ಬಿಹಾರದಲ್ಲಿ ನಿಗೂಢ ಕಾಯಿಲೆ: ಮೃತ ಮಕ್ಕಳ ಸಂಖ್ಯೆ 83 ಕ್ಕೆ ಏರಿಕೆ

ಪಾಟ್ನಾ, ಜೂನ್ 12: ಬಿಹಾರದ ಮುಜಾಫರ್ಪುರದಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯಿಂದಾಗಿ ಮೃತರಾದ ಮಕ್ಕಳ ಸಂಖ್ಯೆ 83 ಕ್ಕೇರಿದ್ದು, ಮಕ್ಕಳ ಸಾವಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತಿರುವುದೇ ಕಾರಣ ಎಂದು ಸರ್ಕಾರ ಹೇಳಿದೆ.

ಆದರೆ ಮೆದುಳಿನ ಉರಿಯೂತ(Acute Encephalitis Syndrome)ದ ಸಮಸ್ಯೆಯಿಂದ ಮಕ್ಕಳು ಮೃತರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಬಿಹಾರ ಸರ್ಕಾರ ಈ ದುರಂತಕ್ಕೆ ಮೆದುಳಿನ ಸಮಸ್ಯೆ ಕಾರಣವಲ್ಲ ಎನ್ನುತ್ತಿದೆ.

ಅತಿಯಾದ ಜ್ವರ, ಮಾನಸಿಕ ಸ್ಥಿತಿಯಲ್ಲಿ ಅಸ್ಥಿರತೆ, ಕೋಮಾ ಸ್ಥಿತಿಗೆ ತಲುಪುವ ಪರಿಸ್ಥಿತಿ ಉಂಟಾಗುವುದು ಈ ರೋಗದ ಲಕ್ಷಣ. ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ಈ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಈ ವರ್ಷ ಮತ್ತೆ ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ. ರೋಗ ಪತ್ತೆಯಾದ 24 ಗಂಟೆಗಳಲ್ಲೇ 36 ಮಕ್ಕಳು ತೀರಿಕೊಂಡಿದ್ದರು.

Encephalitis Death Toll Rises to 83 in Bihar

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತಿದ್ದು, 15 ವರ್ಷದೊಳಗಿನ ಮಕ್ಕಳೇ ಹೆಚ್ಚಾಗಿ ಈ ರೋಗಕ್ಕೆ ತುತ್ತಾಗಿದ್ದಾರೆ. ಬೇಸಿಗೆಯ ಸಮಯದಲ್ಲಿ ಮುಜಾಫರ್ಪುರದಲ್ಲಿ ಹೈಪೋಗ್ಲೆಸಿಮಿಯಾ ಕಾಯಿಲೆ ಆಗಾಗ ಕಂಡುಬರುತ್ತಿತ್ತು. ಆದರೆ AES ಸಮಸ್ಯೆ ಕಂಡುಬಂದಿರಲಿಲ್ಲ. ಈ ಬಾರಿ ಮುಜಾಫರ್ಪುರದಲ್ಲಿಯೇ ಅತೀ ಹೆಚ್ಚು ಮಕ್ಕಳು ಸತ್ತಿದ್ದಾರೆ ಎನ್ನಲಾಗಿದ್ದು, ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+