ಮೊದಲ ರಾತ್ರಿ ಕಥೆ: ಪ್ರಸ್ತಕ್ಕಾಗಿ ಕಾಯುತ್ತಿದ್ದ ವರ; ಚಿನ್ನಾಭರಣಗಳೊಂದಿಗೆ ಚಿನ್ನಿ ಪರಾರಿ
ಮೋತಿಹಾರಿ ಜೂನ್ 07: ಪ್ರಸ್ತದ ಕೋಣೆಯಲ್ಲಿ ವಧುವಿನ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದ ವರನಿಗೆ ವಧು ಚಳ್ಳೆಹಣ್ಣು ತಿನಿಸಿ ಪರಾರಿಯಾಗಿದ್ದಾಳೆ. ಹನಿಮೂನ್‌ನಲ್ಲಿ ವಧು ವರನಿಗೆ ಎಂದಿಗೂ ಮರೆಯಲಾಗದ ರೀತಿಯಲ್ಲಿ ಮೋಸ ಮಾಡಿದ್ದಾಳೆ.
ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ನವ ವಧು ತನ್ನ ಸಹೋದರನೊಂದಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದಿನೊಂದಿಗೆ ಎಸ್ಕೇಪ್ ಆಗಿದ್ದಾಳೆ. ವರನು ಮಧುಚಂದ್ರಕ್ಕಾಗಿ ಮಧ್ಯರಾತ್ರಿಯವರೆಗೆ ವಧುವಿಗಾಗಿ ಕಾದು ಕುಳಿತಿದ್ದ ವೇಳೆ ವಧು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಘಟನೆ ಬಳಿಕ ಎಲ್ಲರೂ ವರನನ್ನು ಗೇಲಿ ಮಾಡಿದ್ದಾರೆ. ನ್ಯಾಯಕ್ಕಾಗಿ ಯುವಕ ಪೊಲೀಸರ ಮೊರೆ ಹೋಗಿದ್ದಾನೆ.

ಚಿನ್ನದ ಜೊತೆಗೆ ಚಿನ್ನಿ ಎಸ್ಕೇಪ್
ಸುದ್ದಿ ಪ್ರಕಾರ, ಜೋಗಿ ಸಾಹ್ ಅವರ ಪುತ್ರ ಆನಂದ್ ಕುಮಾರ್ ಅವರು ಢಾಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ರಾಮನಾಥ್ ಸಾಹ್ ಅವರ ಪುತ್ರಿ ಮುನ್ನಿ ಕುಮಾರಿಯನ್ನು ಮೇ 9 ರಂದು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ವಧುವನ್ನು ಕಳುಹಿಸಿಕೊಟ್ಟ ದಿನ ಆಕೆಯನ್ನು ಕರೆದುಕೊಂಡು ಬಂದಿದ್ದ ವರ, ಅದೇ ದಿನ ರಾತ್ರಿ 11 ಗಂಟೆಗೆ ಪ್ರಸ್ತವಿತ್ತು. ಆದರೆ ವಧು ಹಾಗೂ ಆಕೆ ಸಹೋದರ ಕೃಷ್ಣ ಎಂಬಾತನೊಂದಿಗೆ ಹಾಗೂ ಇಬ್ಬರು ಸ್ನೇಹಿತರ ಜೊತೆಗೆ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಈ ಸಂಬಂಧ ಆನಂದ್ ಕುಮಾರ್ ಪಕ್ಡಿದಯಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಚೆ ಬಂದು ನೋಡಿದಾಗ ಘಟನೆ ಬಯಲು
ವಧು ವರನಿಗೆ ಮೋಸ ಮಾಡಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಮೇ 9 ರಂದು ಈ ಮದುವೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ದಿನದಂತ ಪ್ರಸ್ತ ನಿಗಧಿಯಾಗಿತ್ತು. ತಡರಾತ್ರಿಯವರಿಗೆ ವರ ವಧುವಿಗಾಗಿ ಕಾಯುತ್ತ ಕುಳಿತಿದ್ದ. ಆದರೆ ವಧು ಬರಲೇ ಇಲ್ಲ. ತಡರಾತ್ರಿ ಕಾರೊಂದು ಹೋದ ಶಬ್ದ ಕೇಳಿ ಹೊರಗಡೆ ವರ ಆನಂದ್ ಬಂದಿದ್ದಾರೆ. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮೋತಿಹಾರಿಯ ಪಕ್ಡಿದಯಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನದೊಂದಿಗೆ ಮುನ್ನಿ ನಾಪತ್ತೆ
ರಾತ್ರಿಯಾದ ಕಾರಣ ಮುನ್ನಿಯ ಸಹೋದರ ಮತ್ತು ಆತನ ಸ್ನೇಹಿತರು ತಮ್ಮ ಮನೆಯ ಕೊಠಡಿಯಲ್ಲಿ ಮಲಗಲು ಬಂದಿದ್ದರು ಎಂದು ಆನಂದ್ ತಿಳಿಸಿದ್ದಾರೆ. ಆನಂದ್ ಪ್ರಕಾರ, ಅವರು ಹನಿಮೂನ್‌ನಲ್ಲಿ ತಮ್ಮ ಕೋಣೆಯಲ್ಲಿ ವಧುವಿಗಾಗಿ ತಡರಾತ್ರಿ ಕಾಯುತ್ತಿದ್ದರು. ಮಧ್ಯರಾತ್ರಿ ಕಾರು ಸದ್ದು ಕೇಳಿದಾಗ ರೂಮಿನಿಂದ ಹೊರಗೆ ಬಂದು ನೋಡಿದೆ. ಮನೆಯಲ್ಲಿ ನವ ವಧು ಅಥವಾ ಅವಳ ಸಹೋದರ ಇರಲಿಲ್ಲ. ಮೌಲ್ಯದ ವಸ್ತುಗಳು ಹಾಗೂ ನಗದು ಕೂಡ ನಾಪತ್ತೆಯಾಗಿದ್ದವು. ವರದಕ್ಷಿಣೆಯಲ್ಲಿ ಸಿಕ್ಕ ಹೊಸ ಬೈಕ್ ಕೂಡ ಇರಲಿಲ್ಲ. 4 ಲಕ್ಷ ಮೌಲ್ಯದ ಚಿನ್ನಾಭರಣ, 1.50 ಲಕ್ಷ ನಗದು ಸಮೇತ ವಧು ತನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾಳೆ ಎಂದು ಆನಂದ್ ಕುಟುಂಬದವರು ಆರೋಪಿಸಿದ್ದಾರೆ.

ನ್ಯಾಯಕ್ಕಾಗಿ ಪೊಲೀಸರ ಮೊರೆ
ಈ ಘಟನೆಯ ನಂತರ ವಧುವಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ವರ ಆನಂದ್ ಕುಮಾರ್ ಮನೆಯಿಂದ ಹೊರಬರಲು ಸಾಧ್ಯವಾಗದಷ್ಟು ಅವಮಾನಗೊಂಡಿದ್ದಾರೆ. ಮನೆಯಿಂದ ಹೊರ ಬಂದ ಕೂಡಲೇ ಜನ ನೋಡುತ್ತಾರೆ, ತಮಾಷೆ ಮಾಡಿ ನಗುತ್ತಾರೆ ಎನ್ನುತ್ತಾರೆ ಆನಂದ್. ಇಂತಹ ಪರಿಸ್ಥಿತಿಯಲ್ಲಿ ಮನೆಯಿಂದ ಹೊರ ಬರುವುದೇ ಅವರಿಗೆ ಕಷ್ಟವಾಗಿದೆ. ಆನಂದ್ ನ್ಯಾಯಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದಾರೆ.












Click it and Unblock the Notifications