ಆರ್‌ಟಿಪಿಎಸ್‌ಗೆ ಅಗತ್ಯಕ್ಕಿಂತ ಕಡಿಮೆ ಬೇಡಿಕೆ ಸಲ್ಲಿಸದ ಕೆಪಿಸಿಎಲ್: ಕಲ್ಲಿದಲ್ಲು ಪೂರೈಕೆಯಲ್ಲೂ ಕುಸಿತ

ರಾಯಚೂರು, ಸೆಪ್ಟೆಂಬರ್‌ 27: ಮಳೆಗಾಲದಲ್ಲಿ ಪವನ ಶಕ್ತಿ ಹಾಗೂ ಜಲ ವಿದ್ಯುತ್ ಘಟಕಗಳಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಆಗುವ ಕಾರಣ ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಕಡಿಮೆ ಮಾಡಲಾಗಿದೆ. ಉತ್ಪಾದನಾ ಖರ್ಚು ತಗ್ಗಿಸಲೆಂದೇ ಮಳೆಗಾಲದಲ್ಲಿ ಕಲ್ಲಿದ್ದಲಿನ ಉತ್ಪಾದನೆ ತಗ್ಗಿಸುವ ಸಂಪ್ರದಾಯ ಈಗಲೂ ಆರ್ ಟಿಪಿಎಸ್‌ನಲ್ಲಿ ಮುಂದುವರಿದಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ( ಆರ್ ಟಿಪಿಎಸ್) ಕಲ್ಲಿದ್ದಲು ಆಧಾರಿತ ವಿದ್ಯುತ್ ಶಕ್ತಿ ಕೇಂದ್ರವಾಗಿದೆ. ಇದನ್ನು ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್) ನಿರ್ವಹಿಸುತ್ತದೆ. ಕೆಪಿಸಿಎಲ್‌ ಸಲ್ಲಿಸಿದ ಬೇಡಿಕೆಗೆ ಅನುಗುಣವಾಗಿ ಆರ್‌ಟಿಪಿಎಸ್‌ನಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ.

KPCL Not Demanding Enough For RTPS

ಈ ಬಾರಿ ಮಳೆ ಕಡಿಮೆಯಾಗಿರುವ ಕಾರಣ ಜಲ ವಿದ್ಯುತ್‌ ಘಟಕಗಳಲ್ಲೂ ವಿದ್ಯುತ್‌ ಉತ್ಪಾದನೆ ಕಡಿಮೆಯಾಗಿದೆ. ಆದರೂ ಕೆಪಿಟಿಸಿಎಲ್‌ ಅಗತ್ಯವಿರುವಷ್ಟು ಬೇಡಿಕೆಯನ್ನೇ ಸಲ್ಲಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ರಾಜ್ಯ ಸರ್ಕಾರ ಕಲ್ಲಿದ್ದಲು ಪೂರೈಕೆಗೆ ಛತ್ತಿಸ್‌ಘಡದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲಿಂದ ಬರುವ ಕಲ್ಲಿದ್ದಲನ್ನು ಗುಂತಕಲ್‌ನಲ್ಲಿ ತ್ವರಿತವಾಗಿ ಇಳಿಸಬೇಕು. ಇಲ್ಲಿದಿದ್ದರೆ ಕೇಂದ್ರ ಸರ್ಕಾರವೇ ದಂಡ ವಿಧಿಸುತ್ತದೆ. ಪ್ರಸ್ತುತ ಆರ್‌ಟಿಪಿಎಸ್‌ಗೆ ಛತ್ತಿಸ್‌ಘಡದಿಂದ ಬರುವ ಕಲ್ಲಿದ್ದಲೂ ಸಹ ಕಡಿಮೆಯಾಗಿದೆ.

ಒಂದು ರೇಕ್‌ನಲ್ಲಿ 58 ವಾಗಿನ್‌ ಇರುತ್ತದೆ. ಒಂದು ವಾಗಿನ್‌ಲ್ಲಿ 40 ಟನ್‌ ಕಲ್ಲಿದ್ದಲು ಇರುತ್ತದೆ. ನಾಲ್ಕು ತಿಂಗಳ ಹಿಂದೆ ಆರ್‌ಟಿಪಿಎಸ್‌ಗೆ ಪ್ರತಿದಿನ 8 ರಿಂದ 9 ರೇಕ್ ಬರುತ್ತಿದ್ದವು. ಕಳೆದ ವಾರ ಒಂದೇ ರೇಕ್‌ ಕಲ್ಲಿದ್ದಲು ಬಂದಿದೆ. ಮಳೆಯಿಂದಾಗಿ ಒಂದು ವಾರ ಮಾತ್ರ ಸಮಸ್ಯೆಯಾಗಿದೆ. ಆದರೆ, ಒಟ್ಟಾರೆಯಾಗಿ ಕಲ್ಲಿದ್ದಲಿನ ಗುಣಮಟ್ವವೇ ಸರಿ ಇಲ್ಲ ಎನ್ನುವುದು ನೆಪ ಎಂದೇ ಶಕ್ತಿನಗರದ ಕಾರ್ಮಿಕರು ಹೇಳುತ್ತಾರೆ.

ಕಲ್ಲಿದ್ದಲು ಬಳಕೆಯ ನಂತರ ಶೇಕಡ 40ರಷ್ಟು ಹಾರುಬೂದಿ ದೊರಕುತ್ತದೆ. ಇದನ್ನು ಸಿಮೆಂಟ್‌ ಫ್ಯಾಕ್ಟರಿಗಳಲ್ಲಿ ಬಳಸಲಾಗುತ್ತದೆ. ಆರ್ ಟಿಪಿಎಸ್ ನಲ್ಲಿ ವಾರ್ಷಿಕವಾಗಿ ಸುಮಾರು 1.5 ಮಿಲಿಯನ್ ಟನ್ ಹಾರುಬೂದಿಯನ್ನು ಉತ್ಪಾದಿಸುತ್ತದೆ. ಕಳೆದ ವರ್ಷ ₹30 ಕೋಟಿಗೆ ಹಾರುಬೂದಿ ಮಾರಾಟವಾಗಿದೆ. ಈ ವರ್ಷವೂ ಟೆಂಡರ್‌ ಕರೆಯಲಾಗಿದೆ.
ಹಾರುಬೂದಿಯಿಂದಲೂ ಹಣ ಬರುವುದರಿಂದ ನಷ್ಟ ಆಗುವುದಿಲ್ಲ ಎಂದು ಆರ್‌ಟಿಪಿಎಸ್‌ ಅಧಿಕಾರಿಗಳು ಹೇಳುತ್ತಾರೆ.

1 ರಿಂದ 7ವರೆಗೆ ವಿದ್ಯುತ್ ಘಟಕಗಳು ಪ್ರತಿಯೊಂದು ದಿನಕ್ಕೆ 5.04 ಮೆಗಾವ್ಯಾಟ್ ಯೂನಿಟ್ ಉತ್ಪಾದಿಸಬಹುದು. ಒಟ್ಟು 8 ವಿದ್ಯುತ್ ಘಟಕಗಳಿಂದ ಪೂರ್ಣ ಸಾಮರ್ಥ್ಯದ ಉತ್ಪಾದನೆ ಯಾದಲ್ಲಿ ರಾಜ್ಯಕ್ಕೆ ಶೇಕಡಾ 41.28 ರಷ್ಟು ಮೆಗಾವ್ಯಾಟ್ ಯೂನಿಟ್ ಲಭಿಸುತ್ತದೆ. ಕೆಪಿಸಿಎಲ್‌ ಸಲ್ಲಿಸುವ ಬೇಡಿಕೆಯೇ ಇಲ್ಲಿ ಮಹತ್ವದ್ದಾಗಿದೆ.

'ಆರ್‌ಟಿಪಿಎಸ್‌ನ ಒಟ್ಟು ಆರು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 700 ಮೆಗಾವಾಟ್‌ ಉತ್ಪಾದನೆ ಆಗುತ್ತಿದೆ. ಬೇಡಿಕೆ ಇಲ್ಲದ ಕಾರಣ 2ನೇ ವಿದ್ಯುತ್ ಘಟಕ ಬಂದ್ ಮಾಡಲಾಗಿದೆ. ಒಂದನೇ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಡಬ್ಲುಸಿಆರ್, ಎಂಸಿಎಲ್, ಎಸ್‌ಸಿಎಲ್‌ನಿಂದ ಗುಣಮಟ್ಟದ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಪ್ರಸ್ತುತ 1 ಲಕ್ಷ ಟನ್‌ ಕಲ್ಲಿದ್ದಲು ಸಂಗ್ರಹ ಇದೆ. ಇದಲ್ಲದೇ ಶನಿವಾರ ಐದು ರೇಕ್‌ ಕಲ್ಲಿದ್ದಲು ಬಂದಿದೆ. ಕಳೆದ ವಾರ ಸಮಸ್ಯೆಯಾಗಿತ್ತು ಗಣಿ ಪ್ರದೇಶದಲ್ಲೇ ಭಾರಿ ಮಳೆಯಾಗಿತ್ತು. ಈಗ ಎಲ್ಲವೂ ಸರಿಯಾಗಿದೆ' ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಸುರೇಶ ಬಾಬು ತಿಳಿಸಿದರು.

ಸಾಮಾನ್ಯವಾಗಿ ಕಲ್ಲಿದ್ದಲು ಗಟ್ಟಿಯಾಗಿದ್ದರೆ ಹೆಚ್ಚು ಶಾಖಕೊಡುತ್ತವೆ. ಪುಡಿಯಾಗಿದ್ದರೆ ಗುಣಮಟ್ಟದ ಸರಿಯಾಗಿಲ್ಲ ಎಂದರ್ಥ. ಆರ್‌ಟಿಪಿಎಸ್‌ಗೆ ಕೆಲವು ದಿನಗಳಿಂದ ಕಡಿಮೆ ಪ್ರಮಾಣದಲ್ಲಿ ಕಲ್ಲಿದ್ದಲು ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಅಧಿಕಾರಿಗಳು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಮಗ್ರವಾದ ಕಾರಣ ನೀಡಲು ಕಲ್ಲಿದ್ದಲಿನ ಗುಣಮಟ್ಟವೇ ಸರಿ ಇಲ್ಲ ಎಂದು ಹೇಳಿಕೊಂಡಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+