ರಾಯಚೂರು ನಿಗೂಢ ಸ್ಫೋಟ: ಬಾಂಗ್ಲಾ ರಾಸಾಯನಿಕ ಕಾರಣ
ರಾಯಚೂರು, ಅಕ್ಟೋಬರ್ 10: ರಾಯಚೂರಿನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು ಸ್ಫೋಟಕ್ಕೆ ಬಾಂಗ್ಲಾ ರಾಸಾಯನಿಕವೇ ಕಾರಣ ಎಂದು ತಿಳಿದುಬಂದಿದೆ.
ಅಕ್ಟೋಬರ್ 5 ರಂದು ಸ್ಫೋಟ ಸಂಭವಿಸಿತ್ತು, ಅನಂತಮ್ಮ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಅವರ ಲಕ್ಷ್ಮಣ್ ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ದಿಗ್ವಿಜಯ ನ್ಯೂಸ್ಗೆ ಸಿಕ್ಕಿದ್ದು, ಅದರಲ್ಲಿ ಸ್ಫೋಟದ ತೀವ್ರತೆಯನ್ನು ಸ್ಪಷ್ಟವಾಗಿ ಗೋಚರಿಸುತ್ತದೆ.
ಸ್ಥಳದಲ್ಲಿ ಪತ್ತೆಯಾಗಿದ್ದ ಎಎಸ್‌ಎಂ ಎನ್ನುವ ಹೆಸರಿರುವ ಎಬ್ಬವನ್ನು ಜಪ್ತಿ ಮಾಡಲಾಗಿತ್ತು, ಅದನ್ನು ಎಫ್‌ಎಸ್‌ಎಲ್ ಗೆ ಪೊಲೀಸರು ರವಾನೆ ಮಾಡಿದ್ದರು. ಬಾಂಗ್ಲಾ ದೇಶದಲ್ಲಿ ತಯಾರಾಗುವ ಕೆಮಿಕಲ್ ನಿಂದ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸ್ಥಳದಲ್ಲಿ ಜಪ್ತಿಯಾದ ರಾಸಾಯನಿಕಗಳನ್ನು ಎಫ್ಎಸ್ಎಲ್ಗೆ ರವಾನಿಸಲಾಗಿದೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ರಾಸಾಯನಿಕದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿದು ಬಂದಿದೆ.
ದೆಹಲಿ ಮೂಲದ ಕಂಪನಿ ಈ ರಾಸಾಯನಿಕವನ್ನು ಆಮದು ಮಾಡಿಕೊಳ್ಳುತ್ತೆ. ಗ್ರಾನೈಟ್ ಫ್ಯಾಕ್ಟರಿ, ಟೈಲ್ಸ್ ಫ್ಯಾಕ್ಟರಿಗಳಲ್ಲಿ ಈ ರಾಸಾಯನಿಕವನ್ನು ಬಳಸಲಾಗುತ್ತದೆ. ಈ ರಾಸಾಯನಿಕದಲ್ಲಿ H2SO2 ಅಥವಾ TNT ಇರುವ ಸಾಧ್ಯತೆ ಎನ್ನಲಾಗಿದೆ. ಇತ್ತೀಚಿಗೆ ಸುಧಾರಿತ ಬಾಂಬ್ ತಯಾರಿಕೆಗೆ ಟಿಎನ್ಟಿ ಬಳಕೆ ಮಾಡಲಾಗುತ್ತಿದೆ












Click it and Unblock the Notifications