Get Updates
Get notified of breaking news, exclusive insights, and must-see stories!

ಆಸ್ಪತ್ರೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡ ಗರ್ಭಿಣಿ

ನಾಗ್ಪುರ, ಜೂನ್ 4: ಆಸ್ಪತ್ರೆಯಲ್ಲಿ ವೈದ್ಯರು ನಿರ್ಲಕ್ಷಿಸಿದ ಕಾರಣ ಗರ್ಭಿಣಿಯೊಬ್ಬಳು ತಾನೇ ಹೆರಿಗೆ ಮಾಡಿಕೊಂಡಿರುವ ಮನಕಲಕುವ ಘಟನೆ ನಾಗ್ಪುರದಲ್ಲಿ ನಡೆದಿದೆ.

ಹೆರಿಗೆ ನೋವೆಂದು ಮಹಿಳೆ ಆಸ್ಪತ್ರೆಗೆ ಸೇರಿದ್ದಳು ಆದರೆ ವೈದ್ಯರು ಹಾಗೂ ಸಿಬ್ಬಂದಿಗಳು ನಿರ್ಲಕ್ಷ್ಯ ಮಾಡಿದ್ದರು. ಅದರಿಂದ ಮನನೊಂದ ಮಹಿಳೆ ತಾನೇ ಹೆರಿಗೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.

ಹುಡಕೇಶ್ವರ ನಿವಾಸಿಯಾಗಿರುವ ಚೊಚ್ಚಲ ಗರ್ಭಿಣಿ ಸುಕೇಶಿನಿ ಶ್ರೀಕಾಂತ್ ಚಟಾರೆ(23) ಗರ್ಭಧರಿಸಿದ ನಂತರ ಮೊದಲಿನಿಂದಲೂ ಜಿಎಂಸಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ, ಆರೈಕೆ ಪಡೆದುಕೊಳ್ಳುತ್ತಿದ್ದರು.

Doctor negligence woman delivers own baby

ಪ್ರಸವದ ದಿನ ಸಮೀಪಿಸುತ್ತಿರುವಂತೆಯೇ, ಆಕೆಯನ್ನು ಶನಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಬ್ಬಂದಿ ಆಕೆಯನ್ನು ವಾರ್ಡ್ ಸಂಖ್ಯೆ 33ರಲ್ಲಿ ನೆಲೆದ ಮೇಲೆ ಮಲಗಿಸಿದ್ದರು. ಇದಕ್ಕೆ ಸಂಬಂಧಿಕರು ಆಕ್ಷೇಪಿಸಿದಾಗ, ಆಕೆಗೆ ಮಲಗಲು ಮಂಚ ಒದಗಿಸಿದ್ದರು.

ಭಾನುವಾರ ಬೆಳಗಿನ ಜಾವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ. ಕೂಡಲೇ ಆಕೆಯನ್ನು ಹೆರಿಗೆ ವಾರ್ಡ್ ಗೆ ಕರೆದೊಯ್ದರು. ಸ್ವಲ್ಪಕಾಲ ನೋಡಿದ ವೈದ್ಯರು. ಕೊನೆಗೆ ಆ ಕಡೆ ತಿರುಗಿಯೂ ನೋಡಲಿಲ್ಲ.

ಬಳಿಕ ಬೆಳಗಿನ ಜಾವ ನೋವು ಕಾಣಿಸಿಕೊಂಡಿದೆ, ಮಗು ತಲೆ ಹೊರಬಂದಿತ್ತು, ವೈದ್ಯರಾರು ಬರಲಿಲ್ಲ, ಬಳಿಕ ಮಹಿಳೆಯೇ ಮಗುವ ತಲೆಯನ್ನು ನಿಧಾನವಾಗಿ ಹೊರತೆಗೆದು ತಾನೇ ಹೆರಿಗೆ ಮಾಡಿಕೊಂಡಿದ್ದಾಳೆ.

ಬಳಿಕ ಶುಶ್ರೂಶಕಿಯರನ್ನು ಕರೆದು ಮಗುವಿನ ಹೊಕ್ಕಳು ಬಳ್ಳಿ ಕತ್ತರಿಸಿದ ಬಳಿಕ ಮಗು ಹಾಗೂ ತಾಯಿಯನ್ನು ನೆಲದ ಮೇಲೆ ಮಲಗಿಸಿ ದುರ್ವರ್ತನೆ ತೋರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+