ಬಿಜೆಪಿ ಮೇಲೆ ಮುನಿಸಿಕೊಂಡ ಶತ್ರುಘ್ನ ಸಿನ್ಹಾಗೆ ಆರ್ಜೆಡಿಯಿಂದ ಆಫರ್!
ಪಾಟ್ನಾ, ಜನವರಿ 23: ಬಿಜೆಪಿ ಜೊತೆ ಮುನಿಸಿಕೊಂಡು, ಪಕ್ಷದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಸಂಸದ ಶತ್ರುಘ್ನ ಸಿನ್ಹಾ ಅವರನ್ನು ಆರ್ಜೆಡಿ(ರಾಷ್ಟ್ರೀಯ ಜನತಾ ದಳ) ಸೇರುವಂತೆ ಪಕ್ಷದ ಮುಖಂಡ ತೇಜ್ ಪ್ರತಾಪ್ ಯಾದವ್ ಆಹ್ವಾನ ನೀಡಿದ್ದಾರೆ.
ಕೋಲ್ಕತ್ತಾದಲ್ಲಿ ಕಳೆದ ವಾರ ನಡೆದ ಮಹಾಘಟಬಂಧನ ಸಮಾವೇಶದಲ್ಲಿ ಭಾಗವಹಿಸಿದ್ದ ಶತ್ರುಘ್ನ ಸಿನ್ಹಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದ ನಂತರ, 'ತಾವು ಬಿಜೆಪಿ ತೊರೆಯಲು ಸಿದ್ಧ' ಎಂದು ಸಿನ್ಹಾ ಹೇಳಿದ್ದರು.
ಈ ಬೆಳವಣಿಗೆಯ ನಂತರ ಲಗುಬಗೆಯಿಂದ ಸಿನ್ಹಾ ಅವರನ್ನು ಭೇಟಿಯಾದ ತೇಜ್ ಪ್ರತಾಪ್ ಯಾದವ್ ಅವರನ್ನು ಆರ್ಜೆಡಿಗೆ ಆಹ್ವಾನಿಸಿದ್ದಾರೆ.

ಕಳೆದ ಒಂದು ವರ್ಷಗಳಿಂದ ಶತ್ರುಘ್ನ ಸಿನ್ಹಾ ಅವರು ಪ್ರಧಾನಿ ಮೋದಿ ನೇತೃತ್ವದ ಕೇಮದ್ರ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದ ಸಂಸದ ಸಿನ್ಹಾ ಅವರಿಗೆ ಈ ಬಾರಿ ಲೋಕಸಭೆಗೆ ಬಿಜೆಪಿಯಿಂದ ಸೀಟು ಸಿಗುವುದು ಸನುಮಾನ ಎಮಬ ವದಂತಿ ಕೂಗಿರುವ ಕಾರಣ ಅವರು ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications