ಗೆಳತಿ ವಂಚಿಸುತ್ತಿದ್ದಾಳೆಂಬ ಗುಮಾನಿಯಲ್ಲಿ ಇರಿದು ಕೊಂದ ಯುವಕ
ಪುಣೆ, ಜೂನ್ 13: ತನ್ನ ಗೆಳತಿ ವಂಚಿಸುತ್ತಿದ್ದಾಳೆ ಎಂಬ ಅನುಮಾನದಿಂದ ಇಪ್ಪತ್ತೈದು ವರ್ಷದ ಯುವಕನೊಬ್ಬ ಇಪ್ಪತ್ತೆರಡು ವರ್ಷದ ಯುವತಿಗೆ ಇರಿದು ಕೊಂದ ಘಟನೆ ಪುಣೆಯ ಚಂದನ್ ನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೀಣಾ ಪಾಟ್ಲೆ ಕೊಲೆಯಾದ ಯುವತಿ. ಕಿರಣ್ ಶಿಂಧೆ ಆರೋಪಿ.
ಶಿಂಧೆ ಹಾಗೂ ಪಾಟ್ಲೆ ಒಂದೇ ಐಟಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಅವರಿಬ್ಬರ ಸ್ಸ್ನೇಹ ಸಂಬಂಧವಾಗಿ ಮಾರ್ಪಟ್ಟಿತ್ತು. ವೀಣಾ ತನ್ನನ್ನು ವಂಚಿಸುತ್ತಿದ್ದಾಳೆ ಎಂಬ ಅನುಮಾನ ಶಿಂಧೆಯನ್ನು ಕಾಡಲು ಆರಂಭಿಸಿದೆ. ಕಳೆದ ಕೆಲವು ದಿನಗಳಿಂದ ಯಾರ ಜತೆಗೂ ಶಿಂಧೆ ಸಂಪರ್ಕದಲ್ಲಿ ಇರಲಿಲ್ಲ. ಪಾಟ್ಲೆ ಹಾಗೂ ಶಿಂಧೆ ಇಬ್ಬರಿಗೂ ಸ್ನೇಹಿತನಾದ ಪ್ರಕಾಶ್ ಗಪತ್ ಮಂಗಳವಾರ ರಾತ್ರಿ ಚಂದನ್ ನಗರ್ ಗೆ ಬಂದಿದ್ದ.

ವೀಣಾ ಜತೆಗೆ ವಾಗ್ವಾದ ಶುರು ಮಾಡಿದ ಕಿರಣ್ ಆಕೆಗೆ ಚೂಪಾದ ಆಯುಧದಿಂದ ಇರಿದಿದ್ದಾನೆ. ಆ ನಂತರ ಸ್ಥಳದಿಂದ ಪರಾರಿ ಆಗಿದ್ದಾನೆ. ಆಸ್ಪತ್ರೆಗೆ ಕರೆದೊಯ್ದ ಮೇಲೆ ವೀಣಾ ಸಾವನ್ನಪ್ಪಿದ್ದಾಳೆ. ಈ ದುರ್ಘಟನೆ ನಂತರ ಪರಾರಿ ಆಗಿರುವ ಕಿರಣ್ ಶಿಂಧೆ ಈ ತನಕ ಪತ್ತೆಯಾಗಿಲ್ಲ. ಅವನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.












Click it and Unblock the Notifications