ಚಿತ್ರಗಳು: ಕಡಲಿನಲ್ಲಿ ಕೊಚ್ಚಿ ಹೋದ ಪುಣೆ ವಿದ್ಯಾರ್ಥಿಗಳು

Posted By:
Subscribe to Oneindia Kannada

ಪುಣೆ, ಫೆ.03: ಮಹಾರಾಷ್ಟ್ರದ ರಾಯಗಢದ ಮುರುದ್ ಬೀಚ್​ನಲ್ಲಿ ವಿದ್ಯಾರ್ಥಿಗಳು ಕೊಚ್ಚಿ ಹೋದ ಕಹಿ ಘಟನೆಯ ನೋವು ತಿಳಿದಿರಬಹುದು. ಸೋಮವಾರ ನಡೆದ ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮಂಗಳವಾರ ಬೆಳಗ್ಗೆ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆಯಾಗಿತ್ತು. ಬುಧವಾರ ಪೋಷಕರು ಪುಣೆಯ ಕಾಲೇಜಿನ ಮುಂದೆ ಪ್ರತಿಭಟನೆ ನಿರತರಾಗಿದ್ದಾರೆ.

ಪುಣೆಯ ಅಬೇದ ಇನಾಂದರ್ ಕಾಲೇಜಿನ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಕನಿಷ್ಠ ನಾಲ್ಕು ವಿದ್ಯಾರ್ಥಿಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಅಲೆಗಳ ಹೊಡೆತಕ್ಕೆ ಸಿಲುಕಿ 14 ಜೀವಗಳು ಕಳೆದು ಹೋಗಿವೆ.

ಶಿಕ್ಷಕರು ಸರಿಯಾದ ಜವಾಬ್ದಾರಿ ವಹಿಸಿದ್ದರೆ ಈ ದುರಂತ ತಪ್ಪಿಸಬಹುದಾಗಿತ್ತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಸಾವನ್ನಪ್ಪಿರುವವರ ವಯಸ್ಸು 19 ರಿಂದ 23ರೊಳಗೆ ಇದೆ. ಐದು ಮಂದಿ ಶಿಕ್ಷಕ ವರ್ಗ ಹಾಗೂ ಸಹಾಯಕ ಸಿಬ್ಬಂದಿ ಈ ಪಿಕ್ನಿಕ್ ಗೆ ಬಂದಿದ್ದರು.

ಸಮುದ್ರದಲ್ಲಿ ಕೊಚ್ಚಹೋಗಿದ್ದ ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಯುತ್ತಿದ್ದು, ನೌಕಾಪಡೆ, ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ನೌಕಾಪಡೆ ಹೆಲಿಕ್ಯಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸುತ್ತಿದೆ.ಇನ್ನೂ 10 ರಿಂದ 12 ವಿದ್ಯಾರ್ಥಿಗಳ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ಇಷ್ಟೊಂದು ಸಾವು ನೋವಿಗೆ ಕಾರಣವೇನು? ಈ ಬಗ್ಗೆ ಯಾವ ರೀತಿ ತನಿಖೆ ನಡೆಸಲಾಗುತ್ತಿದೆ. ರಕ್ಷಣಾ ಕಾರ್ಯ ಎತ್ತ ಸಾಗಿದೆ ಎಂಬುದರ ವಿವರ ಮುಂದಿದೆ...

ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ

ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ

ಮಹಾರಾಷ್ಟ್ರದ ರಾಯಗಢದ ಮುರುದ್ ಬೀಚ್​ನಲ್ಲಿ ವಿದ್ಯಾರ್ಥಿಗಳು ಕೊಚ್ಚಿ ಹೋದ ಕಹಿ ಘಟನೆಯ ನೋವು ತಿಳಿದಿರಬಹುದು. ಸೋಮವಾರ ನಡೆದ ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮಂಗಳವಾರ ಬೆಳಗ್ಗೆ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆಯಾಗಿತ್ತು. ಬುಧವಾರ ಪೋಷಕರು ಪುಣೆಯ ಕಾಲೇಜಿನ ಮುಂದೆ ಪ್ರತಿಭಟನೆ ನಿರತರಾಗಿದ್ದಾರೆ.

ಅವಳಿ ಮಕ್ಕಳನ್ನು ಕಳೆದುಕೊಂಡ ತಂದೆ

ಅವಳಿ ಮಕ್ಕಳನ್ನು ಕಳೆದುಕೊಂಡ ತಂದೆ

ರಫಿಯಾ, ಶಫಿಯಾ ಎಂಬ ಅವಳಿ ಮಕ್ಕಳನ್ನು ಕಳೆದುಕೊಂಡ ತಂದೆ ಮುಮ್ತಾ ಅನ್ಸಾರಿ ಅವರ ದುಃಖ ಹೇಳ ತೀರದಾಗಿದೆ. ನನಗೆ ಇನ್ನೂ ನನ್ನ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬುದನ್ನು ನಂಬಲು ಆಗುತ್ತಿಲ್ಲ ಎನ್ನುತ್ತಿದ್ದಾರೆ.

ಪ್ರಾಣ ಉಳಿಸಿ ಪ್ರಾಣ ತೆತ್ತ ಇಫ್ತೆಕಾರ್

ಪ್ರಾಣ ಉಳಿಸಿ ಪ್ರಾಣ ತೆತ್ತ ಇಫ್ತೆಕಾರ್

ಹಲವರ ಪ್ರಾಣ ಉಳಿಸಿ ಪ್ರಾಣ ತೆತ್ತ ವಿದ್ಯಾರ್ಥಿ ಇಫ್ತೆಕಾರ್ ಶೇಖ್ ಬಗ್ಗೆ ಮಾತನಾಡಿದ ಆತನ ತಮ್ಮ ಪರ್ವೇಜ್ ಶೇಖ್. ನನ್ನ ಅಣ್ಣ ಜೀವವನ್ನು ಪಣಕ್ಕಿಟ್ಟು ಕೆಲವರಿಗೆ ಜೀವ ನೀಡಿದ್ದಾನೆ. ಕ್ರಿಕೆಟ್ ಎಂದರೆ ಪ್ರಾಣ ಬಿಡುತ್ತಿದ್ದ ಆತ ಈಗ ಹೀರೋ ರೀತಿ ಪ್ರಾಣ ಬಿಟ್ಟಿದ್ದಾನೆ ಎಂದು ಕಣ್ಣೀರಿಟ್ಟಿದ್ದಾನೆ. ಚಿತ್ರದಲ್ಲಿ: ದುರಂತದಲ್ಲಿ ಬದುಕುಳಿದ ವಿದ್ಯಾರ್ಥಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ.

ಕಣ್ಣೀರು ಒರೆಸಲು ಕೈಗಳು ಸಾಲುತ್ತಿಲ್ಲ

ಕಣ್ಣೀರು ಒರೆಸಲು ಕೈಗಳು ಸಾಲುತ್ತಿಲ್ಲ

ಶಿಕ್ಷಣ ಇಲಾಖೆಯಿಂದ ಈ ರೀತಿ ಪಿಕ್ನಿಕ್ ಹೋಗುವಾಗ ಸುರಕ್ಷತಾ ನಿಯಮ ಪಾಲಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಹಿರಿಯ ಅಧಿಕಾರಿಗಳಿಂದ ಶಿಕ್ಷಕರ ನಿರ್ಲಕ್ಷ್ಯದ ಬಗ್ಗೆ ತನಿಖೆ ಆರಂಭವಾಗಿದೆ. ಆದರೆ, ಪೋಷಕರ ಕಣ್ಣೀರು ಒರೆಸಲು ಕೈಗಳು ಸಾಲುತ್ತಿಲ್ಲ. ನೌಕಾಪಡೆ ಇಂಟರ್ ಸೆಪ್ಟರ್ ಹಾಗೂ ಚೇತಕ್ ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯ, ಶೋಧ ಕಾರ್ಯ ನಡೆಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pics: Deadly Picnic! Over 14 Pune students drown in sea near Raigad, search operations underway. Students from Pune's Inamdar College went to Murud main beach near Raigad, Maharashtra on Monday, Feb 1. The students had gone for a picnic but they did not know that the picnic would turn into a nightmare.
Please Wait while comments are loading...