ಬಿಹಾರ ಜ್ಯೂನಿಯರ್ ಇಂಜಿನಿಯರ್ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ ಟಾಪರ್!
ಪಾಟ್ನಾ, ಫೆಬ್ರವರಿ 21: ಬಾಲಿವುಡ್ ನಟಿ ಸನ್ನಿ ಲಿಯೋನ್ ಇನ್ನು ಕೆಲವೇ ದಿನಗಳಲ್ಲಿ ಕಿರಿಯ ಇಂಜಿನಿಯರ್ ಆಗಿ ಕೆಲಸ ಗಿಟ್ಟಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ!
ಬಿಹಾರ ಸರ್ಕಾರದ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಖಾಲಿಯಿದ್ದ 200 ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 17,000 ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ಅವರಲ್ಲಿ 200 ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿತ್ತು. ಈ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರೂ ಇದೆ. ಅಷ್ಟೇ ಅಲ್ಲ, ಟಾಪರ್ಸ್ ಗಳ ಪಟ್ಟಿಯಲ್ಲಿಯೂ ಸನ್ನಿ ಲಿಯೋನ್ ಹೆಸರಿದೆ!
ಇದು ಸಿಸ್ಟೆಮ್ ಜನರೇಟೆಡ್ ಲಿಸ್ಟ್ ಆಗಿರುವುದರಿಂದ ಈ ಪ್ರಮಾದವಾಗಿದೆ. ಪರಿಷ್ಕೃತ ಪಟ್ಟಿಯನ್ನು ಮತ್ತೆ ಬಿಡುಗಡೆ ಮಾಡುತ್ತೇವೆ ಎಮದು ಇಲಾಖೆ ತಿಳಿಸಿದೆ.

'ಸನ್ನಿ ಲಿಯೋನ್' ಎಂಬ ಹೆಸರಿದ್ದಿದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲೂ ಹೆಚ್ಚು ಸುದ್ದಿಯಾಗಿದೆ.
ಅಭ್ಯರ್ಥಿ ಜನರಲ್ ಕೆಟಗರಿಗೆ ಸೇರಿದವರೆಂದು ಈ ಅರ್ಜಿಯಲ್ಲಿ ಬರೆಯಲಾಗಿದ್ದು, ತಂದೆಯ ಹೆಸರನ್ನು ಲಿಯೋನಾ ಲಿಯೋನ್ ಎಂದು ಮುದ್ರಿಸಲಾಗಿದೆ. ಅವರು 98.5 ಮತ್ತು 73.5 ಪಡೆದಿದ್ದಾಗಿ ಬರೆದಿದ್ದಾರೆ.
HAHA, Im so glad the OTHER me has scored so well !!!!! lol... https://t.co/dV1RTQTN5J
— Sunny Leone (@SunnyLeone) February 20, 2019
ನೀಲಿಚಿತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ಸನ್ನಿ ಲಿಯೋನ್ ಈ ಸುದ್ದಿಯ ಬಗ್ಗೆ ಓದಿದ ನಂತರ 'ನನ್ನಂಥ ಮತ್ತೊಬ್ಬರು ಇಷ್ಟು ಒಳ್ಳೆಯ ಸ್ಕೋರ್ ಮಾಡಿದ್ದಕ್ಕೆ ಸಂತಸವಾಗಿದೆ' ಎಂದು ಟ್ವೀಟ್ ಸಹ ಮಾಡಿದ್ದಾರೆ.












Click it and Unblock the Notifications