ಬಿಜೆಪಿ ಪ್ರಚೋದನೆ: ನಿತೀಶ್ ಸಂಪುಟದಿಂದ ಮುಖೇಶ್ ಸಹಾನಿ ವಜಾ
ಪಾಟ್ನಾ ಮಾರ್ಚ್ 28: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕ್ಯಾಬಿನೆಟ್ ಸಚಿವ ಮುಖೇಶ್ ಸಹಾನಿ ಅವರನ್ನು ತಮ್ಮ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ. ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಹಾಗೂ ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಮುಖೇಶ್ ಸಹಾನಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಪಾಲ ಫಗು ಚೌಹಾಣ್ ಅವರಿಗೆ ಶಿಫಾರಸು ಮಾಡಿದ್ದಾರೆ.
ಸಚಿವರ ಪದಚ್ಯುತಿ ಕುರಿತು ಬಿಹಾರ ರಾಜ್ಯಪಾಲರು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಈ ಹಿಂದೆ ಮುಕೇಶ್ ಸಹಾನಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ, ಮುಖ್ಯಮಂತ್ರಿಗಳೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮುಖೇಶ್ ಸಹಾನಿ ಹೇಳಿದ್ದರು. ಬಿಜೆಪಿ ಜತೆಗಿನ ಭಿನ್ನಾಭಿಪ್ರಾಯದಿಂದ ಮುಖೇಶ್ ಸಹಾನಿ ಸಚಿವ ಸ್ಥಾನ ಕಳೆದುಕೊಳ್ಳುತ್ತಿದ್ದಾರೆ.
2020ರ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ವಿಐಪಿಗೆ ಬಿಜೆಪಿ 11 ಸ್ಥಾನಗಳನ್ನು ಹಂಚಿಕೆ ಮಾಡಿತ್ತು. ವಿಐಪಿ ಈ ಸ್ಥಾನಗಳಿಗೆ ಸ್ಪರ್ಧಿಸಿ ನಾಲ್ಕರಲ್ಲಿ ಗೆದ್ದಿದ್ದಾರೆ. ಆದರೆ ಈ ವಾರದ ಆರಂಭದಲ್ಲಿ ಮೂವರು ವಿಐಪಿ ಶಾಸಕರಾದ ರಾಜು ಕುಮಾರ್ ಸಿಂಗ್ (ಸಾಹೇಬ್‌ಗಂಜ್), ಮಿಶ್ರಿ ಲಾಲ್ ಯಾದವ್ (ಅಲಿನಗರ) ಮತ್ತು ಸ್ವರ್ಣ ಸಿಂಗ್ (ಗೌರ ಬೌರಂ) ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಒಬಿಸಿ ಮತಗಳ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಅವರಿಗೆ ಸಚಿವ ಸ್ಥಾನ ನೀಡಿತ್ತು.

ಈಗ ಅವರ ಪಕ್ಷದ ಏಕೈಕ ಪ್ರತಿನಿಧಿ ಮುಖೇಶ್ ಸಹಾನಿ. ಈ ಹಿಂದೆ ಇತ್ತೀಚೆಗೆ ನಡೆದ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ 53 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಮುಖೇಶ್ ಸಹಾನಿ ಬಿಜೆಪಿಯನ್ನು ಕೆರಳಿಸಿದ್ದರು. ನಂತರ, ಬಿಹಾರದ ಮುಂಬರುವ ಎಂಎಲ್‌ಸಿ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 7 ರಲ್ಲಿ ಬಿಜೆಪಿ ವಿರುದ್ಧ ಮತ್ತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಹಾಲಿ ವಿಐಪಿ ಶಾಸಕ ಮುಜಾಫರ್ ಪಾಸ್ವಾನ್ ಅವರ ನಿಧನದ ನಂತರ ಬಿಜೆಪಿ ಕೂಡ ವಿಐಪಿ ಕ್ರಮಕ್ಕೆ ಸೇಡು ತೀರಿಸಿಕೊಂಡಿದ್ದು, ಮುಂಬರುವ ಬೋಚಹಾ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಇದಕ್ಕೆ ಪ್ರತಿಯಾಗಿ ಮುಖೇಶ್ ಸಹಾನಿ ಅವರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಗೀತಾ ಕುಮಾರಿ ಹೆಸರನ್ನು ಘೋಷಿಸಿದರು. ಇದರಿಂದ ಕೆರಳಿದ ಬಿಜೆಪಿ ಮುಖೇಶ್ ಸಹಾನಿ ಅವರನ್ನು ಬಿಹಾರ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿತು. ಬಿಜೆಪಿಯಿಂದ ಲಿಖಿತ ದೂರಿನ ಮೇರೆಗೆ ಮುಕೇಶ್ ಸಹಾನಿ ಅವರನ್ನು ಪದಚ್ಯುತಗೊಳಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭಾನುವಾರ, ಮಾರ್ಚ್ 27 ರಂದು ರಾಜ್ಯಪಾಲರಿಗೆ ಶಿಫಾರಸು ಕಳುಹಿಸಿದ್ದಾರೆ.

Recommended Video
ಬಿಜೆಪಿ ಪತ್ರದ ಮೇರೆಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರ ಸೇವೆಯನ್ನು ವಜಾಗೊಳಿಸಲು ರಾಜ್ಯಪಾಲರ ಕಚೇರಿ ಶಿಫಾರಸು ಮಾಡಿದೆ ಎನ್ನಲಾಗಿದೆ. ಮುಖೇಶ್ ಸಹಾನಿ ಅವರು ಇನ್ನು ಮುಂದೆ ಎನ್‌ಡಿಎ ಭಾಗವಾಗಿಲ್ಲದ ಕಾರಣ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಬಿಜೆಪಿ ಒತ್ತಾಯಿಸಿದೆ.












Click it and Unblock the Notifications