ಕೇಂದ್ರ ಸಚಿವರ ಕೈ ಕತ್ತರಿಸಬೇಕೆನ್ನಿಸಿತ್ತು ಎಂದ ಲಾಲೂ ಪುತ್ರಿ !

ಪಾಟ್ನಾ, ಜನವರಿ 19: "ಕೇಂದ್ರ ಸಚಿವ ರಾಮ್ ಕೃಪಾಳ್ ಯಾದವ್ ಅವರ ಕೈಕತ್ತರಿಸಬೇಕೆಂದು ನನಗೆ ಅನ್ನಿಸಿತ್ತು" ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಲಾಲೂ ಪ್ರಸಾದ್ ಪುತ್ರಿ ಮಿಸಾ ಭಾರತಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

"ರಾಮ್ ಕೃಪಾಳ್ ಯಾದವ್ ಅವರ ಬಗ್ಗೆ ನಮ್ಮಲ್ಲಿ ಬಹಳ ಗೌರವವಿತ್ತು. ಆದರೆ ಅವರು ಯಾವಾಗ ಸುಶೀಲ್ ಕುಮಾರ್ ಮೋದಿ ಅವರೊಂದಿಗೆ ಕೈಜೋಡಿಸಲು ಹೊರಟರೋ ಆಗಿನಿಂದ ನಮಗೆ ಅವರ ಮೇಲಿನ ಗೌರವ ಕಡಿಮೆಯಾಯಿತು. ಆ ಸಮಯದಲ್ಲಿ ಅವರ ಕೈಯನ್ನು ಕತ್ತರಿಸಬೇಕು ಎಂಬಷ್ಟು ಕೋಪ ಬಂದಿತ್ತು ನನಗೆ. ಯಂತ್ರವನ್ನು ತಂದು ಅವರ ಕೈಕತ್ತರಿಸುವ ಇರಾದೆಯಾಗಿತ್ತು" ಎಂದು ಮಿಸಾ ಭಾರತಿ ಹೇಳಿದ್ದಾರೆ.

ಜ.16 ರಂದು ನಡೆದ ಆರ್ ಜೆಡಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು ಈ ರೀತಿ ಹೇಳಿದರು.

Wanted to cut off Ram Kripal Yadavs hands for joining BJP, says Misa Bharti

2014 ರಲ್ಲಿ ಪಾಟಲೀಪುತ್ರ ಲೋಕಸಭಾ ಕ್ಷೇತ್ರದಿಂದ ಆರ್ ಜೆಡಿ ಅವರಿಗೆ ಟಿಕೆಟ್ ನೀಡದ ಕಾರಣಕ್ಕೆ ಅಸಮಾಧಾನಗೊಂಡು ಅವರು ಪಕ್ಷ ತೊರೆದಿದ್ದರು. ನಂತರ ಬಿಜೆಪಿ ಸೇರಿ ಅದೇ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಂಡು ಮಿಸಾ ಭಾರತಿ ವಿರುದ್ಧವೇ ನಿಂತು ಗೆಲುವು ಸಾಧಿಸಿ ಪ್ರತೀಕಾರ ತೀರಿಸಿಕೊಂಡಿದ್ದರು.

61 ವರ್ಷ ವಯಸ್ಸಿನ ರಾಮ್ ಕೃಪಾಳ್ ಅವರ ರಾಜಕೀಯ ಅನುಭವ ಕಂಡು ಕೇಂದ್ರ ಸಚಿವ ಸ್ಥಾನವನ್ನೂ ಎನ್ ಡಿ ಎ ಸರ್ಕಾರ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+