ರಾಯಚೂರಿನಲ್ಲಿ ಮೋಡಿ ಮಾಡಿದ ಮೋದಿ, ಮೇರೆ ಮೀರಿದ ಕಾರ್ಯಕರ್ತರ ಉತ್ಸಾಹ
ರಾಯಚೂರು, ಏಪ್ರಿಲ್ 06: ರಾಯಚೂರಿನ ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯನ್ನು ಹಾಡಿ ಹೊಗಳಿದ ನರೇಂದ್ರ ಮೋದಿ ಅವರು ತಾವು 1991ರಲ್ಲಿ ರಾಯಚೂರಿಗೆ ಬಂದಾಗಿನ ದಿನಗಳನ್ನು ಮೆಲುಕು ಹಾಕಿದರು.
ರಾಯಚೂರಿನಲ್ಲಿ ಬಿಜೆಪಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಬಿಜೆಪಿ ಇಲ್ಲಿನ ರೈತರ, ಮಹಿಳೆಯರ, ಯುವಕರ ಪರವಾಗಿದೆ ಆದರೆ ಕಾಂಗ್ರೆಸ್ ಭ್ರಷ್ಟಾಚಾರದ, ಕುಟುಂಬ ರಾಜಕಾರಣದ ಪರವಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಯಚೂರಿನ ಮೋದಿ ಸಮಾವೇಶದಲ್ಲಿ ಕಾರ್ಯಕರ್ತರ ಉತ್ಸಾಹ ಮೇರೆ ಮೀರಿತ್ತು. ಮೋದಿ... ಮೋದಿ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ಮೋದಿ ಅವರ ಪ್ರತಿ ಮಾತಿಗೂ ಚಪ್ಪಾಳೆ, ಶಿಳ್ಳುಗಳ ಅನುಮೋದನೆ ದೊರೆಯುತ್ತಿತ್ತು.

ಮೋದಿ ಅಭಿಮಾನಿಯೊಬ್ಬ ದೇಹದ ಮೇಲೆ ಮೋದಿ ಭಾವಚಿತ್ರ ಹಾಕಿಸಿಕೊಂಡು ಬಂದಿದ್ದ ಇದನ್ನು ಗಮನಿಸಿದ ಮೋದಿ ಆತನಿಗೆ ಶರ್ಟ್ ಹಾಕಿಕೊಳ್ಳುವಂತೆ ಸೂಚಿಸಿದರು. ಹೀಗೆ ದೇಹಕ್ಕೆ ಕಷ್ಟ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು. ಇದು ಕಾರ್ಯಕರ್ತರ ಉತ್ಸಾಹ ಇನ್ನಷ್ಟು ಹೆಚ್ಚಿಸಿತು.
ಜನರ ಪ್ರತಿಕ್ರಿಯೆ ಎಷ್ಟಿತ್ತೆಂದರೆ ನರೇಂದ್ರ ಮೋದಿ ಅವರ ಹಿಂದಿ ಭಾಷಣವನ್ನು ಕನ್ನಡ ಅನುವಾದವನ್ನು ಜನರೇ ಬೇಡವೆಂದರು. ಜನರ ಒತ್ತಾಯಕ್ಕೆ ಮಣಿದು ಕನ್ನಡ ಭಾಷಾನುವಾದವನ್ನು ನಿಲ್ಲಿಸಿ ಮೋದಿ ಒಬ್ಬರೇ ಮಾತನಾಡಿದರು. 'ನಮ್ಮ-ನಿಮ್ಮ ನಡುವೆ ಭಾಷೆ ಅಡ್ಡ ಬರುವುದಿಲ್ಲ' ಎಂದು ಮೋದಿ ಹೇಳುತ್ತಿದ್ದಂತೆ ಮತ್ತೆ ಜನರಿಂದ ಮುಗಿಲು ಮುಟ್ಟುವ ಕರತಾಡನ.
ಮೋದಿ ಅವರು ರಾಯಚೂರಿನಲ್ಲಿ ಮಾತನಾಡಿದ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.....
* ಜನಸಂಘ ಹಾಗೂ ರಾಯಚೂರಿನ ಸಂಬಂಧ ಬಹಳ ಹಳೆಯದ್ದು, ಕರ್ನಾಟಕದ ಪರ ಆಗಲೇ ಜನಸಂಘ ನಿಂತಿತ್ತು ಆಗ ಕಾಂಗ್ರೆಸ್ ಪಕ್ಷ ನಿಮ್ಮ ವಿರುದ್ಧ ನಿಂತಿತ್ತು.
* ಇಲ್ಲಿನ ಮಹಿಳೆಯರಿಗೆ ರಕ್ಷಣೆ, ಇಲ್ಲಿನ ರೈತರ ಅಭಿವೃದ್ಧಿ, ಯುವಕರಿಗೆ ಅವಕಾಶಗಳನ್ನು ಕೊಡಲು ಬಿಜೆಪಿಗೆ ಮಾತ್ರವೇ ಸಾಧ್ಯ. ಒಂದು ಕಡೆ ನಾವು ಎಲ್ಲರೊಂದಿಗೆ ಎಲ್ಲರ ಪ್ರಗತಿ ಎಂದು ಹೇಳುತ್ತಿದ್ದರೆ. ಮತ್ತೊಂದು ಎದುರು ಒಂದು ಕುಟುಂಬದ ಅಭಿವೃದ್ಧಿಯ ಉದ್ದೇಶ ಹೊಂದಿರುವ ಕಾಂಗ್ರೆಸ್ ಇದೆ.
* ಒಂದು ಕಡೆ ಭ್ರಷ್ಟಾಚಾರದ ವಿರುದ್ಧ ನಿಂತಿರುವ ಬಿಜೆಪಿ ಇದ್ದರೆ, ಎದುರುಗಡೆ ಭ್ರಷ್ಟರಿಗೆ ಸಹಾಯ ಮಾಡುವ ಕಾಂಗ್ರೆಸ್ ಪಕ್ಷ ಇದೆ. ಬಿಜೆಪಿ ಜನರ ಧನಿಗಳಿಗೆ ಧನಿಯಾಗುವ ಉದ್ದೇಶ ಹೊಂದಿದ್ದರೆ, ಕಾಂಗ್ರೆಸ್ ಜನರ ಧನಿಯನ್ನು ಹತ್ತಿಕ್ಕುವ ಗುರಿ ಹೊಂದಿದೆ.
* ಕರ್ನಾಟಕದ ಸರ್ಕಾರದ 5 ವರ್ಷಗಳ ಸಾಧನೆಯನ್ನೇ ಕಾಂಗ್ರೆಸ್ ಪಕ್ಷ ಹೇಳಿಲ್ಲ. ಮತದಾನಕ್ಕೆ 5 ದಿನ ಉಳಿದಿದೆ ಆದರೆ ಈ ವರೆಗೆ ಯಾವ ಕಾಂಗ್ರೆಸ್ಸಿಗರೂ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಈವರೆಗೆ ಹೇಳು.
* ಈ ಕಾಂಗ್ರೆಸ್‌ನವರಿಗೆ ಬೆಳಗ್ಗೆ ಸಂಜೆ ಬರೀ ಮೋದಿ, ಮೋದಿ ಎನ್ನುತ್ತಿದ್ದಾರೆ. ಮೋದಿಯನ್ನು ಬೈಯುವುದರಲ್ಲಿ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಸಾಧನೆ ಬಗ್ಗೆ ಹೇಳಿ ಎಂದು ಮೋದಿ ಕಾಂಗ್ರೆಸ್ ಕಾಲೆಳೆದರು.
* 400 ಲೋಕಸಭಾ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಈಗ 40ಕ್ಕೆ ಬಂದಿದೆ. ಅಷ್ಟೆ ಅಲ್ಲ 22 ರಾಜ್ಯಗಳಿಂದ ಕಾಂಗ್ರೆಸ್ ದೂರವಾಗಿದೆ.
* ರಾಯಚೂರಿನಲ್ಲಿ ಜನರಿಂದ ಅಭುತಪೂರ್ವ ಪ್ರತಿಕ್ರಿಯೆ ಪಡೆಯುತ್ತಿರುವ ಮೋದಿ. ಜನರಿಂದ ಮೋದಿ.. ಮೋದಿ ಉದ್ಘಾರ.
* ಮೋದಿ ಹೆಸರನ್ನು ಮೈಮೇಲೆಲ್ಲಾ ಬರೆದುಕೊಂಡಿದ್ದ ವ್ಯಕ್ತಿಗೆ ಶರ್ಟು ಧರಿಸುವಂತೆ ಮೊದಿ ಮನವಿ ಮಾಡಿದರು. ನಿಮ್ಮ ಪ್ರೀತಿ ನನಗೆ ಅರ್ಥವಾಗುತ್ತದೆ ಆದರೆ ದಯವಿಟ್ಟು ನಿಮ್ಮ ದೇಹಕ್ಕೆ ಕಷ್ಟ ಕೊಡಬೇಡಿ ಎಂದು ಮೋದಿ ಮನವಿ ಮಾಡಿದರು.
* ಹಸಿದವರಿಗೆ ಅನ್ನ ಕೊಡುತ್ತೇನೆ ಎಂದು ಇಲ್ಲಿನ ಸರ್ಕಾರ ಯೋಜನೆ ತಂದಿದೆ. ಒಳ್ಳೆಯದೇ ಆದರೆ ಅದರಲ್ಲಿ ಕೇಂದ್ರದ ಹಣವೂ ಇದೆ ಎಂಬುದನ್ನು ಮುಚ್ಚಿಡುತ್ತಿದೆ.
* ಆಧಾರ್ ಲಿಂಕ್‌ನ ನಂತರ ಒಂದುವರೆ ಕೋಟಿಗೂ ಹೆಚ್ಚು ಅಕ್ರಮ ಹೆಸರುಗಳು ಹೊರಗೆ ಬಂದವು. ಅಸ್ತಿತ್ವದಲ್ಲಿ ಇಲ್ಲದ ಒಂದೂವರೆ ಕೋಟಿಗೂ ಹೆಚ್ಚು ಜನರಿಗೆ ಅಕ್ಕಿ ಹೋಗುತ್ತಿತ್ತು. ಅದನ್ನೆಲ್ಲಾ ನಾವು ಬಂದ್ ಮಾಡಿಬಿಟ್ಟೆವು. ಫಲಾನುಭಿವಿಗಳಿಗೆ ನಾವು ನೇರವಾಗಿ ಯೋಜನೆಗಳನ್ನು ತಲುಪಿಸಿದೆವು.
* ರಾಯಚೂರಿನ ಸೋನಾ ಮಸೂರಿ ಅಕ್ಕಿಗೆ ತನ್ನದೇ ಆದ ಪ್ರಖ್ಯಾತಿ ಇದೆ. ಆದರೆ ಇಲ್ಲಿನ ರೈತರು ನೀರಿಗಾಗಿ ಒದ್ದಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಂತ್ರಿಗಳು ನೀರಿನ ವಿಷಯದಲ್ಲೂ ಹಣ ಮಾಡುವುದನ್ನು ಕಲಿತಿದ್ದಾರೆ. ಕೃಷ್ಣ-ತುಂಗಭದ್ರೆಯ ವರ ಇದ್ದರೂ ಇಲ್ಲಿನ ರೈತರಿಗೆ ನೀರಿಲ್ಲ.
* ನಾವು 2022ರೊಳಗೆ ಸೌರಶಕ್ತಿ ಉತ್ಪಾದನೆಯನ್ನು 100% ಹೆಚ್ಚು ಮಾಡುವ ಗುರಿಯನ್ನು ಕೇಂದ್ರ ಹೊಂದಿದೆ. ನಾವು ಎಲ್‌ಇಡಿ ಅಭಿಯಾನ ಕೂಡ ಮಾಡಿದೆವು. ಇದರಿಂದ ಮಧ್ಯಮವರ್ಗದ ಹೊರೆ ಕಡಿಮೆ ಆಗುತ್ತದೆ. ಈ ಎಲ್‌ಇಡಿ ಬಲ್ಬ್ ಕಾಂಗ್ರೆಸ್ ಸರ್ಕಾರ ಇದ್ದಾಗ 350 ರೂಪಾಯಿ ಇತ್ತು ಆದರೆ ನಮ್ಮ ಸರ್ಕಾರ ಬಂದಾಗ 50-60 ರೂಪಾಯಿ ಆಗಿಬಿಟ್ಟಿತು.
* ಮಹಾರಾಷ್ಟ್ರದಲ್ಲೂ ಬರ ಆಗುತ್ತದೆ. ಅಲ್ಲಿ ಡೀಸಿಲ್ಟಿಂಗ್ ಕಾರ್ಯ ಮಾಡಿದರು, ಇದರಿಂದ ಇಂದು ಬರವನ್ನು ಸುಲಭವಾಗಿ ಎದುರಿಸುತ್ತಿದ್ದಾರೆ. ಇಲ್ಲಿನ ಸರ್ಕಾರ ಕೂಡ ಈ ಬಗ್ಗೆ ವಾದ ಮಾಡಿದ್ದರು ಆದರೆ 5 ವರ್ಷದಲ್ಲಿ ಅದರ ನೆನಪೇ ಈ ಸರ್ಕಾರಕ್ಕೆ ಆಗಲಿಲ್ಲ.
* ವಿಶ್ವದೆಲ್ಲೆಡೆ ಭಾರತದ ಜೈ ಕಾರ ಪಡೆಯುತ್ತಿದೆ. ಇದಕ್ಕೆ ಮೋದಿ ಕಾರಣವಲ್ಲ ಅದು ಇಲ್ಲಿನ ಜನರು. ಇಲ್ಲಿನ ಜನ ಬಹುಮತದ ಸರ್ಕಾರ ಆಯ್ಕೆ ಮಾಡಿದ್ದರಿಂದಲೇ ಇದು ಸಾಧ್ಯವಾಗಿದೆ. ಕರ್ನಾಟಕಕ್ಕೂ ಪೂರ್ಣ ಬಹುಮತದ ಸರ್ಕಾರ ಬೇಕಾಗಿದೆ ಹಾಗಾಗಿ ಬಿಜೆಪಿಗೆ ಮತ ಹಾಕಿ.












Click it and Unblock the Notifications