ರಾಯಚೂರು: ದಿನೇ ದಿನೇ ಬೆಳೆಯುತ್ತಲೇ ಇದೆ ಹಾರುಬೂದಿ ಆತಂಕ

ರಾಯಚೂರು, ಜೂನ್.29: ರಾಜ್ಯಕ್ಕೆ ಬೆಳಕು ನೀಡುತ್ತಿರುವ ಆರ್​ಟಿಪಿಎಸ್​ ಮತ್ತು ವೈಟಪಿಎಸ್​ ಘಟಕಗಳು ಮುಂದಿನ ವರ್ಷಗಳಲ್ಲಿ ಬೀಗ ಹಾಕಲಿವೆಯಾ? ಹೀಗೊಂದು ಆತಂಕ ಇದೀಗ ದಟ್ಟವಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯುತ್​ ಉತ್ಪಾದನೆ ಬಳಿಕ ಉಂಟಾಗುವ ಹಾರು ಬೂದಿ ಸಮಸ್ಯೆ ದಿನೇ ದಿನೇ ಬೆಳೆಯುತ್ತಿದೆ.

ಈ ಸಂಬಂಧ ಕೇಂದ್ರದ ಹಾರುಬೂದಿ ಹೊಂಡ ಅಧ್ಯಯನ ಸಮಿತಿ ವರದಿ ನೀಡಿದೆ. ರಾಜ್ಯ ಬೆಳಕಿನಲ್ಲಿರಬೇಕಾದರೆ ರಾಯಚೂರು ಬಳಿಯ ಆರ್​ಟಿಪಿಎಸ್​ ಮತ್ತು ವೈಟಿಪಿಎಸ್​​ ಘಟಕಗಳಲ್ಲಿ ಕಲ್ಲಿದ್ದಲು ಸದಾ ಸುಡುತ್ತಲಿರಬೇಕು. ಇಡೀ ರಾಜ್ಯದ ಶೇಕಡ 40ರಷ್ಟು ವಿದ್ಯುತ್​ ಕ್ಷಾಮವನ್ನು ಆರ್​ಟಿಪಿಎಸ್​ ಹಾಗೂ ವೈಟಿಪಿಎಸ್​ ಘಟಕಗಳು ನಿಭಾಯಿಸುತ್ತವೆ.

ಆರ್​ಟಿಪಿಎಸ್​​ ಮತ್ತು ವೈಟಪಿಎಸ್​​ನಲ್ಲಿ 10 ವಿದ್ಯುತ್ ಉತ್ಪಾದನಾ ಘಟಕಗಳಿದ್ದು, ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಬಳಕೆಯಾಗುತ್ತಿದೆ. ಕಲ್ಲಿದ್ದಲು ಬಳಸಿ ವಿದ್ಯುತ್​ ಉತ್ಪಾದಿಸಿದ ನಂತರ ಉಂಟಾಗುವ ಹಾರುಬೂದಿಯಿಂದ ಆರ್​ಟಿಪಿಎಸ್​​ ಹಾಗೂ ವೈಟಿಪಿಎಸ್​ಗೆ ಆತಂಕ ಎದುರಾಗಿದೆ.

After the power generated fly ash problem growing daily in Raichur

ಹಾರುಬೂದಿ ಸಂಗ್ರಹಣೆ ಮತ್ತು ನಿರ್ವಹಣೆ ಕೊರತೆಯಿಂದ ವಿದ್ಯುತ್ ಉತ್ಪಾದನಾ ಘಟಕಗಳು ಮುಂದಿನ ದಿನಗಳಲ್ಲಿ ಬಂದ್​ ಆಗುವ ಸಾಧ್ಯತೆಯಿದೆ. ಈ ಸಂಬಂಧ ಅಧ್ಯಯನ ಸಮಿತಿಯೊಂದು ಕೆಪಿಸಿಎಲ್​ಗೆ ಎಚ್ಚರಿಕೆ ನೀಡಿದೆ.

ಕಲ್ಲಿದ್ದಲು ಆಧಾರಿತ ವಿದ್ಯುತ್​ ಉತ್ಪಾದನಾ ಘಟಕಗಳನ್ನು ಆರಂಭಿಸುವಾಗ ಹಾರು ಬೂದಿಯ ನಿರ್ವಹಣೆಗೂ ಯೋಜನೆ ರೂಪಿಸಲಾಗಿದೆ. ಅದರಂತೆ ಆರ್​ಟಿಪಿಎಸ್​​ ಘಟಕದ ಬಳಿ ಸಾವಿರಾರು ಎಕರೆ ಪ್ರದೇಶದಲ್ಲಿ ಹಾರುಬೂದಿ ಸಂಗ್ರಹ ಹೊಂಡಗಳನ್ನು ಸ್ಥಾಪಿಸಲಾಗಿದೆ.

ಯೋಜನೆಯಂತೆ ಹಾರು ಬೂದಿ ಹೊಂಡಗಳು 2021ರ ವೇಳೆಗೆ ಭರ್ತಿಯಾಗಬೇಕು. ಆದರೆ ಆರ್​ಟಿಪಿಎಸ್​​ ಹಾಗೂ ವೈಟಿಪಿಎಸ್​ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಮುಂದಿನ ಎರಡು ವರ್ಷಗಳಲ್ಲಿ ಹಾರು ಬೂದಿ ಹೊಂಡಗಳು ತುಂಬಲಿದೆ.

After the power generated fly ash problem growing daily in Raichur

ಹಾಗಾದರೆ ಮುಂದೆ ಹಾರುಬೂದಿ ನಿರ್ವಹಣೆ ಹೇಗೆ ಎಂಬುದು ಪ್ರಶ್ನೆಯಾಗಿದೆ. ವಿದ್ಯುತ್​ ಸ್ಥಾವರಗಳಿಂದ ಹೊರಹೊಮ್ಮುವ ಹಾರು ಬೂದಿಯ 75ರಷ್ಟು ಭಾಗವನ್ನು ಸಿಮೆಂಟ್​​ ಸೇರಿದಂತೆ ಸಣ್ಣ ಕೈಗಾರಿಕೆಗಳಿಗೆ ವಿತರಿಸಬೇಕು. ಇನ್ನುಳಿದ ಭಾಗವನ್ನು ನೀರಿನಲ್ಲಿ ಮಿಶ್ರಣ ಮಾಡಿ ಹೊಂಡಕ್ಕೆ ಬಿಡಬೇಕು.

ಆದರೆ ನಿಯಮ ಪಾಲನೆಯಾಗುತ್ತಿಲ್ಲದ್ದರಿಂದ ಹಾರು ಬೂದಿ ಸಮಸ್ಯೆ ಬೃಹತ್​ ಪ್ರಮಾಣದಲ್ಲಿ ಬೆಳೆದಿದೆ.

ಅವೈಜ್ಞಾನಿಕ ಹಾರು ಬೂದಿ ವಿಲೇವಾರಿ ಬಗ್ಗೆ ಕೇಂದ್ರದ ಹಾರುಬೂದಿ ಹೊಂಡ ಅಧ್ಯಯನ ಸಮಿತಿ ವರದಿ ನೀಡಿದ್ದು, ಸದ್ಯ ಇರುವ ಹೊಂಡವನ್ನ 5 ಮೀಟರ್​ ಎತ್ತರ ಹಾಗೂ ಮೂರೂವರೆ ಕಿಲೋ ಮೀಟರ್​​ ಉದ್ದ ಹೆಚ್ಚಿಸುವ ಯೋಜನೆ ಕೈಗೆತ್ತಿಕೊಂಡಿದ್ದಾರೆ.

ಶೇಕಡ 75ರಷ್ಟು ಹಾರುಬೂದಿಯನ್ನ ವಿತರಣೆ ಮಾಡದೇ ಮುಂದುವರೆಸಿದರೆ ಸುತ್ತಲಿನ ಪರಿಸರ, ಜೀವ ಸಂಕುಲಕ್ಕೆ ಧಕ್ಕೆ ಎದುರಾಗಲಿದೆ. ಹೀಗಾಗಿ ಆರ್​ಟಿಪಿಎಸ್​ ಹಾಗೂ ವೈಟಿಪಿಎಸ್ ಅಧಿಕಾರಿಗಳು ಯಾವ ಮುಂಜಾಗ್ರತ ಕ್ರಮಕೈಗೊಳ್ಳುತ್ತಾರೆಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+