ಕಾಟೇರ ಸಿನಿಮಾದ ನೋಡಿದ ಪ್ರೇಕ್ಷಕರು ಇದು ದರ್ಶನ್​ ದಿ ಬೆಸ್ಟ್ ಸಿನಿಮಾ ಎನ್ನುತ್ತಿದ್ದಾರೆ. ಕಾಟೇರ ಕಥೆ ಪ್ರೇಕ್ಷಕರ ಮನಗೆದ್ದಿದೆ. ​ಬಾಕ್ಸ್​ ಆಫೀಸ್​ನಲ್ಲಿ ಕಾಟೇರ ಕೊಳ್ಳೆ ಹೊಡೆಯುತ್ತಿದ್ದಾನೆ. ಶೀಘ್ರದಲ್ಲೇ ದರ್ಶನ್ ಸಿನಿಮಾ 100 ಕೋಟಿ ಕ್ಲಬ್​ ಸೇರಲಿದೆ.

Piracy link of Kaatera movie sold for 40 rupees!

ನಟ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಪೈರಸಿ ಕಾಟ ಕೂಡ ಶುರುವಾಗಿದೆ. ಕೆಲವು ಕಿಡಿಗೇಡಿಗಳು ಈ ಸಿನಿಮಾದ ಪೈರಸಿ ಕಾಪಿಯನ್ನು ಟಿಲಿಗ್ರಾಂ ಮೂಲಕ ಮಾರಾಟ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಅಂಥವರ ವಿರುದ್ಧ ದೂರು ದಾಖಲಾಗಿದೆ. ರಾಯಚೂರಿನಲ್ಲಿ 'ಕಾಟೇರ' ಚಿತ್ರದ ಪೈರಸಿ ಲಿಂಕ್ ಮಾರಾಟ ಮಾಡುತ್ತಿದ್ದ ಮೌನೇಶ್ ಎಂಬಾತನನ್ನು ಬಂಧಿಸಲಾಗಿದೆ. ಕಿಂಗ್ ಪಿನ್ ಆಗಿರುವ ಉಪೇಂದ್ರ ಎಂಬ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡದ ಮೌನೇಶ್ ಎಂಬ ಯುವಕ 40 ರೂಪಾಯಿಗೆ 'ಕಾಟೇರ' ಸಿನಿಮಾದ ಪೈರಸಿ ಲಿಂಕ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಕಾಪಿ ರೈಟ್ ಆ್ಯಕ್ಟ್ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Piracy link of Kaatera movie sold for 40 rupees!

ಕಾಟೇರ' ಸಿನಿಮಾಗೆ ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಗುರುದೇಶಪಾಂಡೆ ಅವರು ಸಿನಿಮಾ ವಿತರಣೆ ಮಾಡಿದ್ದಾರೆ. ಪೈರಸಿ ಉಂಟಾಗಿದ್ದರಿಂದ ನಿರ್ಮಾಪಕರಿಗೆ ಮತ್ತು ವಿತರಕರಿಗೆ ನಷ್ಟ ಆಗಿದೆ. ಈ ಹಿನ್ನೆಲೆಯಲ್ಲಿ ವಾದಿರಾಜ ಎಂಬುವವರು ದೂರು ದಾಖಲಿಸಿದ್ದಾರೆ. 'ವಾಟ್ಸ್ ಆಪ್' ಮೂಲಕ ಚಾಟ್ ಮಾಡಿ 40 ರೂಪಾಯಿ ಫೋನ್ ಪೇ ಮಾಡಿ ಸಿನಿಮಾದ ಲಿಂಕ್ ಪಡೆದಿದ್ದ ವಾದಿರಾಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತೀಚೆಗೆ 'ಕಾಟೇರ' ಸಿನಿಮಾದ ಸಕ್ಸಸ್ ಮೀಟ್ ನಡೆಯಿತು. ಆ ಸಂದರ್ಭದಲ್ಲಿ ದರ್ಶನ್ ಅವರು ಪೈರಸಿ ಮಾಡುವವರಿಗೆ ಎಚ್ಚರಿಕೆ ನೀಡಿದ್ದರು. ಅದರ ನಡುವೆಯೂ ಪೈರಸಿ ಹಾವಳಿ ಮುಂದುವರಿದಿದೆ. ಇದರಿಂದ ಚಿತ್ರತಂಡಕ್ಕೆ ತೊಂದರೆ ಆಗುತ್ತಿದೆ. 'ಕಾಟೇರ' ಸಿನಿಮಾಗೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆ ಆರಾಧನಾ, ಶ್ರುತಿ, ಕುಮಾರ್ ಗೋವಿಂದ್, ಜಗಪತಿ ಬಾಬು, ವಿನೋದ್ ಆಳ್ವಾ, ವೈಜನಾಥ ಬೀರಾದರ, ಅವಿನಾಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+