ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಡ್ರೋನ್ ಕಾಣಿಕೆ; ಡ್ರೋನ್‌ ವಿಶೇಷತೆ ಏನು?

ರಾಯಚೂರು, ಅಕ್ಟೋಬರ್‌, 13; ರಾಯಚೂರು ಕೃಷಿ ವಿಶ್ವ ವಿದ್ಯಾಲಯ ಡ್ರೋನ್ ಬಳಸಿ ಕ್ರಿಮಿನಾಶಕ ಸಿಂಪರಣೆ ಸಾಧ್ಯ ಎಂಬುದನ್ನು ಸಂಶೋಧನೆಯ ಮೂಲಕ ಖಚಿತಪಡಿಸಿದೆ. ಆದ್ದರಿಂದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಮೂರು ಡ್ರೋನ್‌ಗಳನ್ನು ಒದಗಿಸಲು ಮುಂದಾಗಿದೆ.

ಡ್ರೋನ್‌ ಬಳಸುವುದರಿಂದ ಕೃಷಿ ಚಟುವಟಿಕೆಗಳಿಗೆ ವೇಗ ದೊರೆಯುವ ನಿರೀಕ್ಷೆಯಿದೆ. ಆಧುನಿಕ ತಂತ್ರಜ್ಞಾನದ ಡ್ರೋನ್ ಯಂತ್ರವನ್ನು ಸಾಮಾನ್ಯವಾಗಿ ಭದ್ರತಾ ಕಾರ್ಯಗಳಿಗೆ ಬಳಸಲಾಗುತ್ತದೆ. ಸಬ್‌ ಮಿಷನ್‌ ಅಗ್ರಿಕಲ್ಚರ್‌ ಮೆಕ್ಯಾನಿಸಂ ಕಾರ್ಯಕ್ರಮದಡಿ ಮೂರು ಡ್ರೋನ್‌ಗಳನ್ನು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಬಳಸಲು ಅವಕಾಶ ದೊರೆತಿದೆ.

ರಾಯಚೂರು, ಕಲಬುರಗಿ ಮತ್ತು ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರಗಳಿಗೆ ತಲಾ ಒಂದು ಡ್ರೋನ್ ವಿತರಿಸಲು ನಿರ್ಧರಿಸಲಾಗಿದೆ. ತಲಾ 23 ಕೆ.ಜಿ. ತೂಕದ ಡ್ರೋನ್‌ಗಳು ಬ್ಯಾಟರಿ ಮೂಲಕ 20 ಲೀಟರ್‌ ಕ್ರಿಮಿನಾಶಕ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. 21 ನಿಮಿಷ ಕಾರ್ಯ ನಿರ್ವಹಿಸುವ ಬ್ಯಾಟರಿ ಹೊಂದಿರುವ ಈ ಡ್ರೋನ್‌ಗಳು, ಪ್ರತಿ ನಿಮಿಷಕ್ಕೆ 3 ಲೀಟರ್‌ ಕ್ರಿಮಿನಾಶಕ ಸಿಂಪಡಣೆ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಕೃಷಿ ವಿಶ್ವ ವಿದ್ಯಾಲಯದ ಮೂಲಗಳು ತಿಳಿಸಿವೆ.

Drone gift to raichur agriculture university; What is drone special?

ಈ ಡ್ರೋನ್‌ ವಿಶೇಷತೆ ಏನು?
ತಲಾ 10 ಲಕ್ಷ ರೂಪಾಯಿ ಅಂದಾಜು ಮೊತ್ತದ ಡ್ರೋನ್‌ ಯಂತ್ರಗಳು ರಾಯಚೂರು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕ ಬಳಕೆಗೆ ಸನ್ನದ್ಧವಾಗಲಿವೆ. ರಾಯಚೂರಿನಲ್ಲಿ ಮಿಶ್ರ ಬೆಳೆ, ಕಲಬುರಗಿಯಲ್ಲಿ ತೊಗರಿ ಹಾಗೂ ಗಂಗಾವತಿಯಲ್ಲಿ ಭತ್ತದ ಬೆಳೆಗೆ ಕ್ರಿಮಿನಾಶಕ ಸಿಂಪಡಣೆಗೆ ಈ ಡ್ರೋನ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ.

ಡ್ರೋನ್‌ಗಳನ್ನು ಬಳಸಿ ಬೆಳೆಗಳಿಗೆ ಮೇಲ್ಭಾಗದಿಂದ ಕ್ರಿಮಿನಾಶಕ ಸಿಂಪಡಿಸಲಾಗುತ್ತದೆ. ಈ ಮೂಲಕ ಕೀಟನಾಶಕಕ್ಕೆ ಡ್ರೋನ್‌ ವ್ಯವಸ್ಥೆ ನೆರವಾಗಲಿದೆ. ಎತ್ತರದಲ್ಲಿ ಬೆಳೆಯುವ ಬೆಳೆಗಳಿಗೆ ಡ್ರೋನ್‌ ಮೂಲಕ ಕ್ರಿಮಿನಾಶಕ ಸಿಂಪಡಣೆ ಪರಿಣಾಮಕಾರಿ ಆಗಿದೆ. ಭವಿಷ್ಯದಲ್ಲಿ ಈ ತಂತ್ರಜ್ಞಾನ ಸಾಕಷ್ಟು ಉಪಯೋಗಕ್ಕೆ ಬರಲಿದೆ. ಅಷ್ಟೇ ಅಲ್ಲದೆ ಹಣ ಮತ್ತು ಸಮಯ ಉಳಿಯಲಿದೆ ಎಂಬ ವಿಶ್ವಾಸವಿದೆ. ಕೇಂದ್ರದ ಐಸಿಎಆರ್‌ನಿಂದ ರಾಯಚೂರು ಕೃಷಿ ವಿಶ್ವ ವಿದ್ಯಾಲಯಕ್ಕೆ ಮೂರು ಡ್ರೋನ್‌ಗಳು ಮಂಜೂರಾಗಿದೆ.

ರಾಯಚೂರು, ಗಂಗಾವತಿ ಮತ್ತು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರಗಳಿಗೆ ಡ್ರೋನ್‌ಗಳನ್ನು ಒದಗಿಸಲಾಗುವುದು. ಇವುಗಳನ್ನು ರೈತರಿಗೆ ಪ್ರಾಯೋಗಿಕ ಮಾಹಿತಿ ನೀಡಲು ಬಳಸಲಾಗುತ್ತದೆ. ಡ್ರೋನ್‌ ಬಳಸಿ ಕ್ರಿಮಿನಾಶಕ ಸಿಂಪಡಣೆ ಸುಲಭವಾಗಲಿದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+