ಪದವಿ ಓದಿದ್ದರೂ ಟೀ ಸ್ಟಾಲ್ ಹಾಕಿದ 'ಗ್ರ್ಯಾಜುಯೇಟ್ ಚಾಯ್ ವಾಲಿ'
ಪಾಟ್ನಾ ಏಪ್ರಿಲ್ 19: ಇತ್ತೀಚೆಗೆ ಜನರಲ್ಲಿ ಚಹ ಮೇಲಿನ ಕ್ರೇಜ್ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೊಮ್ಮೆ ಚಹ ಮಾರಾಟ ಮಾಡುತ್ತಿದ್ದರು ಅನ್ನೋ ಸುದ್ದಿ ಕೇಳಿನೇ ಕೆಲವೊಂದಿಷ್ಟು ಮಂದಿ ಚಹದ ಫ್ಯಾನ್ಸ್ ಆಗಿರೋದಿದೆ. ಮೋದಿ ಅವರು ಕೂಡ ತಾವು ಮಾಡಿದ ಚಹ ಮಾರಾಟದ ವೃತ್ತಿಯನ್ನು ಯಾವುದೇ ಕೀಳು ಭಾವನೆಯಿಲ್ಲದೆ ಹೆಮ್ಮೆಯಿಂದಲೇ ಹೇಳಿಕೊಂಡಿರೋದಿದೆ. ಮಾತ್ರವಲ್ಲದೆ 'ಚಾಯ್ ಪೆ ಚರ್ಚಾ' ಕಾರ್ಯಕ್ರಮಗಳನ್ನು ಅವರು ಮಾಡಿಕೊಂಡು ಬಂದಿದ್ದಾರೆ. ಚಹ ಮಾರಾಟ ಮಾಡುವ ಒಂದು ಹುಡುಗ ಇಂದು ದೇಶದ ಪ್ರಧಾನಿ ಆಗಿದ್ದಾರೆ ಅನ್ನೋದಕ್ಕೆ ಅದೆಷ್ಟೋ ಸಣ್ಣ ವ್ಯಾಪಾರಿಗಳಿಗೆ ಸ್ಪೂರ್ತಿದಾಯಕ ವಿಷಯವೂ ಹೌದು. ಹೀಗಾಗಿ ಚಹ ಮಾರಾಟ ಮಾಡುವುದನ್ನ ಯಾರೂ ಕೂಡ ಸಣ್ಣ ಕೆಲಸ ಎನ್ನುವ ಭಾವನೆಯಲ್ಲಿಲ್ಲ.
ಈ ನಡುವೆ 24 ವರ್ಷದ ಪದವೀಧರೆ ಪಾಟ್ನಾ ಮಹಿಳಾ ಕಾಲೇಜಿನ ಹೊರಗೆ 'ಚಾಯ್‌ವಾಲಿ' ಎಂಬ ಹೆಸರಿನ ಚಹಾ ಅಂಗಡಿಯನ್ನು ತೆರೆದು ಅಂತರ್ಜಾಲದಲ್ಲಿ ಅಲೆಗಳನ್ನು ಸೃಷ್ಟಿಸುತ್ತಿದ್ದಾರೆ. ವಾರಣಾಸಿಯ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಈ ಹುಡುಗಿಯ ಹೆಸರು ಪ್ರಿಯಾಂಕಾ ಗುಪ್ತಾ.
ಪ್ರಿಯಾಂಕಾ ಗುಪ್ತಾ ಮೂಲತಃ ಬಿಹಾರದ ಪೂರ್ಣಿಯಾದವರು (Purnia). ಆದರೆ ಇತ್ತೀಚಿನ ದಿನಗಳಲ್ಲಿ ಪಾಟ್ನಾ ಮಹಿಳಾ ಕಾಲೇಜು ಬಳಿ ಟೀ ಅಂಗಡಿ ತೆರೆದಿದ್ದಾರೆ. ಪ್ರಿಯಾಂಕಾ ಸುಮಾರು ಎರಡು ವರ್ಷಗಳಿಂದ ಬ್ಯಾಂಕ್‌ನ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಆದರೆ ಆಕೆ ಯಾವುದೇ ಪರೀಕ್ಷೆಯಲ್ಲಿ ಯಶಸ್ವಿಯಾಗಲಿಲ್ಲ. ಆದರೂ ಪ್ರಯತ್ನ ಬಿಡದ ಪ್ರಿಯಾಂಕಾ ಪರೀಕ್ಷೆಗಳಿಗೂ ಓದುತ್ತಾ ಪಾಟ್ನಾದಲ್ಲಿ ಟೀ ಸ್ಟಾಲ್ ಸ್ಥಾಪಿಸಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ.

ಸ್ವಾವಲಂಬಿ ಜೀವನ
ಪ್ರಿಯಾಂಕಾ ಇತ್ತೀಚೆಗೆ ಈ ಟೀ ಸ್ಟಾಲ್ ತೆರೆದಿದ್ದಾರೆ. ಏಪ್ರಿಲ್ 11ರಿಂದ ಟೀ ಸ್ಟಾಲ್ ನಡೆಸುತ್ತಿದ್ದಾರೆ. ಆದರೆ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರೂ ಟೀ ಸ್ಟಾಲ್ ಹಾಕಿಕೊಳ್ಳಲು ಪ್ರಿಯಾಂಕಾ ಹಿಂಜರಿಯಲಿಲ್ಲ ಎಂಬುದೇ ದೊಡ್ಡ ಸಂಗತಿ. ತನ್ನ ನಿರ್ಧಾರ ಭಾರತದಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸುವುದಕ್ಕೆ ನೀಡಿದ ಕೊಡುಗೆ ಎಂದು ಪ್ರಿಯಾಂಕಾ ನಂಬಿದ್ದಾರೆ.

‘ಪೀನಾ ಹಿ ಪಡೆಗಾ’
ಪ್ರಿಯಾಂಕಾ ಅವರ ಈ ಟೀ ಅಂಗಡಿಯಲ್ಲಿ ನೀವು ಅನೇಕ ವಿಧದ ಚಹಾಗಳನ್ನು ಕಾಣಬಹುದು. ಕುಲ್ಹಾದ್ ಚಾಯ್, ಮಸಾಲಾ ಚಾಯ್, ಪಾನ್ ಚಾಯ್ ಮತ್ತು ಚಾಕೊಲೇಟ್ ಚಾಯ್ ಕುಡಿಯಲು ಲಭ್ಯವಿರುತ್ತದೆ. ಪ್ರಿಯಾಂಕಾ ಅವರ ಈ ಅಂಗಡಿಯಲ್ಲಿ ಎಲ್ಲಾ ತರಹದ ಚಹಾಗಳ ಬೆಲೆ ಕೇವಲ 15 ರಿಂದ 20 ರೂಪಾಯಿ ಬೆಲೆ ಇದೆ. ಪ್ರಿಯಾಂಕಾ ಅವರ ಮುಖ್ಯ ಗ್ರಾಹಕರು ಎಂದರೆ ಅದು ವಿದ್ಯಾರ್ಥಿಗಳು. ಇದೇ ವೇಳೆ ಗ್ರಾಹಕರನ್ನು ಸೆಳೆಯಲು ಪ್ರಿಯಾಂಕಾ 'ಪೀನಾ ಹಿ ಪಡೆಗಾ' ಹಾಗೂ 'ಸೋಚ್ ಮತ್... ಚಾಲು ಕರ್ ದೇ ಬಾಸ್' ಎಂಬ ಪಂಚ್ ಲೈನ್ ಹಾಕಿದ್ದಾರೆ.
|
'ನಾನು ಚಾಯ್‌ವಾಲಿ'
ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡಿದ ಪ್ರಿಯಾಂಕಾ ಗುಪ್ತಾ, ನಾನು 2019 ರಲ್ಲಿ ನನ್ನ ವಿದ್ಯಾಬ್ಯಾಸ ಮುಗಿಸಿದೆ. ಆದರೆ ಕಳೆದ 2 ವರ್ಷಗಳಲ್ಲಿ ಕೆಲಸ ಪಡೆಯಲು ಸಾಧ್ಯವಾಗಲಿಲ್ಲ. ನಾನು ಪ್ರಫುಲ್ ಬಿಲ್ಲರ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಹಲವು ಚಾಯ್‌ವಾಲಾಗಳಿದ್ದಾರೆ. ಹೀಗಿರುವಾಗ ಚಾಯ್‌ವಾಲಿಗಳು ಏಕೆ ಇರಬಾರದು? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಫುಲ್ ಬಿಲ್ಲರ್ ಸ್ವತಃ ಚಾಯ್ ಅಂಗಡಿ ಹಾಕಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆದ ಹುಡುಗ.

'ಗ್ರ್ಯಾಜುಯೇಟ್ ಚಾಯ್ ವಾಲಿ'
ಪಾಟ್ನಾದ ಅತ್ಯಂತ ವಿಐಪಿ ಪ್ರದೇಶದ ಬೈಲಿ ರಸ್ತೆಯಲ್ಲಿರುವ ಪಾಟ್ನಾ ಮಹಿಳಾ ಕಾಲೇಜಿನ ಮುಂಭಾಗದಲ್ಲಿರುವ 'ಗ್ರ್ಯಾಜುಯೇಟ್ ಚಾಯ್ ವಾಲಿ' ಅಂಗಡಿ ನಡೆಸುತ್ತಿರುವ ಪ್ರಿಯಾಂಕಾ ಗುಪ್ತಾ ಕ್ಷಣಾರ್ಧದಲ್ಲಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಕೇವಲ ಏಳು ದಿನಗಳಲ್ಲಿ, ಅವರ ಅಂಗಡಿಗೆ ಅಧಿಕ ಜನ ಬರಲಾರಂಭಿಸಿದ್ದಾರೆ. ಮತ್ತು ಈಗ ಅವಳು ತನ್ನ ಅಂಗಡಿಯನ್ನು ಹೊಸ ಸ್ಥಳಕ್ಕೆ ವಿಸ್ತರಿಸಲು ಯೋಜಿಸುತ್ತಿದ್ದಾಳೆ. ಈ ಅಂಗಡಿಯನ್ನು ತೆರೆಯಲು ಅವರು ಉದ್ದೇಶಿಸಿದಾಗ ಅವರು ಯಾವುದೇ ಬಂಡವಾಳವನ್ನು ಹೊಂದಿರಲಿಲ್ಲ ಎಂಬುದು ಕುತೂಹಲಕಾರಿಯಾಗಿದೆ.

ಉದ್ಯೋಗಗಳ ಕೊರತೆ ಬಗ್ಗೆ ವಿಷಾದ
ಈ ಫೋಟೋಗಳು ವೈರಲ್ ಆಗಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಆಕೆಯ ಉದ್ಯಮಶೀಲತೆಯ ಮನೋಭಾವವನ್ನು ಶ್ಲಾಘಿಸಿ ಅವಳನ್ನು ಸ್ಫೂರ್ತಿದಾಯಕ ಎಂದು ಕರೆದರೆ, ಇನ್ನು ಕೆಲವರು ದೇಶದಲ್ಲಿ ಉದ್ಯೋಗಗಳ ಕೊರತೆಯ ಬಗ್ಗೆ ವಿಷಾದಿಸಿದರು. ಒಬ್ಬ ಬಳಕೆದಾರರು ಬರೆದಿದ್ದಾರೆ, "ಇದು ನಮ್ಮ ಪರಿಸ್ಥಿತಿ. ಉದ್ಯೋಗಗಳಿಲ್ಲ, ಹಣದುಬ್ಬರ, ಜನರಿಗೆ ಸರಿಯಾದ ಆಹಾರವಿಲ್ಲ. ಆದರೆ ನಾವು ಹಿಂದೂ ಮುಸ್ಲಿಮರ ಮೇಲೆ ಹೋರಾಡುತ್ತಿದ್ದೇವೆ' ಎಂದು ಬರೆದಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications