ಕರ್ನಾಟಕ-ತೆಲಂಗಾಣ ಸರ್ಕಾರಗಳ ವೈಜ್ಞಾನಿಕ ನೀತಿ: ಗಡಿನಾಡು ಕನ್ನಡ ಶಾಲೆಗಳ ಮಕ್ಕಳು ಅತಂತ್ರ

ರಾಯಚೂರು, ನವೆಂಬರ್‌ 02: ಸರ್ಕಾರದ ವೈಜ್ಞಾನಿಕ ನಿಲುವಿನಿಂದಾಗಿ ಆಂಧ್ರಪ್ರದೇಶ , ತೆಲಂಗಾಣ ರಾಜ್ಯಗಳ ಗಡಿಯಲ್ಲಿ ನೆಲೆಸಿರುವ

ಗಡಿನಾಡ ಕನ್ನಡಿಗರ ಮಕ್ಕಳ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಿಕ್ಷಣ, ಉನ್ನತ ಶಿಕ್ಷಣ ಅಭ್ಯಾಸ ಹಾಗೂ ಸರ್ಕಾರಿ ಉದ್ಯೋಗಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ.

ಕನ್ನಡ ಕಲಿಯುವ ಆಸೆಗೂ ತಣ್ಣೀರು ಬಿದ್ದಿದೆ. ರಾಜ್ಯ ಸರ್ಕಾರದ ಪ್ರೋತ್ಸಾಹವಿಲ್ಲದೆ ಇದ್ದರಿಂದ ತೆಲಂಗಾಣ ಗಡಿಯ ಕನ್ನಡ ಭಾಷಿಕರು ಅನಾಥ ಸ್ಥಿತಿಯಲ್ಲಿದ್ದು, ಅವರ ಮಕ್ಕಳು ಎಸ್‌ಎಸ್‌ಎಲ್‌ಸಿವರೆಗೂ ಕನ್ನಡ ಮಾಧ್ಯಮದಲ್ಲಿ ಓದುತ್ತಾರೆ. ನಂತರ ಉನ್ನತ ಶಿಕ್ಷಣ , ಉದ್ಯೋಗ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿರುವುದು ಗೋಚರಿಸಿದೆ.

Kannada Medium Schools Are Closing In Raichur Border Areas

ತೆಲಂಗಾಣ ಭಾಗದ ಕೆಲ ಕನ್ನಡಿಗರು ಮಾತೃಭಾಷೆಯನ್ನು ಮನೆಗೆ ಸೀಮಿತಗೊಳಿಸಿದ್ದಾರೆ. ವ್ಯಾಪಾರ, ವಹಿವಾಟು ಪೂರ್ಣ ತೆಲುಗು ಭಾಷೆಯಲ್ಲಿಯೇ ನಡೆಸುತ್ತಿರುವುದರಿಂದ ಈ ವರ್ಷ ಕನ್ನಡ ಭಾಷೆ ಕಲಿಸುತ್ತಿದ್ದ ಕನ್ನಡ ಶಾಲೆಗಳಿಗೆ ಬೆಲೆ ಇಲ್ಲದಂತಾಗಿದೆ.

ತೆಲಂಗಾಣ ಗಡಿಯ ಶಾಲೆಗಳಲ್ಲಿ ಅಲ್ಲಿನ ಕನ್ನಡ ಭಾಷೆಗೆ ಕನ್ನಡ ಮಾಧ್ಯಮದಲ್ಲಿಯೇ ಭೋದಿಸುವ ವ್ಯವಸ್ಥೆ ಇದೆ. ಆದರೆ ಕನ್ನಡದಲ್ಲಿ ಕಲಿತವರಿಗೆ ಇತ್ತ ಕರ್ನಾಟಕ ಹಾಗೂ ಅತ್ತ ತೆಲಂಗಾಣ ರಾಜ್ಯ ಸರ್ಕಾರಗಳ ತಾತ್ಸಾರದಿಂದ ಇದೀಗ ವರ್ಷದಿಂದ ವರ್ಷಕ್ಕೆ ಕನ್ನಡ ಭಾಷಿಕರ ಮಕ್ಕಳು ಅನಿವಾರ್ಯವಾಗಿ ತೆಲುಗು, ಆಂಗ್ಲ ಮಾಧ್ಯಮದತ್ತ ಗಮನಹರಿಸಿದ್ದು ಕನ್ನಡ ಭಾಷೆಯ ಕಲಿಕೆಗೆ ತೀವ್ರ ಹಿನ್ನೆಡೆಯಾಗಿದೆ.

Kannada Medium Schools Are Closing In Raichur Border Areas

ರಾಯಚೂರು ತಾಲೂಕಿನ ಗಡಿಯಾಚೆಗಿನ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಕೃಷ್ಣಾ ಸುತ್ತಲಿನ 13 ಗ್ರಾಮಗಳಲ್ಲಿ ಕನ್ನಡ ಭಾಷಿಕರೇ ಹೆಚ್ಚಿದ್ದಾರೆ. ಅಂದಿನಿಂದಲೂ ನಡೆ ನುಡಿ ಮನೆ ಮನೆಯಲ್ಲಿಯೂ ಕನ್ನಡ ಭಾಷೆ ಹಾಸುಹೊಕ್ಕಾಗಿದೆ. ಅಲ್ಲಿನ ಕನ್ನಡ ಮಾಧ್ಯಮದ ಶಾಲೆಗಳಲ್ಲಿಯೇ ಇಲ್ಲಿನವರು ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ ಕನ್ನಡದಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ವ್ಯಾಸಂಗ ಮಾಡುವ ಮಕ್ಕಳಿಗೆ ನಂತರ ಮುಂದೇನು ಎಂಬ ಸಮಸ್ಯೆ ಕಾಡುತ್ತಿದೆ.

1968ರಿಂದ ಈ ಪ್ರದೇಶದ ನಿವಾಸಿಗಳು ತಾವಿರುವ ಪ್ರದೇಶವನ್ನು ಗಡಿನಾಡು ಎಂದು ಘೋಷಿಸಲು ನಿರಂತರ ಹೋರಾಟ ಮಾಡಿದ್ದರು. ಅದರ ಫಲವಾಗಿ 2011ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅವರು ಈ ಭಾಗವನ್ನು ಗಡಿನಾಡು ಎಂದು ಘೋಷಿಸಿದ್ದರು. ನಂತರ ಉದ್ಯೋಗ, ವಿದ್ಯಾಭ್ಯಾಸಕ್ಕೆ ಮೀಸಲಾತಿ, ಸರ್ಕಾರದ ಯೋಜನೆಗಳು ಸಿಗುವಂತೆ ಯೋಜನೆ ರೂಪಿಸಿ ರಾಜ್ಯಪತ್ರ ಹೊರಡಿಸಿದ್ದರು. ಆದರೆ ಅದರಿಂದ ಯಾವುದೇ ಲಾಭ ಸಿಗದೆ ಕನ್ನಡ ಭಾಷಿಕರು ಎರಡು ಸರ್ಕಾರಗಳ ತಾತ್ಸಾರಕ್ಕೊಳಗಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಸರ್ಕಾರ ಹೊರಡಿಸಿದ ರಾಜ್ಯ ಪತ್ರ ಹಿಡಿದು ಮಕ್ಕಳು ಎಸ್‌ಎಸ್‌ಎಲ್‌ಸಿ ನಂತರ ಅಭ್ಯಾಸಕ್ಕೆ ತೆಲಂಗಾಣದ ಗಡಿಯ ರಾಯಚೂರಿಗೆ ಅಲೆದಾಡಿದರು. ಆದರೆ ಅದರಿಂದ ಎಂಟಾಣೆಯ ಲಾಭವಾಗಲಿಲ್ಲ. ಉದ್ಯೋಗ ಶಿಕ್ಷಣದಲ್ಲಿ ಹೆಚ್ಚಿನ ಸೌಲಭ್ಯ ಪಡೆಯಲು ಗಡಿನಾಡು ಕನ್ನಡಿಗರು ರಾಯಚೂರಿಗೆ 327 ಜೆ ಪ್ರಮಾಣ ಪತ್ರ ಪಡೆಯಲು ಹೋರಾಟ ನಡೆಸಿದರೂ ಗಡಿ ಕನ್ನಡಿಗರಿಗೆ ದೊರೆಯದಂತಾಗಿದೆ.

ಪ್ರತಿಯೊಬ್ಬ ಅಧಿಕಾರಿಗಳು ಕನ್ನಡದಲ್ಲಿ ಮಾತನಾಡಬೇಕು. ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸರಕಾರದ ಆದೇಶ ಹೊರಡಿಸಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ದಿನದಿಂದ ದಿನಕ್ಕೆ ಕನ್ನಡ ಶಾಲೆಗಳಿಗೆ ಮುಚ್ಚುವ ಸ್ಥಿತಿ ಎದುರಾಗಿದೆ. ಕಳೆದ ವರ್ಷ ಗಡಿಭಾಗದ ಕೃಷ್ಣಾ ಸಮೀಪದ ಅಲಂಪಲ್ಲಿ ಗ್ರಾಮದಲ್ಲಿ ಒಂದು ಶಾಲೆ, ಅದರಂತೆ ಶಾಲೆಗಳಲ್ಲಿ ಮಕ್ಕಳ ದಾಖಲಾತಿ , ಶಿಕ್ಷಕರ ನಿವೃತ್ತಿ ಪರಿಣಾಮದಿಂದ ಲಿಂಗಸೂಗೂರು ತಾಲೂಕಿನ ಮಲ್ಲಾಪುರ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ , ಸಿಂಧನೂರು ತಾಲೂಕಿನ ಬೂದಿವಾಳ ಕ್ಯಾಂಪ್‌ನ ಸಿಎನ್‌ಟಿಎಂ ಅನುದಾನಿತ ತೆಲುಗು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ, ಶಿಕ್ಷಕರ ನಿವೃತ್ತಿ ಹಿನ್ನಲೆಯಲ್ಲಿ 2022ರಲ್ಲಿ ಬಂದ್ ಮಾಡಲಾಗಿದೆ. ಆದರೆ ಸರ್ಕಾರವು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದೆ.

ಕರ್ನಾಟಕದ ಅಧಿಕಾರಿಗಳು ತೆಲಂಗಾಣದ ಕನ್ನಡಿಗರಿಂದ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಕೇಳಿ ತೆಲಂಗಾಣದ ವಿವಿಧ ಜಿಲ್ಲೆಗಳ ತಹಶೀಲ್ದಾರ್ ನೀಡುವ ಪ್ರಮಾಣ ಪತ್ರ ಮಾನ್ಯ ಮಾಡುತ್ತಿಲ್ಲ. ಕರ್ನಾಟಕದ ಹೊರಗೆ ವಾಸವಾಗಿರುವವರಿಗೆ ಅಲ್ಲಿನ ತಹಶೀಲ್ದಾರ್ ಪ್ರಮಾಣ ಪತ್ರ ನೀಡಬೇಕೆಂಬ ವಾದವನ್ನು ಇಲ್ಲಿನವರು ಮಂಡಿಸಿದರೆ ಅಲ್ಲಿನವರು ನೀಡಿದ ಪ್ರಮಾಣ ಪತ್ರಕ್ಕೆ ಇಲ್ಲಿ ಮಾನ್ಯತೆ ಸಿಗುತ್ತಿಲ್ಲ.

ಉನ್ನತ ಶಿಕ್ಷಣದ ಪ್ರವೇಶದ ವೇಳೆಯೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಗಡಿನಾಡು ನಿವಾಸಿಗಳೆಂದು ದಾಖಲಿಸಲು ಮುಂದಾದರೆ ಅದು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಕಲಿತ ಮಕ್ಕಳು ಕೂಲಿ ಮಾಡಿಕೊಂಡು ಇಲ್ಲವೇ , ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಕೃಷ್ಣಾ ಮತ್ತು ಸುತ್ತಲಿನ ಕನ್ನಡ ಭಾಷಿಕರ ಗ್ರಾಮಗಳನ್ನು ಗಡಿನಾಡು ಎಂದು ಕರ್ನಾಟಕ ಸರ್ಕಾರ ರಾಜ್ಯಪತ್ರ ಹೊರಡಿಸಿದ್ದರೂ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಕಳೆದ ವರ್ಷ ಕೃಷ್ಣಾ ಸಮೀಪದ ಅಲಂಪಲ್ಲಿ ಗ್ರಾಮದ ಕನ್ನಡ ಶಾಲೆ ಮುಚ್ಚಲಾಯಿತು. ಕರ್ನಾಟಕ ರಾಜ್ಯ ಸರ್ಕಾರ 50ರ ಸಂಭ್ರಮಾಚರಣೆ ಮಾಡುತ್ತಿದೆ. ಈ ಬಾರಿಯಾದರೂ ಗಡಿ ಕನ್ನಡ ಶಾಲೆಗಳ ಉಳುವಿಗೆ ಕ್ರಮಕೈಗೊಳ್ಳಲಿ ಎಂದು ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲೆಯ ಕೃಷ್ಣಾ ಗ್ರಾಮದ ಗಡಿನಾಡು ಕನ್ನಡಿಗರ ಸಂಘದ ಕಾರ್ಯದರ್ಶಿ ಅಮರ ದೀಕ್ಷಿತ್ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+