ರಾಯಚೂರು: ಕೋಟಿ ರೂಪಾಯಿ ಸಂಬಳ ಬಾಕಿ, ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಲ್ಲಿ ಆತಂಕ

ರಾಯಚೂರು, ಜುಲೈ, 17: ನಗರ, ಗ್ರಾಮೀಣ ಬಡವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರವನ್ನು ಕಡಿಮೆ ದರದಲ್ಲಿ ನೀಡುವ ಕ್ಯಾಂಟೀನ್‌ ಅಂದರೆ ಅದು ಇಂದಿರಾ ಕ್ಯಾಂಟೀನ್ ಆಗಿದೆ. ಆದರೆ ಜಿಲ್ಲೆಯಲ್ಲಿರು ಇಂದಿರಾ ಕ್ಯಾಂಟೀನ್‌ಗಳನ್ನು ಗುತ್ತಿಗೆ ಪಡೆದವರಿಗೆ ಕಳೆದ ನಾಲ್ಕು ತಿಂಗಳಿಂದ ಸುಮಾರು ಒಂದು ಕೋಟಿ ರೂಪಾಯಿ ಹಣ ಬಾಕಿ ಉಳಿದಿದ್ದು, ಸ್ಥಳೀಯ ಸಂಸ್ಥೆಗಳು ಹಣ ಹೊಂದಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ರಾಯಚೂರು ನಗರದ ಬಸ್ ನಿಲ್ದಾಣ , ಎಪಿಎಂಸಿ, ಸ್ಟೇಶನ್ ವೃತ್ತ ಸೇರಿ ತಾಲೂಕು ಕೇಂದ್ರಗಳು ಸೇರಿ ಒಟ್ಟು ಏಳು ಕಡೆ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿತ್ತು. ನಂತರ ಬಂದ ಸಮ್ಮಿಶ್ರ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೇಲುಸ್ತುವಾರಿ ಕೊರತೆಯಿಂದ ರಾಜ್ಯದಲ್ಲಿ ತಾತ್ಸರಕ್ಕೆ ಒಳಗಾಗಿದ್ದವು. ಆದರೆ ಆಗ ಜಿಲ್ಲೆಯಲ್ಲಿ ಕ್ಯಾಂಟೀನ್‌ಗಳು ನಡೆದಿದ್ದು ಕೇವಲ ನಾಲ್ಕು ತಿಂಗಳು ಮಾತ್ರ. ಈ ವೇಳೆಯ ಬಾಕಿ ಹಣ ಗುತ್ತಿಗೆದಾರರಿಗೆ ಬಾರದೇ ಇರುವುದರಿಂದ ತೀವ್ರ ತೊಂದರೆಯಾಗಿದೆ.

Crore rupees Salary Pending, Indira Canteens Contractors worried in Raichur district

ಆದರೂ ರಾಜ್ಯದಲ್ಲಿ ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ. ಹಣಕಾಸಿನ ಕೊರತೆಯಿಂದಾಗಿ ಆಹಾರ ಗುತ್ತಿಗೆ ಪಡೆದ ಗುತ್ತಿಗೆದಾರ ತಮ್ಮ ನೌಕರರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಪ್ರಸ್ತುತ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ವೇತನ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆಯೂ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವ ಕುತೂಹಲ ಇದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಇಂದಿರಾ ಕ್ಯಾಂಟೀನ್‌ಗಳ ವಾಸ್ತವದ ಸ್ಥಿತಿ ಪರಿಶೀಲನೆ ಮಾಡಿಸಿದ್ದಲ್ಲದೇ ಹೆಚ್ಚುವರಿ ಕ್ಯಾಂಟೀನ್‌ಗಳ ಅಗತ್ಯತೆ ಕುರಿತು ಮಾಹಿತಿ ಕೇಳಿದೆ. ಈ ಮಾಹಿತಿಯನ್ನು ಆಧಾರಿಸಿ ಜಿಲ್ಲಾ ನಗರ ಕೋಶದ ಅಧಿಕಾರಿಗಳು, ಆಯಾ ಸ್ಥಳೀ ಯ ಸಂಸ್ಥೆಗಳ ವರದಿ ಪಡೆದು ಜಿಲ್ಲಾ ಕೇಂದ್ರದಲ್ಲಿ ಹೆಚ್ಚುವರಿ ಕ್ಯಾಂಟೀನ್‌ಗಳನ್ನು ಆರಂಭಿಸುವ ಬಗ್ಗೆ ಯೋಜಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.

ಕ್ಯಾಂಟೀನ್‌ಗಳು ಸುಸ್ಥಿತಿಯಲ್ಲಿ ನಡೆಸುವಂತೆ ಸೂಚನೆ ನೀಡಿ ನಿಗಾ ವಹಿಸಬೇಕು. ನಂತರ ಆಗಾಗ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗೆ ಅಗತ್ಯ ಸಲಹೆ ಸೂಚನೆ ನೀಡಿ ಕ್ಯಾಂಟೀನ್ ಸುತ್ತಲ ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಲು ಜಿಲ್ಲಾ ನಗರ ಕೋಶದ ಅಧಿಕಾರಿಗಳು ಸೂಚಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ, ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರು ಉಸಿರಾಡುವಂತಾಗಿದೆ. ಇದರಿಂದ ಬಡವರು, ವಿದ್ಯಾರ್ಥಿಗಳಿಗೆ ಬಲ ಬಂದಿದ್ದರೆ, ಸ್ಥಳೀಯ ಸಂಸ್ಥೆಗಳು ಹಣ ಹೊಂದಿಸುವ ಮಾರ್ಗ ಹುಡುಕುತ್ತಿವೆ.

ಬೆಳಗ್ಗೆ ಉಪಹಾರಕ್ಕೆ 5 ರೂಪಾಯಿ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು 10 ರೂಪಾಯಿಗೆ ನೀಡಲಾಗುತ್ತಿದೆ. ಪ್ರತಿನಿತ್ಯ ಉಪಹಾರಕ್ಕೆ 300 ಮತ್ತು ಊಟಕ್ಕೆ 500 ಟೋಕನ್ ವಿತರಿಸಲಾಗುತ್ತಿದ್ದು, ಸಿಂಧನೂರು, ಲಿಂಗಸೂಗೂರಿನಲ್ಲಿ ತುಸು ಬೇಡಿಕೆ ಹೆಚ್ಚಿದೆ ಎನ್ನುವ ಕಾರಣಕ್ಕೆ ಅಲ್ಲಿ ಉಪಹಾರಕ್ಕೆ 500 ಟೋಕನ್ ಹೆಚ್ಚಿಸುವ ಬೇಡಿಕೆಯೂ ಈಗ ಚಿಗುರೊಡೆದಿದೆ.

ಜಿಲ್ಲೆಯ ಏಳು ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸುತ್ತಿರುವ ಗುತ್ತಿಗೆದಾರರಿಗೆ ಈ ಹಿಂದೆ ಸರ್ಕಾರ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಫೆಬ್ರವರಿ, ಮಾರ್ಚ್‌, ಏಪ್ರಿಲ್ ತಿಂಗಳವರೆಗೆ 88,71,650 ರೂಪಾಯಿ ಬಾಕಿ ಇದ್ದು, ಮೇ ಮತ್ತು ಜೂನ್ ತಿಂಗಳು ಸೇರಿದರೆ ಆ ಮೊತ್ತ 1 ಕೋಟಿ ರೂಪಾಯಿಗಳ ಬಾಕಿ ಉಳಿದಂತಾಗಲಿದೆ.

ಜಿಲ್ಲೆಯ ಗುತ್ತಿಗೆದಾರರಿಗೆ ಪಾವತಿಸಬೇಕಾದ ಹಣ ಪಾವತಿಗೆ ಪ್ರಕ್ರಿಯೆಗಳು ನಡೆಯುತ್ತಿದೆ. ಆದರೂ ಸ್ಥಳೀಯ ಸಂಸ್ಥೆಗಳಿಗೆ ಈ ಜವಾಬ್ದಾರಿ ಇರುವುದರಿಂದ ಸದ್ಯ ರಾಯಚೂರು ಜಿಲ್ಲಾ ನಗರಾಭಿವೃದ್ಧಿ ಕೋಶ, ಇಂದಿರಾ ಕ್ಯಾಂಟೀನ್‌ಗಾಗಿ ತೆಗೆದ ಪ್ರತ್ಯೇಕ ಖಾತೆಯಲ್ಲಿ 40 ಲಕ್ಷದ 90 ಸಾವಿರ ರೂಪಾಯಿ ಇದೆ. ಈ ಹಣ ಗುತ್ತಿಗೆದಾರರಿಗೆ ಪೂರೈಸಲು ಸಾಕಾಗುತ್ತಿಲ್ಲ. ಹೀಗಾಗಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಜಿಲ್ಲೆಯ ಏಳು ಕಡೆ ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿಗತಿಗಳನ್ನು ಪರಿಶೀಲಿಸಲಾಗಿದೆ. ಗುತ್ತಿಗೆದಾರರ ಬಾಕಿ ಹಣವನ್ನು ಎರಡು ದಿನಗಳಲ್ಲಿ ಪಾವತಿಸಲಾಗುವುದು. ಲಿಂಗಸೂಗೂರಿನಲ್ಲಿ ಟೋಕನ್ ಹೆಚ್ಚಿಸುವ ಬೇಡಿಕೆ ಬಂದಿದೆ ಎಂದು ಜಿಲ್ಲಾ ನಗರಕೋಶ ಯೋಜನಾಧಿಕಾರಿ ಆಶಪ್ಪ ಪೂಜಾರಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+