ವಿಡಿಯೋ; ಬಾನೆಟ್ ಮೇಲೆ ಪೊಲೀಸ್, ಕಾರು ನಿಲ್ಲಿಸದ ಚಾಲಕ

ಪುಣೆ, ನವೆಂಬರ್ 06: ಕರ್ತವ್ಯ ನಿರತರಾಗಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಕಾರು ಚಾಲಕ ಬಾನೆಟ್ ಮೇಲೆ ಬಹುದೂರ ಎಳೆದುಕೊಂಡು ಹೋದ ಘಟನೆ ಪುಣೆಯಲ್ಲಿ ನಡೆದಿದೆ. ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನನ್ನು ಬಂಧಿಸಿದ್ದಾರೆ.

ಪುಣೆಯ ಪಿಂಪರಿ-ಚಿಂಚೌಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಕಾರು ಚಾಲಕನನ್ನು ಕರ್ತವ್ಯ ನಿರತ ಸಂಚಾರಿ ಪೇದೆ ತಡೆಯಲು ಬಂದಿದ್ದಾರೆ. ಆಗ ಕಾರು ನಿಲ್ಲಿಸದೇ ಚಾಲಕ ಸಾಗಿದ್ದಾನೆ.

 Viral Video Traffic Police Personnel Dragged

ಕಾರು ಚಲಿಸುತ್ತಿದ್ದಂತೆ ಸಂಚಾರಿ ಪೊಲೀಸ್ ಪೇದೆ ಕಾರಿನ ಬಾನೆಟ್ ಮೇಲೆ ಹತ್ತಿದ್ದಾರೆ. ಆದರೂ ಸಹ ಚಾಲಕ ಕಾರು ನಿಲ್ಲಿಸದೇ ಬಹುದೂರ ಎಳೆದುಕೊಂಡು ಹೋಗಿದ್ದಾನೆ. ಈ ವಿಡಿಯೋಗಳು ಈಗ ವೈರಲ್ ಆಗಿವೆ.

ವೈರಲ್ ಆಗಿರುವ ವಿಡಿಯೋ

ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿಯೂ ಇದೇ ಮಾದರಿಯ ಘಟನೆ ನಡೆದಿತ್ತು. ಕಾರನ್ನು ತಡೆದರೂ ನಿಲ್ಲಿಸದ ಚಾಲಕ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಎಳೆದುಕೊಂಡು ಹೋಗಿದ್ದ, ಪೊಲೀಸರು ಬಂಧಿಸಿ, ಪ್ರಕರಣವನ್ನು ದಾಖಲು ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+