• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನನ್ನ ತಂಗಿ ಸುಭಾಷಿಣಿಗೆ ಮತ ನೀಡಿ ಎಂದ ರಾಹುಲ್ ಗಾಂಧಿ

|

ಹಿರಿಯ ರಾಜಕಾರಣಿ ಶರದ್ ಯಾದವ್ ಅವರ ಪುತ್ರಿ, ಸಾಮಾಜಿಕ ಕಾರ್ಯಕರ್ತೆ ಸುಭಾಷಿಣಿ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ತಂದೆ ಹೆಸರು ಉಳಿಸುವ ಭರವಸೆಯನ್ನು ಹೊಂದಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇಂದು ಸುಭಾಷಿಣ ಮತಯಾಚಿಸಿ, ದಯವಿಟ್ಟು ನನ್ನ ತಂಗಿಗೆ ಮತ ನೀಡಿ ಎಂದು ಹೇಳಿದರು.

ಸುಭಾಷಿಣಿ ಸ್ಪರ್ಧಿಸಿರುವ ಮಾಧೇಪುರ ಪ್ರದೇಶದ ಬಿಹಾರಿಗಂಜ್ ಕ್ಷೇತ್ರದಲ್ಲಿ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

ಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿ

ಏಕಾಂಗಿಯಾದ ಶರದ್ ಯಾದವ್

ಏಕಾಂಗಿಯಾದ ಶರದ್ ಯಾದವ್

73 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ಶರದ್ ಯಾದವ್ ಅವರು ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದು, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಾಧೇಪುರದ ಲೋಕಸಭಾ ಕ್ಷೇತ್ರದಲ್ಲಿ ಶರದ್ ಯಾದವ್ ಏಳು ಬೀಳು ಕಂಡಿದ್ದು, ಇದೇ ಪ್ರದೇಶದಲ್ಲಿ ಮೊದಲ ಬಾರಿಗೆ ಸುಭಾಷಿಣಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಲೋಕತಾಂತ್ರಿಕ ಜನತಾ ದಳ ಪಕ್ಷವು 51 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಮೊದಲ ಹಂತದ ಕುರ್ತಾ ಕ್ಷೇತ್ರ ಹಾಗೂ ಎರಡು ಹಾಗೂ ಮೂರನೇ ಹಂತದ 50 ಕ್ಷೇತ್ರಗಳಲ್ಲಿ ಎಲ್ ಜೆಡಿ ಸ್ಪರ್ಧಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಶ್ರೀವಾಸ್ತವ ಹೇಳಿದ್ದಾರೆ. 2019ರಲ್ಲಿ ಬಿಹಾರದ ಮಾಧೇಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. 2014ರಲ್ಲಿ ಆರ್ ಜೆಡಿಯ ಪಪ್ಪು ಯಾದವ್ ವಿರುದ್ಧ ರಾಜೇಶ್ ರಂಜನ್(ಜೆಡಿಯು) ಬೆಂಬಲಿಸಿ ಹಿನ್ನಡೆ ಅನುಭವಿಸಿದ್ದರು.

Video: ಬಿಹಾರದ ರೈತರಿಗೆ ಭತ್ತದ ಲೆಕ್ಕ ಹೇಳಿಕೊಟ್ಟ ರಾಹುಲ್ ಗಾಂಧಿ

ಸುಭಾಷಿಣಿ ಕ್ಷೇತ್ರ ಆಯ್ಕೆ ಹಿಂದಿನ ಗುಟ್ಟು

ಸುಭಾಷಿಣಿ ಕ್ಷೇತ್ರ ಆಯ್ಕೆ ಹಿಂದಿನ ಗುಟ್ಟು

ಸಮಾಜವಾದಿ ಚಿಂತನೆಯ ಮುಖಂಡ ಮಧ್ಯಪ್ರದೇಶ ಮೂಲದ ಸಮಾಜವಾದಿ ಚಿಂತನೆಯ ಮುಖಂಡ ಶರದ್ ಯಾದವ್ ಅವರು ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅಥವಾ ನಿತೀಶ್ ಕುಮಾರ್ ಅವರ ಬೆಂಬಲಕ್ಕೆ ನಿಂತು ಚುನಾವಣೆಗೆ ಸಹಕಾರ ನೀಡುತ್ತಾ ಬಂದಿದ್ದರು. ಮಂಡಲ್ ಆಯೋಗ ಹೋರಾಟದ ಕಾಲದಿಂದ ಹಿಂದುಳಿದ ವರ್ಗದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ 27ರಷ್ಟು ಮೀಸಲಾತಿ ಕಲ್ಪಿಸುವ ತನಕ ಎಲ್ಲವನ್ನು ಶರದ್ ಯಾದವ್ ಕಂಡಿದ್ದಾರೆ. ವಿಪಿ ಸಿಂಗ್ ಪ್ರಧಾನಿಯಾಗಿದ್ದಾಗ ಮಂಡಲ್ ಆಯೋಗ ವರದಿ ನೀಡಿದ್ದ ಬಿಪಿ ಮಂಡಲ್ ಅವರ ಗೌರವಾರ್ಥ ಅವರ ಕ್ಷೇತ್ರವಾದ ಮಾಧೇಪುರ್, ಬಿಹಾರ್ ಗಂಜ್ ನಲ್ಲಿ ಸುಭಾಷಿಣಿ ಸ್ಪರ್ಧಿಸಲು ಬಯಸಿದ್ದರು. ಮಾಧೇಪುರ್ ಕ್ಷೇತ್ರ ಆರ್ ಜೆಡಿ ಪಾಲಾಗಿದ್ದರಿಂದ ಬಿಹಾರಿಗಂಜ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಇದು ನನ್ನ ತಂದೆಯ ಕರ್ಮಭೂಮಿ

ಇದು ನನ್ನ ತಂದೆಯ ಕರ್ಮಭೂಮಿ

''ಇದು ನನ್ನ ತಂದೆ ಶರದ್ ಯಾದವ್ ಅವರ ಕರ್ಮಭೂಮಿ, ಕಳೆದ 25 ರಿಂದ 30 ವರ್ಷಗಳಿಂದ ಅವರಿಗೆ ನೀಡಿದ ಪ್ರೀತಿ, ಬೆಂಬಲವನ್ನು ನನಗೂ ನೀಡುತ್ತೀರಿ ಎಂಬ ನಂಬಿಕೆಯಿದೆ, ನಿಮ್ಮ ನಂಬಿಕೆಯನ್ನು ನಾನು ಹುಸಿಗೊಳಿಸುವುದಿಲ್ಲ'' ಎಂದು ಚುನಾವಣಾ ಪ್ರಚಾರದ ವೇಳೆ ಸುಭಾಷಿಣಿ ಹೇಳಿದರು.

''ನಾನು ನಿಮ್ಮ ಅಭ್ಯರ್ಥಿ ನಿಮ್ಮ ಮನೆ ಮಗಳು, ನಾನು ಇಲ್ಲಿ ನಿಮ್ಮ್ ಸೇವೆ ಮಾಡಲು ಬಂದಿದ್ದೇನೆ, ನನ್ನ ತಂದೆ ಕಂಡ ಕನಸನ್ನು ನನಸು ಮಾಡುತ್ತೇನೆ'' ಎಂದರು.

ಮಧ್ಯಪ್ರದೇಶದ ಸುಭಾಷಿಣಿ ರಾಜ್ ರಾವ್ ಅವರು ಹರ್ಯಾಣದ ಕಾಂಗ್ರೆಸ್ ಪಕ್ಷದ ಮುಖಂಡರ ಮನೆಯ ಸೊಸೆಯಾಗಿದ್ದು, ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಕಣಕ್ಕಿಳಿದಿದ್ದಾರೆ.

ಬಿಹಾರದಲ್ಲಿ ಪ್ರಾಣಭೀತಿ, ರೇಪ್ ಬೆದರಿಕೆ ಎದುರಿಸಿದೆ ಎಂದ ನಟಿ

ಶರದ್ ಅವರಿಗಾಗಿ ಕೇಳಿಕೊಳ್ಳುತ್ತಿದ್ದೇನೆ

ಶರದ್ ಅವರಿಗಾಗಿ ಕೇಳಿಕೊಳ್ಳುತ್ತಿದ್ದೇನೆ

''ನಾನು ನನ್ನ ಭಾಷಣಗಳಲ್ಲಿ ಯಾವುದರ ಬಗ್ಗೆನೂ ಕೇಳೀಕೊಂಡಿಲ್ಲ, ನೀವು ಈ ಚುನಾವಣೆಯಲ್ಲಿ ಶರದ್ ಅವರ ಪುತ್ರಿಯನ್ನು ಗೆಲ್ಲಿಸಿ, ನನ್ನ ತಂಗಿಯನ್ನು ಗೆಲ್ಲಿಸಿ, ನಾನು ನನಗಾಗಿ ಕೇಳುತ್ತಿಲ್ಲ, ಶರದ್ ಅವರಿಗಾಗಿ ಕೇಳುತ್ತಿದ್ದೇನೆ, ನಿಮ್ಮ ಮುಖಂಡರಿಗಾಗಿ ಕೇಳಿಕೊಳ್ಳುತ್ತಿದ್ದೇನೆ'' ಎಂದು ರಾಹುಲ್ ಗಾಂಧಿ ಹೇಳಿದರು.

ಜೆಡಿಯು ಅಭ್ಯರ್ಥಿ ವಿರುದ್ಧ ಸುಭಾಷಿಣಿ ಸ್ಪರ್ಧೆ

ಜೆಡಿಯು ಅಭ್ಯರ್ಥಿ ವಿರುದ್ಧ ಸುಭಾಷಿಣಿ ಸ್ಪರ್ಧೆ

ಎರಡು ಬಾರಿ ಜೆಡಿಯು ಶಾಸಕ ನಿರಂಜನ್ ಮೆಹ್ತಾ ಅವರ ವಿರುದ್ಧ ಸುಭಾಷಿಣಿ ಸ್ಪರ್ದಿಸುತ್ತಿದ್ದಾರೆ. ಲೋಕ ಜನಶಕ್ತಿ ಪಕ್ಷ ಅಭ್ಯರ್ಥಿ ವಿಜಯ್ ಕುಮಾರ್ ಸಿಂಗ್ ಹಾಗೂ ಜನಾಧಿಕಾರ್ ಪಕ್ಷದ ಪ್ರಭಾಶ್ ಕುಮಾರ್ ಕಣದಲ್ಲಿರುವ ಇತರೆ ಸ್ಪರ್ಧಿಗಳಾಗಿದ್ದಾರೆ.

ಜೆಡಿಯು ಆಭ್ಯರ್ಥಿ ಪರ ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಚಾರ ನಡೆಸಿದ್ದಾರೆ. ಆದರೆ, ತಮ್ಮ ಒಂದು ಕಾಲದ ಗೆಳೆಯ ಶರದ್ ಯಾದವ್ ಬಗ್ಗೆಯಾಗಲಿ, ಎದುರಾಳಿ ಬಣದ ಸ್ಪರ್ಧಿ ಸುಭಾಷಿಣಿ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ವಿಶೇಷ.

English summary
Sharad Yadav's daughter Subhashini Yadav is is contesting from the Bihariganj seat in Madhepura. Rahul Gandhi Campaigned for her today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X