'ಕಾಲಾ' ಪ್ರದರ್ಶನ ರದ್ದುಗೊಳಿಸಿ ಹಣ ವಾಪಸ್ಸು ಮಾಡಿದ ಥಿಯೇಟರ್ ಮಾಲೀಕ
ರಾಯಚೂರು, ಜೂನ್.07 : ಇಲ್ಲಿನ ಪದ್ಮನಾಭ ಚಿತ್ರಮಂದಿರದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಾಲಾ ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ.
ಚಿತ್ರ ಪ್ರದರ್ಶನ ಆರಂಭವಾಗುತ್ತಿದ್ದಂತೆ ಚಿತ್ರಮಂದಿರದ ಮಾಲೀಕ ರದ್ದು ಮಾಡಿದ ಘಟನೆ ಇಂದು ಗುರುವಾರ ನಡೆದಿದೆ. ನಂತರ ಪ್ರೇಕ್ಷಕರಿಗೆ ಹಣ ವಾಪಸ್ಸು ಮಾಡಲಾಗಿದೆ.
ಕಾಲ ಪ್ರದರ್ಶನ ರದ್ದು ಹಿನ್ನೆಲೆಯಲ್ಲಿ ಅಭಿಮಾನಿಗಳು ನಿರಾಸೆಯಿಂದ ಮನೆಗೆ ತೆರಳಿದ್ದಾರೆ. ಸ್ವಯಂ ಪ್ರೇರಿತವಾಗಿ ಕಾಲಾ ಚಿತ್ರ ಪ್ರದರ್ಶನವನ್ನು ಮಾಲೀಕರು ಬಂದ್ ಮಾಡಿದ್ದಾರೆ.

ಕಾಲಾ ಜೂನ್ 7ರಂದು ವಿಶ್ವಾದ್ಯಂತ ತೆರೆಕಾಣುತ್ತಿದೆ. ಆದರೆ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಕೆಲವು ಕನ್ನಡ ಪರ ಸಂಘಟನೆಗಳು ಸಿನಿಮಾ ಬಿಡುಗಡೆ ವಿರೋಧಿಸಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದೆ.

ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದು ಗುರುವಾರ ಕಾಲಾ ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ. ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಳ್ಳುತ್ತಿವೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಿ ಪ್ರದರ್ಶನ ಕೈಗೊಳ್ಳುತ್ತೇವೆ ಎಂದು ಚಿತ್ರಮಂದಿರಗಳ ಮಾಲೀಕರು ಹೇಳುತ್ತಿದ್ದಾರೆ.












Click it and Unblock the Notifications