• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವನ ವೇಷಧಾರಿ, ವಿವಾದಿತ ರಾಜಕಾರಣಿ ಪುತ್ರನಾರು?

|

ಪಾಟ್ನಾ, ಜುಲೈ 24:ಬಿಹಾರದ ವಿವಾದಿತ ರಾಜಕೀಯ ಮುಖಂಡ ಲಾಲೂಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಮತ್ತೆ ಸುದ್ದಿಯಲ್ಲಿದ್ದಾರೆ.

ವಿಭಿನ್ನ ಹೇಳಿಕೆ ರಾಜಕೀಯ ನಿಲುವು ಧಿರಿಸು ಹಾಗೂ ತಮ್ಮ ನಡತೆಗಳಿಂದ ಯಾವಾಗಲೂ ಸುದ್ದಿಯಲ್ಲಿರುವ ತೇಜ್ ಪ್ರತಾಪ್ ಈ ಬಾರಿ ಶಿವನಂತೆ ವಸ್ತ್ರ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಇದ್ದ ಕಾರು ಅಪಘಾತ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಇದ್ದ ಕಾರು ಅಪಘಾತ

ಬಿಹಾರದ ರಾಜಧಾನಿ ಪಾಟ್ನಾದ ಶಿವಾಲಯವೊಂದರಲ್ಲಿ ಶಿವನ ವೇಷ ಹಾಕಿಕೊಂಡು ಪೂಜೆ ಸಲ್ಲಿಸುತ್ತಿರುವ ಚಿತ್ರ ಎಲ್ಲೆಡೆ ವೈರಲ್ ಆಗಿದೆ.


ಮೂಲತಃ ತೇಜ್ ಪ್ರತಾಪ್ ಯಾದವ್ ಶಿವಭಕ್ತರಾಗಿದ್ದಾರೆ. ಯಾವುದೇ ಸಮಸ್ಯೆ ಅಥವಾ ಖುಷಿಯಾದಾಗಲೆಲ್ಲ ಶಿವನ ದೇವಾಲಯಗಳಿಗೆ ಭೇಟಿ ನೀಡುವುದು ಸಾಮಾನ್ಯ, ಕಳೆದ ಬಾರಿ ಪತ್ನಿ ವಿರುದ್ಧ ವಿಚ್ಛೇದನ ಅರ್ಜಿ ಹಾಕಿದ್ದಲ್ಲದೆ ತಮ್ಮ ತೇಜಸ್ವಿ ಯಾದವ್ ವಿರುದ್ಧ ಅಸಮಾಧಾನಗೊಂಡಿದ್ದ ತೇಜ್ ವಾರಣಾಸಿಗೆ ಹೋಗಿದ್ದರು. ಕುಟುಂಬ ಸದಸ್ಯರ ಜೊತೆ ಸಂಪರ್ಕವಿಲ್ಲದೆ ಅಲ್ಲಿಯೇ ಕೆಲ ದಿನಗಳ ಕಾಲ ತಂಗಿದ್ದರು, ಇದಲ್ಲದೆ ಬಿಹಾರದ ಕೆಲ ಶಿವನ ದೇವಾಲಯಗಳಲ್ಲಿ ತಿರುಗಾಡಿಕೊಂಡಿದ್ದರು.

ಲಾಲೂ ಪುತ್ರ ತೇಜ್ ಪ್ರತಾಪ್ ಗೆ ರಸ್ತೆಯಲ್ಲಿ ಅಡ್ಡಾಡಲು ಭಯವಂತೆ! ಲಾಲೂ ಪುತ್ರ ತೇಜ್ ಪ್ರತಾಪ್ ಗೆ ರಸ್ತೆಯಲ್ಲಿ ಅಡ್ಡಾಡಲು ಭಯವಂತೆ!

ಇದಕ್ಕೂ ಮುನ್ನ ಕೃಷ್ಣ ವೇಷ ಧರಿಸಿಕೊಂಡು ಫೋಟೊಶೂಟ್ ಮಾಡಿಸಿಕೊಂಡಿದ್ದರು. ಹೀಗಾಗಿ ರಾಜಕೀಯ ಚಟುವಟಿಕೆಗಳಿಗಂತ ಈ ರೀತಿಯ ಭಿನ್ನ ಶೈಲಿಗಳಿಂದಲೇ ತೇಜ್ ಪ್ರತಾಪ್ ಗಮನ ಸೆಳೆಯಲು ಯಶಸ್ವಿಯಾಗಿದ್ದಾರೆ. ಈ ಬಾರಿಯೂ ಶಿವನ ವೇಷಧಾರಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.

English summary
Controversial Leader Lalu Prasad Yadav Elder son Tej Pratap weared Lord Shiva Dress and he performs special Pooja at Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X