ಎನ್‌ಡಿಎ ಗೆದ್ದಿದ್ದು ಹಣ, ತೋಳ್ಬಲದಿಂದ: ತೇಜಸ್ವಿ ಯಾದವ್ ಆರೋಪ

ಪಟ್ನಾ, ನವೆಂಬರ್ 12: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ತೀವ್ರ ಪೈಪೋಟಿ ನೀಡಿದ ಬಳಿಕ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ವಿರೋಚಿತ ಸೋಲು ಕಂಡಿದೆ. ತಮಗೆ ಜನರ ಬೆಂಬಲ ಸಿಕ್ಕಿದೆ. ಆದರೆ ಎನ್‌ಡಿಎಗೆ ಹಣ, ತೋಳ್ಬಲ ಮತ್ತು ವಂಚನೆಯ ಮೂಲಕ ಗೆಲುವು ಸಾಧಿಸಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತೀಶ್ ಕುಮಾರ್ ಅವರ ಜೆಡಿಯು ಮೂರನೇ ಸ್ಥಾನಕ್ಕೆ ಕುಸಿದಿದೆ. ಅವರಿಗೆ ಆತ್ಮಸಾಕ್ಷಿ ಎಂಬುದು ಇನ್ನೂ ಇದ್ದರೆ ಮುಖ್ಯಮಂತ್ರಿ ಕುರ್ಚಿಯ ಮೇಲಿನ ತಮ್ಮ ಆಸೆಯನ್ನು ಬಿಟ್ಟುಬಿಡಬೇಕು ಎಂದು ತೇಜಸ್ವಿ ಹೇಳಿದ್ದಾರೆ.

'ನಾವು ಸುಮಾರು 20 ಕ್ಷೇತ್ರಗಳಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಸೋತಿದ್ದೇವೆ. ಅನೇಕ ಕ್ಷೇತ್ರಗಳಲ್ಲಿ ಸುಮಾರು 900ಕ್ಕೂ ಅಧಿಕ ಅಂಚೆ ಮತಪತ್ರಗಳನ್ನು ಅಸಿಂಧು ಎಂದು ಪರಿಗಣಿಸಲಾಗಿದೆ' ಎಂದು ಅವರು ಆರೋಪಿಸಿದ್ದಾರೆ.

NDA Won Through Money, Muscle, Deceit: Tejashwi Yadav On Bihar Election Results

'ನಾವು ಕಡಿಮೆ ಅಂತರದಿಂದ ಸೋಲು ಕಂಡ ಕ್ಷೇತ್ರಗಳಲ್ಲಿ ಅಂಚೆ ಮತಪತ್ರಗಳ ಮರುಎಣಿಕೆ ಮಾಡುವಂತೆ ನಾವು ಒತ್ತಾಯಿಸುತ್ತೇವೆ. ಏಕೆಂದರೆ ಅಂಚೆಮತಪತ್ರಗಳನ್ನು ಆರಂಭದಲ್ಲಿ ಎಣಿಕೆ ಮಾಡಿಲ್ಲ. ಬದಲಾಗಿ ಕೊನೆಯಲ್ಲಿ ಎಣಿಕೆ ಮಾಡಲಾಗಿದೆ' ಎಂದು ಅವರು ಹೇಳಿದ್ದಾರೆ.

ಎನ್‌ಡಿಎ ಮೈತ್ರಿಕೂಟವು ಮಹಾಘಟಬಂಧನಕ್ಕಿಂತ 15 ಹೆಚ್ಚು ಸೀಟುಗಳಲ್ಲಿ ಗೆಲ್ಲಲು ಯಶಸ್ವಿಯಾದರೂ ಕೇವಲ 12,270 ಅಧಿಕ ಮತಗಳನ್ನಷ್ಟೇ ಪಡೆಯಲು ಯಶಸ್ವಿಯಾಗಿರುವುದು ಅಚ್ಚರಿ ಮೂಡಿಸುತ್ತದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+