ರಾಯಚೂರಿನ ತುಂಗಾ ತೀರಾದಲ್ಲಿ ವಿದೇಶಿ ಹಕ್ಕಿಗಳ ಕಲರವ
ರಾಯಚೂರು, ಫೆಬ್ರವರಿ 3: ನಮ್ಮ ರಾಜ್ಯಕ್ಕೆ ವರ್ಷಕ್ಕೊಮ್ಮೆ ವಿದೇಶಿ ಹಕ್ಕಿಗಳು ವಲಸೆ ಬಂದು ಹೋಗುತ್ತದೆ. ನದಿ ತೀರದಲ್ಲಿ ನಲಿದಾಡುವ ಅವುಗಳ ಕಲರವ ನೋಡಗರ ಕಣ್ಮನ ಸೆಳೆಯುವ ಮನೋವುಲ್ಲಾಸವನ್ನು ಒದಗಿಸುತ್ತದೆ. ವಿದೇಶದಿಂದ ಬಂದಿರುವ ಹೆಬ್ಬಾತು, ಕಾಮನ್ ಕ್ರೆನ್, ಸ್ಪಾಟ್ ಬಿಲ್ಡ್ ಡಕ್ ಸೇರಿ ನಾನಾ ಹೆಸರುಗಳಿಂದ ಕರೆಯಲ್ಪಡುವ ಪಕ್ಷಿಗಳ ಗುಂಪು ರಾಯಚೂರು ಜಿಲ್ಲೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಬಿಸಿಲನಾಡು ರಾಯಚೂರು ಜಿಲ್ಲೆಯ ಎಡಭಾಗದಲ್ಲಿ ವಿಶಾಲವಾಗಿ ಹರಿಯುವ ತುಂಗಭದ್ರಾ ನದಿಯ ನೀರಿನ ತಟಕ್ಕೆ ವಿದೇಶಿ ಹಕ್ಕಿಗಳು ವರ್ಷಕ್ಕೊಮ್ಮೆ ವಲಸೆ ಬರುತ್ತವೆ. ಜಿಲ್ಲೆಯ ಮಾನವಿ ತಾಲೂಕಿನ ದದ್ದಲ್, ಕಾತರಕಿ, ಮದ್ಲಾಪುರ, ಚಿಕಲಪರ್ವಿ ಸೇರಿದಂತೆ ನದಿ ತೀರದ ಗ್ರಾಮಗಳಲ್ಲಿ ಬಲು ಅಪರೂಪದ ವಿದೇಶಿಗಳು ಪಕ್ಷಿಗಳು ಕಂಡು ಬರುತ್ತಿವೆ. ಇವುಗಳು ಭಾರತಕ್ಕೆ ಪ್ರತಿ ವರ್ಷ ತಪ್ಪದೆ ಬರುತ್ತವೆ.
ಮಾಂಗೋಲಿಯ, ಟಿಬೆಟ್, ಉತ್ತರ ಚೈನಾ, ರಷ್ಯಾ ಸೇರಿದಂತೆ ನಾನಾ ದೇಶಗಳಿಂದ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ದೇಶದ ಹಿಮಾಲಯ ಪರ್ವತವನ್ನ ದಾಟಿ ಭಾರತಕ್ಕೆ ಬಂದು ಐದಾರು ತಿಂಗಳು ನೆಲೆಸಿ ಬಳಿಕ ತಮ್ಮ ತಾಯ್ನಾಡಿಗೆ ತೆರಳುತ್ತಾರೆ. ಆದರೆ ಈ ಬಾರಿ ಈ ಪಕ್ಷಿಗಳು ಜನವರಿ ತಿಂಗಳಲ್ಲಿ ಆಗಮಿಸಿವೆ.

ತಮ್ಮ ತಾಯ್ನಾಡಿನಲ್ಲಿ ಉಷ್ಣಾಂಶತೆ ಪ್ರಮಾಣ ಕಡಿಮೆಯಾಗಿ ಶೀತ ಏರಿಕೆ ಆದ ಹಿನ್ನೆಲೆಯಲ್ಲಿ ಭಾರತಕ್ಕೆ ಐನೂರಕ್ಕೂ ಹೆಚ್ಚು ಪಕ್ಷಿಗಳು ಬಂದು ಮೂರು-ನಾಲ್ಕು ತಿಂಗಳು ಭಾರತದಲ್ಲೇ ಇರುತ್ತವೆ. ಏಪ್ರಿಲ್ ನಂತರ ಭಾರತದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದಂತೆ ತಮ್ಮ ತಾಯ್ನಾಡಿಗೆ ವಾಪಸ್ ಆಗುತ್ತವೆ. ಹೆಬ್ಬಾತು ಅಲ್ಲದೇ ಕಾಮನ್ ಕ್ರೇನ್, ಸ್ಟಾಟ್ ಬಿಲ್ಡ್, ಪ್ರಿಟೆಂಡ್ ಸ್ಟ್ರೋಕ್ ಸೇರಿದಂತೆ ನಾನಾ ಪಕ್ಷಿಗಳು ರಷ್ಯಾ, ಟಿಬೆಟ್, ಉತ್ತರ ಚೈನಾ, ಮಂಗೋಲಿಯಾ ಹಾಗೂ ಏಷ್ಯಾ ಉಪಖಂಡ ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದು, ಪಕ್ಷಿಗಳ ಗುಂಪು ನೋಡಗರ ಕಣ್ಮನ ಸೆಳೆಯುತ್ತಿದೆ.

ಇದರಲ್ಲಿ ಹೆಬ್ಬಾತು ಎಂಬ ಪಕ್ಷಿ ಸರಿಸುಮಾರು 25ರಿಂದ 27 ಸಾವಿರ ಅಡಿಯವರೆಗೆ ಎತ್ತರ ಹಾರುವ ಪಕ್ಷಿಯೆಂದು ಗುರುತಿಸಿಕೊಂಡಿದೆ. ನೋಡಲು ಎತ್ತರದಲ್ಲಿರುವ ಈ ಪಕ್ಷಿಗಳು ನೋಡಗರ ಕಣ್ಮನ ಸೆಳೆಯುತ್ತಿವೆ.. ಅದರಲ್ಲಿ ನದಿ ತೀರದಲ್ಲಿ ಅವುಗಳ ಹಾರಾಡುವುದು, ಓಡಾಡವುದು ದೃಶ್ಯ ಮನಮೋಹಕವಾಗಿ ಕಂಡು ಬರುತ್ತಿದೆ. ಈ ಪಕ್ಷಿಗಳನ್ನ ನೋಡಲು ಸಾಕಷ್ಟು ಪಕ್ಷಿ ಪ್ರೇಮಿಗಳು, ಛಾಯಗ್ರಾಹಕರು ಆಗಮಿಸುತ್ತಿದ್ದಾರೆ.
ಚಿತ್ರ ಕೃಪೆ-ನರೇಶ್ ಕೊಂಡಪುರ












Click it and Unblock the Notifications