Breaking: ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಶೀಘ್ರ ರಾಜೀನಾಮೆ
ಪಾಟ್ನಾ, ಏಪ್ರಿಲ್ 25: ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಭೇಟಿಯಾದ ನಂತರ ಆರ್‌ಜೆಡಿಗೆ ರಾಜೀನಾಮೆ ನೀಡುವುದಾಗಿ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ತೇಜ್ ಪ್ರತಾಪ್ ಯಾದವ್ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಜನತಾ ದಳದ ನಾಯಕ ಮತ್ತು ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಸೋಮವಾರ ತಮ್ಮ ತಂದೆಯನ್ನು ಭೇಟಿಯಾಗಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
"ನಾನು ನನ್ನ ತಂದೆಯ ಹಾದಿಯಲ್ಲೇ ಸಾಗಿದೆ. ಎಲ್ಲ ಕಾರ್ಯಕರ್ತರಿಗೆ ಗೌರವ ನೀಡಿ, ನನ್ನ ತಂದೆಯನ್ನು ಭೇಟಿ ಮಾಡಿ ಶೀಘ್ರವೇ ರಾಜೀನಾಮೆ ಸಲ್ಲಿಸುತ್ತೇನೆ," ಎಂದು ರಾಷ್ಟ್ರೀಯ ಜನತಾ ದಳದ ನಾಯಕ ಮತ್ತು ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಅಧಿಕೃತ ನಿವಾಸದಲ್ಲಿ ಆರ್‌ಜೆಡಿ ನಾಯಕ ರಾಮರಾಜ್ ಯಾದವ್ ಅವರನ್ನು ಥಳಿಸಿದ್ದಾರೆ ಎಂದು ಆರೋಪಿಸಿದ ಒಂದು ದಿನದ ನಂತರ ತೇಜ್ ಪ್ರತಾಪ್ ಈ ನಿರ್ಧಾರ ಕೈಗೊಂಡಿದ್ದಾರೆ.
ಶುಕ್ರವಾರ ಆರ್‌ಜೆಡಿಯ ಇಫ್ತಾರ್ ಕೂಟದ ವೇಳೆ ತೇಜ್ ಪ್ರತಾಪ್ ಅವರನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿ ಥಳಿಸಿದ್ದಾರೆ ಎಂದು ರಾಮರಾಜ್ ಯಾದವ್ ಆರೋಪಿಸಿದ್ದಾರೆ. ತೇಜ್ ಪ್ರತಾಪ್ ಅವರು ಆರೋಪವನ್ನು ತಳ್ಳಿಹಾಕಿದ್ದಾರೆ ಮತ್ತು ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್, ಪಕ್ಷದ ಎಂಎಲ್‌ಸಿ ಸುನೀಲ್ ಸಿಂಗ್ ಮತ್ತು ತೇಜಸ್ವಿ ಯಾದವ್ ಅವರ ರಾಜಕೀಯ ಸಲಹೆಗಾರ ಸಂಜಯ್ ಯಾದವ್ ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications