ರಾಯಚೂರು ಜಿಲ್ಲೆಗೂ ಕಾಲಿಟ್ಟ ಮದ್ರಾಸ್ ಐ ಸೋಂಕು, ವೈದ್ಯರ ಸಲಹೆಗಳೇನು?, ಇಲ್ಲಿದೆ ವಿವರ
ರಾಯಚೂರು, ಆಗಸ್ಟ್, 2: ಬಿಸಿಲ ನಾಡಲ್ಲಿ ತಂಪು ಆವರಿಸಿದ್ದು, ಗಾಳಿಯಲ್ಲಿ ತೇವಾಂಶ ಹೆಚ್ಚಾಗಿದೆ. ನೆರೆ ಜಿಲ್ಲೆಗಳಲ್ಲಿ ಮಳೆ ಹಾಗೂ ಚಳಿ ಎರಡೂ ಅಧಿಕವಾಗಿ ಇರುವುದರಿಂದ "ಮದ್ರಾಸ್ ಕಣ್ಣು" ಸೋಂಕು ಕಾಣಿಸಿಕೊಂಡಿದೆ. ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತಿರುವ ಈ ಸೋಂಕು ಇದೀಗ ಜಿಲ್ಲೆಗೂ ಕಾಲಿಟ್ಟಿದೆ.
ಕಣ್ಣು ನೋವು, ಕಣ್ಣು ಉರಿ ಉಂಟಾಗಿ ಮಕ್ಕಳು ಹೈರಾಣಾಗಿದ್ದಾರೆ. ಮಕ್ಕಳಿಂದಾಗಿ ಪಾಲಕರಿಗೂ ರೋಗ ಹರಡುತ್ತಿದೆ. ಸಾರಿಗೆ ಬಸ್‌ಗಳಲ್ಲಿ ಸಂಚಾರ, ಸಾರ್ವಜನಿಕ ಸ್ಥಳಗಳಲ್ಲಿನ ಮಾಲಿನ್ಯ, ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳದಿರುವುದು ಸಹ ಸೋಂಕು ಹರಡಲು ಪ್ರಮುಖ ಕಾರಣವಾಗಿದೆ. ಇದರಿಂದ ಪೋಷಕರು ಮಕ್ಕಳನ್ನು ಆಸ್ಪತ್ರೆಗಳಿಗೆ ಕರೆತರುತ್ತಲೇ ಇದ್ದಾರೆ. ಮಳೆಗಾಲದಲ್ಲಿ ಕೆಮ್ಮು, ಶೀತ, ಜ್ವರ ಸಾಮಾನ್ಯ. ಆದರೆ ಆಸ್ಪತ್ರೆಗೆ ಬರುವ ಶೇಕಡಾ 75ರಷ್ಟು ರೋಗಿಗಳು ನೇತ್ರ ಸೋಂಕಿನಿಂದ ಬಳಲುತ್ತಿದ್ದಾರೆ.

"ರಾಯಚೂರು ಹಾಗೂ ಲಿಂಗಸುಗೂರು ತಾಲೂಕು ಆಸ್ಪತ್ರೆಗಳಲ್ಲಿ ನೇತ್ರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ತಾಲೂಕು ಆಸ್ಪತ್ರೆಗಳಿಗೆ ನಿತ್ಯ ಕನಿಷ್ಠ 15 ಕೆಂಗಣ್ಣು ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಿದ್ದಾರೆ. ಮುನ್ನೆಚ್ಚರಿಕೆ ವಹಿಸಿದರೆ ಸೋಂಕು ಹರಡುವುದನ್ನು ನಿಯಂತ್ರಿಸಬಹುದು," ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಂದ್ರ ಬಾಬು ಹೇಳಿದರು.
ಬೆಂಗಳೂರು, ಮಂಗಳೂರು ಹಾಗೂ ಕಲಬುರಗಿ ಜಿಲ್ಲೆಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಬಂದು ಹೋಗುತ್ತಾರೆ. ಸ್ವಚ್ಛತೆ ಕೊರತೆ ಹಾಗೂ ಕಣ್ಣು ತಿಕ್ಕಿಕೊಂಡು ಬಸ್‌ಗಳಲ್ಲಿನ ಆಸನ, ಕಿಟಕಿ, ಬಾಗಿಲ ಹಿಡಿಕೆ ಹಿಡಿಯುತ್ತಾರೆ. ಇನ್ನೊಬ್ಬ ವ್ಯಕ್ತಿ ಅವುಗಳನ್ನು ಮುಟ್ಟಿದ ನಂತರ ಸಹಜವಾಗಿ ಸೋಂಕು ಹರಡುತ್ತಿದೆ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸಲಹೆ ನೀಡಿದರು.
"ನೇತ್ರ ಸೋಂಕಿನಿಂದಾಗಿಯೇ ನಿತ್ಯ 40 ರಿಂದ 50 ಜನ ನಮ್ಮ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಶಾಲಾ ಮಕ್ಕಳು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಹೆಚ್ಚು ಸೋಂಕಿಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಗುಂಪಿನಲ್ಲಿ ಇರುವವರಿಗೆ ಬಹಳ ಬೇಗ ಸೋಂಕು ಹರಡುತ್ತಿದೆ," ಎಂದು ಪೂಜಾರಿ ನೇತ್ರ ಆಸ್ಪತ್ರೆಯ ನೇತ್ರ ತಜ್ಞ ಡಾ.ಸದಾನಂದ ಪೂಜಾರಿ ತಿಳಿಸಿದರು.
ನಾಲ್ಕರಿಂದ ಆರು ದಿನಗಳವರೆಗೆ ಸೋಂಕು ಇರುತ್ತದೆ. ನಂತರ ನಿಧಾನವಾಗಿ ಕಡಿಮೆಯಾಗುತ್ತದೆ. ಸಧೃಢ ಆರೋಗ್ಯ ಇರುವವರು ಬೇಗ ಗುಣಮುಖರಾಗುತ್ತಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಸ್ವಲ್ಪ ನಿಧಾನವಾಗಿ ಕಡಿಮೆಯಾಗುತ್ತದೆ. ರೋಗಿಗಳಿಗೆ ಸೋಂಕು ನಿವಾರಕ ಮಾತ್ರೆ, ರೋಗ ನಿರೋಧಕ ಹಾಗೂ ನೋವು ನಿವಾರಕ ಮಾತ್ರೆಗಳನ್ನು ಕೊಡಲಾಗುತ್ತಿದೆ" ಎಂದು ಹೇಳಿದರು.
"ಕಣ್ಣಲ್ಲಿ ಮರಳು ಬಿದ್ದ ಹಾಗೆ ಭಾಸವಾಗುತ್ತಿದೆ. ಕಣ್ಣು ಕೆರೆತವೂ ಇದೆ. ಬಸ್‌ನಲ್ಲಿ ಪ್ರಯಾಣ ಮಾಡಿದ ಸಂದರ್ಭದಲ್ಲಿ ಸೋಂಕು ತಗುಲಿರುವ ಸಾಧ್ಯತೆಯಿದೆ. ಬಂದ ಮೇಲೆ ಮಾನಸಿಕ ಹಿಂಸೆ ಅನುಭವಿಸುವುದಕ್ಕಿಂತ ಮೊದಲೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಸಾರ್ವಜನಿಕ ಸ್ಥಳದಲ್ಲಿ ಅಲೆದಾಡುವುದಕ್ಕಿಂತ ಮನೆಯಲ್ಲಿರುವುದು ಲೇಸು" ಎಂದು ನೇತ್ರ ಸೋಂಕಿಗೆ ಒಳಗಾದ ಭೀಮರಾಯ ಹೇಳಿದರು.
ಕೈಕುಲುಕಿದರೆ ಬರಲಿದೆ ರೋಗ
ನೇತ್ರ ಸೋಂಕಿನಿಂದ ಬಳತ್ತಿರುವ ವ್ಯಕ್ತಿಯಿಂದ ಪ್ರತಿಯೊಬ್ಬರೂ ಅಂತರ ಕಾಯ್ದುಕೊಳ್ಳಬೇಕು. ಸೋಂಕಿತರ ಕೈಕುಲುಕಿದರೂ ಬರಲಿದೆ ರೋಗ. ಆದ್ದರಿಂದ ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ರೋಗಿಗಳು ಪದೇ ಪದೇ ಕಣ್ಣು ಮುಟ್ಟಿಕೊಳ್ಳಬಾರದು. ಒಂದು ವೇಳೆ ತಪ್ಪಿ ಮುಟ್ಟಿಕೊಂಡರೂ ತಕ್ಷಣ ಚೆನ್ನಾಗಿ ಕೈ ತೊಳೆದುಕೊಳ್ಳಬೇಕು. ಇನ್ನೊಬ್ಬರು ಬಳಸಿದ ಕರವಸ್ತ್ರ ಟವೆಲ್ ಬಟ್ಟೆ ಬಳಸಬಾರದು. ಇದರಿಂದ ಬಹುಬೇಗ ಸೋಂಕು ಹರಡಲಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಲ್ಲಿ ಕೆಂಗಣ್ಣು ಕಾಣಿಸಿಕೊಂಡರೆ ಅವರನ್ನು ಶಾಲೆಗೆ ಕಳುಹಿಸಬಾರದು. ನಾಲ್ಕು ದಿನ ಮನೆಯಲ್ಲಿ ಉಪಚರಿಸಬೇಕು. ಮಕ್ಕಳಿಗೆ ಈ ರೋಗ ಬಂದರೆ ಮನೆ ಮಂದಿಗೆಲ್ಲ ಸೋಂಕು ಹರಡುತ್ತದೆ. ಆದ್ದರಿಂದ ಸ್ಚಚ್ಛತೆಗೆ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದ್ದಾರೆ. ರಾಯಚೂರಿನ ಹಾಸ್ಟೆಲ್ ವಿದ್ಯಾರ್ಥಿಗಳಲ್ಲೂ ಕೆಂಗಣ್ಣು ರೋಗ ಕಾಣಿಸಿಕೊಂಡಿದ್ದು, ಅನೇಕ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಕೆಲ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಅಘೋಷಿತ ರಜೆ ಕೊಡಲಾಗಿದೆ.
ಐ ಕಾಂಜಂಕ್ಟಿವಿಟಿಸ್ ಸಮಸ್ಯೆಗೆ ಈಗೊಮ್ಮ ಆಗೊಮ್ಮೆ ಬರುವ ಮಳೆಯೇ ಮುಖ್ಯ ಕಾರಣ. ಈ ರೋಗದಲ್ಲಿ ಕಣ್ಣುಗಳ ಬಿಳಿ ಭಾಗದಲ್ಲಿ ಸೋಂಕು ತಗುಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೆಲವೊಮ್ಮೆ ದೂಳು ಹೊಗೆ ಮತ್ತು ಮಾಲಿನ್ಯದಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸೋಂಕಿತ ವ್ಯಕ್ತಿಯ ಕಣ್ಣಿನಿಂದ ಹೊರಬರುವ ದ್ರವದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ.
ಸೋಂಕಿತರು ಪದೇ ಪದೇ ಕಣ್ಣು ಉಜ್ಜಬಾರದು. ದಿನಕ್ಕೆ ಹಲವಾರು ಬಾರಿ ಕಣ್ಣುಗಳನ್ನು ತೊಳೆಯಬೇಕು. ಇನ್ನೊಬ್ಬರ ಟವೆಲ್ ಕರವಸ್ತ್ರ ದಿಂಬು ಹಾಸಿಗೆ ಇತ್ಯಾದಿಗಳನ್ನು ಬಳಸಲೇಬಾರದು. ತುರಿಕೆ ಸಂವೇದನೆ ಇರುತ್ತದೆ. ಹೆಚ್ಚು ಉಜ್ಜಿಕೊಂಡರೆ ಕಣ್ಣು ಊತುಕೊಳ್ಳುತ್ತದೆ. ಈ ಸೋಂಕು ದೃಷ್ಟಿಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ನೇತ್ರ ವೈದ್ಯರ ಸಲಹೆ ಪಡೆಯದೇ ಡ್ರಾಪ್ಸ್ ಅಥವಾ ಔಷಧಿ ಬಳಸಬಾರದು. ಮನೆಮದ್ದು ಮಾಡಿಕೊಳ್ಳುವುದು ಸೂಕ್ತವಲ್ಲ ಎಂದು ವೈದ್ಯರು ಹೇಳಿದ್ದಾರೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications