ಗ್ರಾಮೀಣಾಭಿವೃದ್ಧಿಗಾಗಿ ನರೇಗಾ ಯೋಜನೆ ಈ ಜಿಲ್ಲೆಯಲ್ಲಿ ಸಹಕಾರಿಯಾಗಿದ್ದು ಹೇಗೆ?
ರಾಯಚೂರು ಫೆಬ್ರವರಿ 23: ಗ್ರಾಮೀಣಾಭಿವೃದ್ಧಿಗಾಗಿ ನರೇಗಾ ಯೋಜನೆಯು ನಿರಂತರ ಅನುದಾನಗಳನ್ನು ನೀಡಿ, ಗ್ರಾಮೀಣ ಜನರಿಗೆ ಸಹಕಾರಿಯಾಗುವ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಜನರ ದುಡಿಯುವ ಕೈಗಳಿಗೆ ನಿರಂತರ ಕೆಲಸ ನೀಡುತ್ತಾ, ಗ್ರಾಮ ಅಭಿವೃದ್ಧಿಯಲ್ಲಿ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಿದೆ. ರಾಜ್ಯ ಸರ್ಕಾರದ 2023-24 ನೇ ಸಾಲಿನ ಆಯವ್ಯಯದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಅನುಷ್ಠಾನಿಸಲು ಘೋಷಿಸಿರುತ್ತಾರೆ. ಅವುಗಳಲ್ಲಿ ಸ್ಮಶಾನ ಅಭಿವೃದ್ಧಿ ಕಾರ್ಯಕ್ರಮ ಕೂಡ ಒಂದಾಗಿದೆ.

ರಾಯಚೂರು ತಾಲೂಕಿನ ಶಾಖವಾದಿ ಗ್ರಾಮ ಪಂಚಾಯತಿಯ ಆಶ್ರಯ ಕಾಲೋನಿಯಲ್ಲಿರುವ ಸ್ಮಶಾನ ಸ್ಥಳವು ಜಾಲಿ ಕಂಟಿಗಳು ಬೆಳೆದು ಅಂತಿಮ ಸಂಸ್ಕಾರ ಮಾಡಲು, ಗ್ರಾಮದ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಇಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ರಾಯಚೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 2023-24 ನೇ ಸಾಲಿನಲ್ಲಿ ಸ್ಥಳ ಅವಕಾಶಗಳನ್ನು ಗುರುತಿಸಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ಮಶಾನಗಳ ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ.
ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಶಾಖವಾದಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮುಖಾಂತರ ಅಂದಾಜು ಕೂಲಿಗಾಗಿ ₹ 21 ಸಾವಿರದ 630 ರೂಪಾಯಿ, ಸಾಮಾಗ್ರಿಗಾಗಿ ₹ 2 ಲಕ್ಷ 76 ಸಾವಿರದ 639 ರೂಪಾಯಿ ಒಟ್ಟು ₹2 ಲಕ್ಷ 98 ಸಾವಿರದ 268 ರೂಪಾಯಿ ವ್ಯಯಿಸಿ, 252 ಮಾನವ ದಿನಗಳನ್ನು ಸೃಜಿಸಿದೆ.
ಶಾಖವಾದಿ ಗ್ರಾಮದ ಆಶ್ರಾಯ ಕಾಲೋನಿಯ ಸ್ಮಶಾನ ಜಾಗದಲ್ಲಿ ತುಂಬಿರುವ ಎಲ್ಲಾ ಮುಳ್ಳು ಕಂಟಿಗಳನ್ನು ತೆಗೆದು, ಭೂಮಿಯನ್ನು ಸಮತಟ್ಟು ಮಾಡಿ, ಸುತ್ತಲೂ ಕಲ್ಲುಕಂಬಗಳನ್ನು ಹಾಕಿ, ತಂತಿ ಬೇಲಿಯನ್ನು ನಿರ್ಮಿಸಿ, ಮುಂಭಾಗದಲ್ಲಿ ಉತ್ತಮವಾಗಿ ಕಾಣಲು ಅರ್ಚ ಗೇಟ್ ನ್ನು ನಿರ್ಮಾಣ ಮಾಡಿದ್ದಾರೆ.

ಶಾಖವಾದಿ ಗ್ರಾಮ ಪಂಚಾಯತಿಯ ಶಾಖವಾದಿ ಹಾಗೂ ಕೂಡ್ಲೂರು ಗ್ರಾಮದಲ್ಲಿ ಎರಡು ಉತ್ತಮವಾದ ಸ್ಮಶಾನ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಿಂದಾಗಿ, ಮುಕ್ತಿಧಾಮದಲ್ಲಿ ಅಂತಿಮ ಸಂಸ್ಕಾರ ಮಾಡಲು ಸಾರ್ವಜನಿಕರಿಗೆ ಬಹಳ ಅನುಕೂಲಕರವಾಗಿದೆ. ಇನ್ನೂಳಿದಂತೆ ಪ್ರಸಕ್ತ ವರ್ಷದಲ್ಲಿ, ಚಂದ್ರಬಂಡ, ಚಿಕ್ಕಸೂಗುರು, ಹಿರಾಪೂರು, ಜಂಬಲದಿನ್ನಿ, ಕಾಡ್ಲೂರು, ಕಲ್ಮಲಾ, ಕಮಲಾಪೂರು, ಎಲ್.ಕೆ.ದೊಡ್ಡಿ, ಉಡಮಗಲ್, ಯದ್ಲಾಪೂರು ಮತ್ತು ಯಾಪಲದಿನ್ನಿ ಗ್ರಾಮ ಪಂಚಾಯತಿ ಸೇರಿ ಒಟ್ಟು ರಾಯಚೂರು ತಾಲೂಕಿನ 11 ಗ್ರಾಮ ಪಂಚಾಯಿತಿಗಳಲ್ಲಿ ಸ್ಮಶಾನ ಅಭಿವೃದ್ಧಿಗಾಗಿ ಯೋಜನೆ ರೂಪಿಸಿದೆ.
ನರೇಗಾ ಯೋಜನೆಯಡಿ ಗ್ರಾಮೀಣ ಮೂಲ ಸೌಕರ್ಯದಡಿ ಕಾಮಗಾರಿಗಳನ್ನು ಅನುಷ್ಠಾನ ಮಾಡುತ್ತಿರುವುದು ಗ್ರಾಮೀಣ ಜನರಿಗೆ ಉಪಯುಕ್ತವಾಗಿದೆ ಎಂದು ತಾಪಂ ಇಒ ಚಂದ್ರಶೇಖರ ಪವಾರ್ ಹೇಳಿದರು.
ಉದ್ಯೋಗ ಖಾತರಿ ಯೋಜನೆ ಮೂಲಕ ಸ್ಮಶಾನವನ್ನು ಅಭಿವೃದ್ಧಿ ಮಾಡಿದೆ. ಇದರಿಂದಾಗಿ ಸ್ಮಶಾನ ಜಾಗದಲ್ಲಿ ಅಂತಿಮ ಸಂಸ್ಕಾರ ಮಾಡಲು ನಮಗೆ ತುಂಬಾ ಅನುಕೂಲವಾಗಿದೆ ಎಂದು ಶಾಖವಾದಿ ಗ್ರಾಮಸ್ಥ ಮಲ್ಲೇಶ್ , ಹನುಮಂತ ಹೇಳಿದರು.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Vijay Thalapathi: ಟಿವಿಕೆ ಸಂಸ್ಥಾಪಕ, ನಟ ವಿಜಯ್ ದಳಪತಿ ವಿರುದ್ಧ ಪ್ರಕರಣ ದಾಖಲು -
Thalapathy Vijay Assets: ನಾಮಪತ್ರ ಸಲ್ಲಿಸಿದ ವಿಜಯ್, ಇವರ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ












Click it and Unblock the Notifications