ರಾಷ್ಟ್ರಪತಿ ಚುನಾವಣೆ ಸ್ಪರ್ಧೆಗಿಳಿದ ಲಾಲೂ, ಇದು ರಿಯಲ್ಲೂ!
ಪಾಟ್ನಾ, ಜೂ. 13: ''ಲಾಲು ಪ್ರಸಾದ್ ಯಾದವ್ ರಾಷ್ಟ್ರಪತಿ ಚುನಾವಣೆಗೆ ನಿಲ್ಲಲಿದ್ದಾರೆ'' ಎಂಬ ಸುದ್ದಿ ಬಂದಿದೆ. ದೆಹಲಿಗೆ ಅವರು ವಿಮಾನದ ಟಿಕೆಟ್‌ನ್ನು ಬುಕ್ ಮಾಡಿದ್ದಾರೆ. ಆದರೆ ಇವರು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅಲ್ಲ. ಬಿಹಾರ ಮೂಲದ ಮತ್ತೊಬ್ಬ ಲಾಲೂ.
ಇವರ ಹೆಸರು ಕೂಡಾ ಲಾಲು ಪ್ರಸಾದ್ ಯಾದವ್, 42 ವರ್ಷದ ಲಾಲೂ ಬಿಹಾರ ರಾಜ್ಯ ಸರನ್ ಜಿಲ್ಲೆಯವರು. ರಾಷ್ಟ್ರಪತಿ ಚುನಾವಣೆ ರೇಸ್‌ನಲ್ಲಿ ಓರ್ವ ಬಿಹಾರಿ ಇರಬೇಕು ಎಂಬ ಇವರ ನಂಬಿಕೆಯಿಂದ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಲು ದೆಹಲಿಗೆ ಈಗಾಗಲೇ ವಿಮಾನವನ್ನು ಕಾಯ್ದಿರಿಸಿದ್ದಾರೆ. 2017ರಲ್ಲಿ ಆಗಿನ ಬಿಹಾರ ಗವರ್ನರ್ ರಾಮ್‌ನಾಥ್ ಕೋವಿಂದ್ ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು. ಆದರೆ ಅವರಿಗೆ ಬೆಂಬಲದ ಕೊರತೆಯಿಂದಾಗಿ ಯಾದವ್ ಅವರ ಪತ್ರಗಳನ್ನು ಅಂತಿಮವಾಗಿ ತಿರಸ್ಕರಿಸಲಾಯಿತು.
ಪ್ರಸ್ತಾವಕರು ನನ್ನ ನಾಮಪತ್ರವನ್ನು ಅನುಮೋದಿಸದ ಕಾರಣ ಕಳೆದ ಬಾರಿ ನಾನು ತಿರಸ್ಕೃತನಾದೆ. ಆದರೆ ಈ ಬಾರಿ ನಾನು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆಗೆ ಉತ್ತಮ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಯಾದವ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. ನಾನು ಪಂಚಾಯತ್‌ನಿಂದ ಅಧ್ಯಕ್ಷ ಸ್ಥಾನದವರೆಗೆ ನನ್ನ ಅದೃಷ್ಟವನ್ನು ಪ್ರಯತ್ನಿಸುತ್ತಲೇ ಇದ್ದೇನೆ. ಹೆಚ್ಚೇನು ಇಲ್ಲದಿದ್ದರೂ ಹೆಚ್ಚಿನ ಸಂಖ್ಯೆಯ ಚುನಾವಣೆಗಳಲ್ಲಿ ಸ್ಪರ್ಧಿಸಿದ ದಾಖಲೆಯಲ್ಲಾದರೂ ನನ್ನ ಹೆಸರು ಬರಬಹುದು ಎಂದು ಅವರು ಹೇಳಿದರು.

2013 ರಲ್ಲಿ ಯಾದವ್ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ವಿರುದ್ಧವೂ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ 10 ಸಾವಿರಕ್ಕಿಂತ ಕಡಿಮೆ ಮತ ಪಡೆದು ಠೇವಣಿ ಕಳೆದುಕೊಂಡಿದ್ದರು. ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಸುಮಾರು 50,000 ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆದ್ದಿದ್ದರು. ಆದರೂ ಹಠಕ್ಕೆ ಬೀದ್ದ ಯಾದವ್ 2019ರಲ್ಲಿ ಮತ್ತೆ ಕಣಕ್ಕೆ ಇಳಿದು ಸುಮಾರು 6,000 ಮತಗಳನ್ನು ಪಡೆದಿದ್ದರು.
ಈ ಲಾಲು ಪ್ರಸಾದ್ ಯಾದವ್ ಏಳು ಮಕ್ಕಳನ್ನು ಹೊಂದಿದ್ದಾರೆ. ಇವರೂ ಕೂಡ ಕೃಷಿ ಹಿನ್ನೆಲೆಯಿಂದ ಬಂದವರು. ನಾನು ಜೀವನೋಪಾಯಕ್ಕಾಗಿ ಕೃಷಿಯನ್ನು ಮಾಡುತ್ತೇನೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಹಿರಿಯ ಮಗಳಿಗೆ ಮದುವೆಯಾಗಿದೆ ಎಂದು ತಿಳಿಸಿದ್ದಾರೆ. ಅಖಂಡ ಭಾರತದ ರಾಷ್ಟ್ರಪತಿ ಹುದ್ದೆಗೆ ಜುಲೈ 18ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ಪ್ರಕಟಣೆ ಹೊರಡಿಸಿದೆ. ಸಂಸದರು ಮತ್ತು ಶಾಸಕರನ್ನು ಒಳಗೊಂಡ ಚುನಾವಣಾ ಕಾಲೇಜಿನ 4,809 ಸದಸ್ಯರು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಲು ತನ್ನ ಹಿರಿಯ ನಾಯಕರಾದ ಜೆಪಿ ನಡ್ಡಾ ಮತ್ತು ರಾಜನಾಥ್ ಸಿಂಗ್ ಬಿಟ್ಟಿವೆ. ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಚರ್ಚಿಸಲು ತೃಣಮೂಲ ಕಾಂಗ್ರೆಸ್ ವರಿಷ್ಠರು ದೆಹಲಿಯಲ್ಲಿ ಸಮಾನ ಮನಸ್ಕ ಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದಾರೆ.












Click it and Unblock the Notifications