ರಾಯಚೂರು ಜಿಲ್ಲೆಯಲ್ಲಿ ಸೋತವರು, ಗೆದ್ದವರು
ರಾಯಚೂರು, ಮೇ 18 : ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಬಿಜೆಪಿ ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಜಯಗಳಿಸಿವೆ.
2013ರ ಚುನಾವಣೆಯಲ್ಲಿ ಕಾಂಗ್ರೆಸ್ 4, ಬಿಜೆಪಿ 1, ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಈ ಬಾರಿ ಬಿಜೆಪಿ 1 ಸ್ಥಾನವನ್ನು ಹೆಚ್ಚಿಗೆ ಪಡೆದಿದೆ. ಚುನಾವಣೆ ಬಳಿಕ ರಾಯಚೂರು ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿದೆ.
ಕೃಷ್ಣಾ-ತುಂಗಭದ್ರಾ ನದಿಗಳ ನಡುವಣ ಎಡದೊರೆ ನಾಡೆಂದು ರಾಯಚೂರು ಪ್ರಸಿದ್ಧಿ ಪಡೆದಿದೆ. ಜಿಲ್ಲೆಯ ಲಿಂಗಸುಗೂರು ತಾಲೂಕು ಹಟ್ಟಿ ಚಿನ್ನದ ಗಣಿ ಹೊಂದಿದೆ. ಹಟ್ಟಿ ಒಂದು ಪಟ್ಟಣವೇ ಆಗಿ ಹೋಗಿದೆ. ದೇವದುರ್ಗ ತಾಲೂಕು ಕೃಷ್ಣಾ ನದಿಯನ್ನು ಗಡಿಯಾಗಿ ಹೊಂದಿದೆ.

2013ರ ಚುನಾವಣೆಯಲ್ಲಿ ಲಿಂಗಸಗೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾನಪ್ಪ ವಜ್ಜಲ್ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯಲ್ಲಿ 47,385 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ರಾಯಚೂರು ನಗರ ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ಶಿವರಾಜ್ ಪಾಟೀಲ್ ಅವರು ಬಿಜೆಪಿ ಸೇರಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು 56,511 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ರಾಯಚೂರು ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:
| ಕ್ಷೇತ್ರ | ಗೆದ್ದವರು | ಪಕ್ಷ | ಪಡೆದ ಮತಗಳು | ಸೋತವರು | ಪಕ್ಷ | ಪಡೆದ ಮತಗಳು |
| ರಾಯಚೂರು ಗ್ರಾಮೀಣ | ಬಸನಗೌಡ ದದ್ದಲ | ಕಾಂಗ್ರೆಸ್ | 66,656 | ತಿಪ್ಪರಾಜು ಹವಾಲ್ದಾರ್ | ಬಿಜೆಪಿ | 56,692 |
| ರಾಯಚೂರು | ಡಾ.ಶಿವರಾಜ್ ಪಾಟೀಲ್ | ಬಿಜೆಪಿ | 56,511 | ಸೈಯದ್ ಯಾಸೀನ್ | ಕಾಂಗ್ರೆಸ್ | 45,520 |
| ಮಾನ್ವಿ | ರಾಜಾ ವೆಂಕಟಪ್ಪ ನಾಯಕ | ಜೆಡಿಎಸ್ | 53,548 | ಡಾ.ತನುಶ್ರೀ (ಪ್ರೀತಿ) | ಪಕ್ಷೇತರ | 37,733 |
| ದೇವದುರ್ಗ | ಕೆ.ಶಿವನಗೌಡ ನಾಯಕ | ಬಿಜೆಪಿ | 67,033 | ಎ.ರಾಜಶೇಖರ ನಾಯಕ | ಕಾಂಗ್ರೆಸ್ | 45,958 |
| ಲಿಂಗಸುಗೂರು | ಡಿ.ಎಸ್.ಹೂಲಗೇರಿ | ಕಾಂಗ್ರೆಸ್ | 54,230 | ಸಿದ್ದು ಬಂಡಿ | ಕಾಂಗ್ರೆಸ್ | 49,284 |
| ಮಸ್ಕಿ | ಪ್ರತಾಪ್ ಗೌಡ ಪಾಟೀಲ್ | ಕಾಂಗ್ರೆಸ್ | 60,387 | ಬಸನಗೌಡ ತುರ್ವಿಹಾಳ | ಬಿಜೆಪಿ | 60,174 |
| ಸಿಂಧನೂರು | ವೆಂಕಟರಾವ್ ನಾಡಗೌಡ | ಜೆಡಿಎಸ್ | 71,514 | ಬಾದರ್ಲಿ ಹಂಪನಗೌಡ | ಕಾಂಗ್ರೆಸ್ | 69,917 |












Click it and Unblock the Notifications