ಪುಣೆಯಲ್ಲಿ ಪತ್ನಿ ರುಂಡ ಕತ್ತರಿಸಿ ರಸ್ತೆಗಿಳಿದ ಪತಿ

ಪುಣೆ, ಅ.09: ಮಹಾರಾಷ್ಟ್ರದ ಪುಣೆಯ ರಸ್ತೆಯಲ್ಲಿ ಕಂಡ ಭೀಕರ ದೃಶ್ಯ ಕಂಡು ಸಾಮಾಜಿಕ ಜಾಲ ತಾಣದಲ್ಲಿ ವಿಹರಿಸುವವರು ಬೆಚ್ಚಿದ್ದಾರೆ. ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆಕೆಯ ರುಂಡವನ್ನು ಹಿಡಿದುಕೊಂಡು ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಘಟನೆ ಶುಕ್ರವಾರ ನಡೆದಿದೆ.

ಎನ್ ಡಿಟಿವಿ ವರದಿ ಪ್ರಕಾರ, ರಾಮಚಂದ್ರ ಚಾವಣ್ ಎಂಬ 60 ವರ್ಷ ವಯಸ್ಸಿನ ವ್ಯಕ್ತಿ ತನ್ನ 55 ವರ್ಷ ವಯಸ್ಸಿನ ಮಹಿಳೆ ಸೊನಾಭಾಯಿ ಅವರನ್ನು ಕೊಂದು ರುಂಡ ಹಿಡಿದುಕೊಂಡು ರಸ್ತೆಗಿಳಿದಿದ್ದಾರೆ. ಒಂದಿಬ್ಬರು ಸಾರ್ವಜನಿಕರು ಗಾಬರಿಕೊಂಡು ನೋಡುತ್ತಿದ್ದಂತೆ ಈತ ಅಲ್ಲಿದ್ದ ಟ್ರಾಫಿಕ್ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ.

Man walks with wife's severed head on road, arrested

ತಕ್ಷಣವೇ ಆತನನ್ನು ತಡೆ ಹಿಡಿದಿದ್ದಾರೆ. ಪುಣೆಯಲ್ಲಿರುವ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ? : ಧೋತಿ ಹಾಗೂ ಕುರ್ತಾ ತೊಟ್ಟ ರಾಮ್ ಅವರು ಒಂದು ಕೈಯಲ್ಲಿ ಕತ್ತಿ ಇನ್ನೊಂದು ಕೈಯಲ್ಲಿ ರುಂಡವನ್ನು ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುತ್ತಾರೆ. ಅವರನ್ನು ಇಬ್ಬರು ಟ್ರಾಫಿಕ್ ಪೊಲೀಸರು ತಡೆಯುತ್ತಾರೆ.

ನಂತರ ಆ ರುಂಡವನ್ನು ಬಟ್ಟೆಯಿಂದ ಸುತ್ತುತ್ತಾರೆ. ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದ ಕಾರಣ ಆಕೆಯನ್ನು ಕೊಲೆ ಮಾಡಿದೆ ಎಂದು ರಾಮಚಂದ್ರ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+