ವಿಡಿಯೋ: ಬಿಹಾರದಲ್ಲಿ ಆಹಾರಕ್ಕಾಗಿ ಕಿತ್ತಾಡಿಕೊಂಡ ಕಾರ್ಮಿಕರು!

ಪಾಟ್ನಾ, ಮೇ 14: ಕೊರೊನಾ ಲಾಕ್‌ಡೌನ್ ಹಾವಳಿಯಿಂದ ಆಹಾರ ಸಿಗದೇ ಪರಿತಪಿಸುತ್ತಿರುವವರ ಪರಿಸ್ಥಿತಿ ಹೇಗೆ ವಿಕೋಪಕ್ಕೆ ಹೋಗುತ್ತಿದೆ ಎಂಬುದಕ್ಕೆ ಬಿಹಾರದಲ್ಲಿ ಇಂದು ನಡೆದ ಘಟನೆಯೊಂದು ಸಾಕ್ಷಿಯಾಗಿದೆ.

ಬಿಹಾರದ ಕತಿಹಾರ್‌ನ ರೈಲ್ವೆ ನಿಲ್ದಾಣದಲ್ಲಿ ಒಂದೇ ಬ್ಯಾಗನಲ್ಲಿದ್ದ ಆಹಾರದ ಪೊಟ್ಟಣಗಳನ್ನು ಸ್ವೀಕರಿಸುವಾಗ ಆಹಾರ ಸಿಗದೇ ಹತಾಶರಾಗಿದ್ದ ಹತ್ತಾರು ಜನ ಆಹಾರಕ್ಕೆ ಹೊಡೆದಾಡಿಕೊಂಡ ಘಟನೆ ಗುರುವಾರ ನಡೆದಿದೆ.

Viral Video: Migrate Labours Fight For Food Pockets At Bihar Railway Station

ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಆಗಿದೆ. ರೈಲು ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ತೆರಳಲು ನಿಂತಿದ್ದ ವೇಳೆ ಅಧಿಕಾರಿಗಳು ಕೆಲವೊಂದಿಷ್ಟು ಆಹಾರ ಪೊಟ್ಟಣಗಳನ್ನು ವಿತರಿಸಿದ್ದರು. ಈ ವೇಳೆ ಆಹಾರಕ್ಕಾಗಿ ಬೋಗಿಗಳ ಬಳಿ ನಿಂತಿದ್ದ ಕೆಲ ಕಾರ್ಮಿಕರು ಪರಸ್ಪರ ಕಚ್ಚಾಡಿಕೊಂಡಿದ್ದಾರೆ.

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗೆ ಮತ್ತು ವಲಸಿಗರಿಗೆ ಆಹಾರವನ್ನು ಒದಗಿಸಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದರೂ, ಈ ಆಘಾತಕಾರಿ ವಿಡಿಯೋ ಬಡವರು, ವಲಸೆ ಕಾರ್ಮಿಕರು ಅನುಭವಿಸುತ್ತಿರುವ ಪರಿಸ್ಥಿತಿಯನ್ನು ಬಿಚ್ಚಿಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+