'ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ವಿರುದ್ಧ ಪ್ರಕರಣ ದಾಖಲು

ಪಾಟ್ನಾ, ಜನವರಿ 04: ಅನುಪಮ್ ಖೇರ್ ಪ್ರಧಾನ ಪಾತ್ರದಲ್ಲಿ ನಟಿಸಿರುವ 'ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾಕ್ಕೆ ಮತ್ತೊಮ್ಮೆ ವಿಘ್ನ ಎದುರಾಗಿದೆ. ಚಿತ್ರದ ಟ್ರೇಲರ್ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪವೆತ್ತಿದ್ದರು. ಈಗ ಚಿತ್ರದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾಂಗ್ರೆಸ್​ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿರುವ ಈ ಸಿನಿಮಾ ರಿಲೀಸ್​ಮಾಡುವುದಕ್ಕೂ ಮುನ್ನ ಕಾಂಗ್ರೆಸ್ ಯೂಥ್ ವಿಂಗ್ ಕಚೇರಿಯಲ್ಲಿ ಪ್ರದರ್ಶನವಾಗಬೇಕು ಎಂದು ಆಗ್ರಹಿಸಲಾಗಿತ್ತು. ಇದೀಗ ಸಿನಿಮಾ ತಂಡದವರ ಮೇಲೆ ಕೇಸ್ ಹಾಕಲಾಗಿದೆ‌.

ಮುಜಾಫರ್ ಪುರ್ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದಲ್ಲಿ ವಕೀಲ ಸುಧೀರ್ ಕುಮಾರ್ ಓಝಾ ಅವರು ಕೇಸು ದಾಖಲಿಸಿದ್ದು, ಜನವರಿ 08ರಂದು ವಿಚಾರಣೆ ಬರಲಿದೆ.

Case Filed Against Anupam Kher Over The Accidental Prime Minister

ಮನಮೋಹನ್ ಸಿಂಗ್ ಪಾತ್ರಕ್ಕೆ ಅನುಪಮ್ ಖೇರ್ ಜೀವ ತುಂಬಿದ್ದಾರೆ. ಅಕ್ಷಯ್ ಖನ್ನ ಅವರು ಸಂಜಯ್ ಬಾರು ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರಗಳು ಅವರು ಪ್ರಮುಖ ರಾಜಕಾರಣಿಗಳ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತಿದೆ

ಈ ಚಿತ್ರ ಜನವರಿ 11ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಅನುಪಮ್​ ಖೇರ್​ ಸೇರಿದಂತೆ ಚಿತ್ರ ತಂಡದವರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆಟೋ ಏರಿದ್ದ ಅನುಪಮ್ ಖೇರ್, ಆಟೋ ಡ್ರೈವರ್​ ಜೊತೆ ಈ ಚಿತ್ರ ಬಗ್ಗೆ ಮಾತನಾಡಿಸಿ ಟ್ವೀಟ್ ಕೂಡ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+