ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರ ಗುಂಪಿನ ಮೇಲೆ ಹುಲಿ ದಾಳಿ, ಮೂವರಿಗೆ ಗಾಯ: ವೈರಲ್ ವಿಡಿಯೋ

|
Google Oneindia Kannada News

ಭಂಡಾರಾ, ಜನವರಿ 26: ಎದೆ ಝಲ್ಲೆನಿಸುವ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿ ಹುಲಿಯೊಂದು ದಾಳಿ ನಡೆಸಿ ಮೂವರನ್ನು ಗಂಭೀರವಾಗಿ ಗಾಯಗೊಳಿಸಿದೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ತುಮಸರ್ ಪ್ರದೇಶದ ಬಿನಾಕಿ ಎಂಬ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೂವರನ್ನು ಗಾಯಗೊಳಿಸಿರುವ ಹುಲಿಯು ಈ ಪ್ರದೇಶದ ಸುತ್ತಮುತ್ತವೇ ಓಡಾಡುತ್ತಿದೆ. ಇದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಗಾಬರಿಗೊಂಡಿರುವ ಹುಲಿಯು ಮತ್ತೆ ಗ್ರಾಮಸ್ಥರ ಮೇಲೆ ದಾಳಿ ನಡೆಸುವ ಅಪಾಯವಿದೆ. ಹೀಗಾಗಿ ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಕರಡಿಗೆ ಬೆದರಿ ಓಡಿದ ಹುಲಿಗಳು: ವೈರಲ್ ವಿಡಿಯೋ ಕರಡಿಗೆ ಬೆದರಿ ಓಡಿದ ಹುಲಿಗಳು: ವೈರಲ್ ವಿಡಿಯೋ

ದಾಳಿ ನಡೆಸಿದ ಹುಲಿ ಓಡಿಹೋದ ಬಳಿಕವೂ ಜನರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸುವ ಬದಲು ಹುಲಿಯ ಹಿಂದೆ ಓಡಿ ವಿಡಿಯೋ ಚಿತ್ರೀಕರಿಸುವುದರಲ್ಲಿ ಮಗ್ನರಾಗಿದ್ದು ತೀವ್ರ ಟೀಕೆಗೆ ಒಳಗಾಗಿದೆ.

ಜನರಿಂದ ಕೆರಳಿದ ಹುಲಿ

ಜನರಿಂದ ಕೆರಳಿದ ಹುಲಿ

ಪುಮ್ಸಾರ್-ಬಾಪೆರಾ ಹೆದ್ದಾರಿಯಲ್ಲಿ ಹುಲಿಯೊಂದು ಕುಳಿತುಕೊಂಡಿದೆ ಮತ್ತು ಅದರ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ ಎಂದು ಅರಣ್ಯ ಇಲಾಖೆಗೆ ಫೋನ್ ಕರೆಯೊಂದು ಮಾಹಿತಿ ನೀಡಿತ್ತು. ಹುಲಿಯಲ್ಲಿ ಗಾಬರಿ ಮೂಡಿಸದಂತೆ ಮತ್ತು ಅದರ ಸಮೀಪ ಹೋಗದಂತೆ ಜನರಿಗೆ ಸಲಹೆ ನೀಡಿದ್ದರೂ ಅವರು ಅದನ್ನು ಕೆರಳಿಸಿದ್ದರು. ಇದರಿಂದ ಹುಲಿ ದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನರ ಸದ್ದಿಗೆ ಬೆದರಿ ದಾಳಿ

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಜೋರಾಗಿ ಸದ್ದು ಮಾಡಿದ್ದರಿಂದ ಹುಲಿ ಗಾಬರಿಗೊಂಡಿದೆ. ತನಗೆ ಅಪಾಯ ಎದುರಾಗಲಿದೆ ಎಂಬ ಭೀತಿಯಿಂದಲೇ ಜನರ ಮೇಲೆ ದಾಳಿ ಮಾಡಿದೆ. ತಪ್ಪಿಸಿಕೊಳ್ಳಲು ಯತ್ನಿಸಿದ ಒಬ್ಬಾತನ ಮೇಲೆ ಹುಲಿ ದಾಳಿ ಮಾಡಿದ್ದು, ಮತ್ತು ಜನರ ಕೂಗಿಗೆ ಬೆದರಿ ಅಲ್ಲಿಂದ ಓಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಮೃತದೇಹ ಪತ್ತೆಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಮೃತದೇಹ ಪತ್ತೆ

ಹುಲಿ ದಾಳಿಗೆ ಮಹಿಳೆ ಸಾವು

ಹುಲಿ ದಾಳಿಗೆ ಮಹಿಳೆ ಸಾವು

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬ್ರಹ್ಮಪುರಿ ಅರಣ್ಯ ವಿಭಾಗದಲ್ಲಿ ಶುಕ್ರವಾರ ಸಂಜೆ ನಡೆದ ಮತ್ತೊಂದು ಹುಲಿ ದಾಳಿಯಲ್ಲಿ ವರ್ಷಾ ಧರ್ಮದಾಸ್ ಜಿಬ್ಕಾಟೆ ಎಂಬ 42 ವರ್ಷದ ಮಹಿಳೆ ಬಲಿಯಾಗಿದ್ದಾರೆ. ತುಲನಾ-ಮೆಂದಾ ಎಂಬ ಗ್ರಾಮದವರಾದ ವರ್ಷಾ, ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹುಲಿ ದಾಳಿ ಮಾಡಿ ಸ್ಥಳದಲ್ಲಿಯೇ ಸಾಯಿಸಿದೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.

ನೂರು ಮೀಟರ್ ದೂರದಲ್ಲಿ ದೇಹ

ನೂರು ಮೀಟರ್ ದೂರದಲ್ಲಿ ದೇಹ

ಪೊದೆಯಲ್ಲಿ ಅಡಗಿದ್ದ ಹುಲಿ ಮಹಿಳೆ ಮೇಲೆ ದಾಳಿ ನಡೆಸಿ ಅವರನ್ನು ಕೊಂದಿದೆ. ಹೊಲಕ್ಕೆ ತೆರಳಿದ್ದ ಅವರು ಇನ್ನೂ ಮನೆಗೆ ಬಾರದೆ ಇದ್ದಿದ್ದರಿಂದ ಅವರ ಕುಟುಂಬದವರು ಹುಡುಕಾಟ ನಡೆಸಿದ್ದರು. ಅವರ ಮೃತದೇಹ ಹೊಲದಿಂದ ನೂರು ಮೀಟರ್ ದೂರದಲ್ಲಿ ಪತ್ತೆಯಾಗಿದೆ.

ಇನ್ಮುಂದೆ ಹುಲಿಯನ್ನು ಇನ್ಮುಂದೆ ಹುಲಿಯನ್ನು "ನರಭಕ್ಷಕ" ಎನ್ನುವಂತಿಲ್ಲ!

English summary
Three injured in a tiger attack in Bhandara district of Maharashtra on Saturday. The video of this horrific incident goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X