ಚೌಕಿದಾರ್ ಚೋರ್ ಹೈ ಘೋಷಣೆ: ರಾಹುಲ್ ಗಾಂಧಿ ವಿರುದ್ಧ ಪ್ರಕರಣ
ಸಮಷ್ಟಿಪುರ, ಏಪ್ರಿಲ್ 27: 'ಚೌಕಿದಾರ್ ಚೋರ್ ಹೈ' ಎಂದು ಸತತವಾಗಿ ಘೋಷಣೆ ಕೂಗುವಂತೆ ಜನಸಮೂಹವನ್ನು ಪ್ರೇರೇಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಬಿಹಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಿಹಾರದ ಸಮಷ್ಟಿಪುರದಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರ ಭಾಷಣದ ನಡುವೆ ಚೌಕಿದಾರ್ ಪದವನ್ನು ಹಲವು ಬಾರಿ ಬಳಸಿದ್ದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಲೇವಡಿ ಮಾಡಿದ್ದರು.

ಈ ನಡುವೆ ಅವರು 'ಚೌಕಿದಾರ್ ಚೋರ್ ಹೈ' ಎಂದು ಘೋಷಣೆ ಕೂಗಿದ್ದರು. ಮಾತ್ರವಲ್ಲ, ಅದನ್ನು ಪದೇ ಪದೇ ಹೇಳುವಂತೆ ಅಲ್ಲಿ ನೆರೆದಿದ್ದ ಜನಸಮೂಹಕ್ಕೂ ಸೂಚಿಸಿದ್ದರು. ಈ ಸಂದರ್ಭದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಹಾಜರಿದ್ದರು.
ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಇಬ್ಬರ ಮೇಲೆಯೂ ವಕೀಲರೊಬ್ಬರು ಅರಾ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications