ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವದುರ್ಗ: ಕೆಐಎಡಿಬಿ ನಿರ್ಲಕ್ಷ್ಯ, ಉದ್ಯೋಗ ಸೃಷ್ಟಿಗೆ ಆಪತ್ತು

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಸೆಪ್ಟೆಂಬರ್‌, 22: ದೇವದುರ್ಗ ತಾಲೂಕು ಕೇಂದ್ರದಲ್ಲಿ ಇದುವರೆಗೂ ಕೈಗಾರಿಕಾ ವಲಯ ಅಭಿವೃದ್ಧಿಗೊಳಿಸಿ ಉದ್ದಿಮೆಗಳನ್ನು ಆರಂಭಿಸಲು ಅವಕಾಶ ಮಾಡಿಲ್ಲ. ಇದರಿಂದ ಯುವಕರು ಉದ್ಯೋಗವಿಲ್ಲದೇ ಪರಿತಪಿಸುವಂತಾಗಿದೆ.

ದೇವದುರ್ಗವನ್ನು ನಿಜಕ್ಕೂ ಅಭಿವೃದ್ಧಿ ಮಾಡುವ ಕಾಳಜಿ ಇದ್ದರೆ, ಸಣ್ಣಸಣ್ಣ ಉದ್ದಿಮೆಗಳನ್ನು ಸ್ಥಾಪಿಸಬೇಕು. ಇದಕ್ಕೆ ಪರ್ಯಾಯವಾಗಿ ಕೈಗಾರಿಕಾ ವಲಯವೊಂದನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ಪ್ರಗತಿಪರರು ಒತ್ತಾಯಿಸುತ್ತಿದ್ದಾರೆ. ಕೈಗಾರಿಕಾ ವಲಯ ಅಭಿವೃದ್ಧಿಗಾಗಿ ದೇವದುರ್ಗ ಪಟ್ಟಣದಿಂದ ಜಾಲಹಳ್ಳಿ ಮಾರ್ಗದಲ್ಲಿ ಮೂರು ದಶಕಗಳ ಹಿಂದೆಯೇ 30 ಹೆಕ್ಟೇರ್‌ ಜಮೀನು ಕಾಯ್ದಿರಿಸಲಾಗಿದೆ. ಇದುವರೆಗೂ ಮೀಸಲು ಜಮೀನು ಬಳಕೆ ಆಗಿಲ್ಲ. ಅದರಲ್ಲಿ ದೊಡ್ಡಮಟ್ಟದ ಮುಳ್ಳಿನ ಪೊದೆಗಳು ಬೆಳೆದಿವೆ. ಇದರ ಮಧ್ಯೆ ಜಮೀನು ನೀಡಿದವರು ಹೆಚ್ಚುವರಿ ಪರಿಹಾರಕ್ಕಾಗಿ ಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ತೀರ್ಪಿನ ಬಳಿಕ ಪರಿಹಾರ ವಿತರಣೆಯೂ ಮುಗಿದಿದೆ. ಪಹಣಿಗಳಲ್ಲಿ ಈಗಾಗಲೇ ಕೆಐಎಡಿಬಿ ಹೆಸರು ಸೇರ್ಪಡೆ ಆಗಿದೆ.

ರಾಯಚೂರಿನಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಎಪಿಎಂಸಿ ಜಾಗ ಬಳಕೆ, ಭುಗಿಲೆದ್ದ ಆಕ್ರೋಶರಾಯಚೂರಿನಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಎಪಿಎಂಸಿ ಜಾಗ ಬಳಕೆ, ಭುಗಿಲೆದ್ದ ಆಕ್ರೋಶ

ಕೆಐಎಡಿಬಿ ನಿರ್ಲಕ್ಷ್ಯ, ಉದ್ಯೋಗ ಸೃಷ್ಟಿಗೆ ಆಪತ್ತು
ಮುಳ್ಳಿನ ಪೊದೆಗಳನ್ನು ಕತ್ತರಿಸಿ ಸರ್ವೇ ಮಾಡಿಸಬೇಕಾದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಪ್ರಾದೇಶಿಕ ಕಚೇರಿಯ ಎಂಜಿನಿಯರ್‌ಗಳು ಇದುವರೆಗೂ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯು 2017ರಿಂದಲೂ ಸಭೆಗಳನ್ನು ನಡೆಸಿ ಸೂಚನೆ ನೀಡುತ್ತಾ ಬಂದಿದೆ. ಆದರೆ ಕೈಗಾರಿಕಾ ವಲಯ ಅಭಿವೃದ್ಧಿಪಡಿಸುವ ಕೆಲಸ ಮಾತ್ರ ಆಗುತ್ತಿಲ್ಲ. ಉದ್ದಿಮೆಗಳನ್ನು ಸ್ಥಾಪಿಸುವುದಕ್ಕೆ ಯೋಜನೆ ಮಾಡಿಕೊಂಡವರಿಗೆ ಸೂಕ್ತ ಸ್ಥಳಾವಕಾಶ ಇಲ್ಲದೆ ನಿರಾಸೆ ಅನುಭವಿಸುತ್ತಿದ್ದಾರೆ.

Raichur: KIADB neglect in Devadurga, no job creation for youths

ಭೂ ಕಬಳಿಕೆಗೆ ಕಾಯುತ್ತಿರುವ ರಾಜಕಾರಣಿಗಳು
ದೇವದುರ್ಗಕ್ಕೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಉದ್ದಿಮೆಗಳು ಬರುವುದಕ್ಕೆ ಅವಕಾಶ ಆಗುತ್ತಿಲ್ಲ. ಹೀಗಾಗಿ ಯುವಕರಿಗೆ ಉದ್ಯೋಗಾಕಾಶಗಳು ಇಲ್ಲ. ರಾಘವೇಂದ್ರ ಕುಷ್ಟಗಿ ಅವರ ನೇತೃತ್ವದಲ್ಲಿ ಜನಸಂಗ್ರಾಮ ಪರಿಷತ್‌ ನಡೆಸಿದ ಹೋರಾಟದಿಂದಾಗಿ ದೇವದುರ್ಗ ಕೈಗಾರಿಕಾ ವಲಯದ ಜಮೀನು ಉಳಿದಿದೆ. ಮೂಲ ಉದ್ದೇಶಕ್ಕೆ ಬಳಕೆ ಆಗದ ಭೂಮಿಯನ್ನು ಅತಿಕ್ರಮಿಸುವುದಕ್ಕೆ ರಾಜಕಾರಣಿಗಳು ಮತ್ತು ಭೂ ಪರಿಹಾರ ಪಡೆದುಕೊಂಡವರು ಕಾತುರದಿಂದ ಕಾಯುತ್ತಿದ್ದಾರೆ. ಕೈಗಾರಿಕಾ ವಲಯದ ಅಭಿವೃದ್ಧಿಗಾಗಿ ಜನಸಂಗ್ರಾಮ ಪರಿಷತ್‌ನಿಂದ ಜಿಲ್ಲಾಡಳಿತಕ್ಕೆ ನಿರಂತರ ಒತ್ತಾಯವನ್ನು ಮಾಡಲಾಗುತ್ತಿದೆ. 'ಕೆಐಎಡಿಬಿ ಕೇಂದ್ರ ಕಚೇರಿಗೆ ಪತ್ರ ಬರೆಯಬೇಕು. ದೇವದುರ್ಗದಲ್ಲಿ ತುರ್ತಾಗಿ ಕೈಗಾರಿಕಾ ವಲಯದ ಅಭಿವೃದ್ಧಿಗಾಗಿ ಜಿಲ್ಲಾಡಳಿತವೇ ನೇರವಾಗಿ ಕ್ರಮವಹಿಸಬೇಕು' ಎನ್ನುವುದು ಹೋರಾಟಗಾರರ ಒತ್ತಾಯ ಆಗಿದೆ.

ಬೆಳೆದು ನಿಂತ ದಟ್ಟನೆಯ ಮುಳ್ಳಿನ ಗಿಡಗಳು
ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್ ನಾಯಕ ಅವರು ಕಳೆದ ಜೂನ್‌ನಲ್ಲಿ ಏಕಗವಾಕ್ಷಿ ಸಮಿತಿ ಸಭೆ ನಡೆಸಿದ್ದಾರೆ. ದೇವದುರ್ಗದ ಕೈಗಾರಿಕಾ ವಲಯ ಮೀಸಲು ಜಾಗದಲ್ಲಿ ಗಿಡಗಂಟಿಗಳನ್ನು ತೆರವು ಮಾಡಿಲ್ಲ. ನೀಲನಕ್ಷೆಯನ್ನು ಏಕೆ ತಯಾರಿಸಿಲ್ಲ? ಎಂದು ಕೆಐಎಡಿಬಿ ಎಇಇ‌ ಅವರನ್ನು ಪ್ರಶ್ನಿಸಿದ್ದಾರೆ. 'ಈ ಹಿಂದೆ ಏಕಗವಾಕ್ಷಿ ಸಮಿತಿ ಸಭೆಗಳಲ್ಲಿ ನೀಡಿದ್ದ ಸೂಚನೆಗಳಂತೆ ಯಾವುದೇ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮತ್ತು ಕೈಗಾರಿಕಾ ವಲಯದ ಹೆಚ್ಚುವರಿ ಕಾರ್ಯದರ್ಶಿಗೆ ಪತ್ರ ಬರೆಯಬೇಕು' ಎಂದು ಸೂಚಿಸಿದ್ದಾರೆ.

Raichur: KIADB neglect in Devadurga, no job creation for youths

ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ
"ಕೈಗಾರಿಕಾ ವಲಯಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಬೆಳೆದ ಮುಳ್ಳಿನ ಪೊದೆಗಳು ಬೆಳೆಯುತ್ತಲೇ ಇವೆ. ಆದರೆ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಕೆಲಸ ನಡೆಯಬೇಕು ಎಂದರೆ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಬೇಕು," ಎಂದು ಜನಸಂಗ್ರಾಮ ಪರಿಷತ್‌ ಜಿಲ್ಲಾ ಸಮಿತಿ ಸದಸ್ಯ ಬಸವರಾಜ ನಾಯಕ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

English summary
Devadurga taluka not yet developed an industrial sector. youth struggling without jobs. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X