• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ 'ಮೋದಿ'

|

ಪಾಟ್ನಾ, ಏಪ್ರಿಲ್ 18: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಮೋದಿ ಹೂಡಿದ್ದಾರೆ. ಆದರೆ ಮೊಕದ್ದಮೆ ಹೂಡಿರುವುದು ಪ್ರಧಾನಿ ಮೋದಿ ಅಲ್ಲ, ಸುಶೀಲ್ ಮೋದಿ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಹಾರದ ಉಪಮುಖ್ಯಮಂತ್ರಿ ಆಗಿರುವ ಸುಶೀಲ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಬಿಹಾರದ ಪಾಟ್ನಾದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ.

ಮೋದಿ ಅವಹೇಳನ : ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ದೂರು ಮೋದಿ ಅವಹೇಳನ : ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ದೂರು

'ಎಲ್ಲ ಕಳ್ಳರ ಅಂತಿಮ ಹೆಸರು ಮೋದಿ ಆಗಿರುತ್ತದೆ' ಎಂದು ರಾಹುಲ್ ಗಾಂಧಿ ಹೇಳಿದ್ದರ ವಿರುದ್ಧ ಸುಶೀಲ್ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ 500 ರ ಅಡಿಯಲ್ಲಿ ದೂರು ದಾಖಲಿಸಲಾಗಿದ್ದು, ನ್ಯಾಯಾಲಯವು ಈ ಪ್ರಕರಣವನ್ನು ಏಪ್ರಿಲ್ 22 ರಂದು ವಿಚಾರಣೆಗೆ ತೆಗೆದುಕೊಳ್ಳಲಿದೆ.

ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧೆ ಸುದ್ದಿ: ನಿಮಗೆ ಸಸ್ಪೆನ್ಸ್ ಇರಲಿ ಎಂದ ರಾಹುಲ್ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧೆ ಸುದ್ದಿ: ನಿಮಗೆ ಸಸ್ಪೆನ್ಸ್ ಇರಲಿ ಎಂದ ರಾಹುಲ್

ರಾಹುಲ್ ಗಾಂಧಿ ಅವರ ಹೇಳಿಕೆಯು ಮೋದಿ ಎಂಬ ಅಂತಿಮ ಹೆಸರುಳ್ಳ ಎಲ್ಲರ ಭಾವನಗಳಿಗೆ ಧಕ್ಕೆ ತಂದಿದೆ, ಹಾಗಾಗಿ ಅವರ ವಿರುದ್ಧ ಕಾನೂನು ಹೋರಾಟ ಕೈಗೊಳ್ಳುವುದಾಗಿ ಸುಶೀಲ್ ಮೋದಿ ಅವರು ಮೊನ್ನೆಯಷ್ಟೆ ತಿಳಿಸಿದ್ದರು.

ಸಮಾವೇಶವೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಮೂವರು ಕಳ್ಳರು ಎಂದಿದ್ದರು ಅಷ್ಟಕ್ಕೆ ಸುಮ್ಮನಾಗದೆ, ಎಲ್ಲ ಕಳ್ಳರ ಹೆಸರೂ ಮೋದಿ ಇಂದಲೇ ಅಂತ್ಯವಾಗುತ್ತದೆ ಎಂದು ಸಹ ಹೇಳಿದ್ದರು.

English summary
Bihar deputy CM Sushil Modi file defarmation case on AICC president Rahul Gandhi for hurting Modi sir named peoples sentiment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X