Video: ಸ್ಯಾನಿಟೈಸರ್ ಸಿಂಪಡಿಸುವ ಕಾರ್ಮಿಕರ ಮೇಲೆ ಹೂಮಳೆ

ಪಾಟ್ನಾ, ಏಪ್ರಿಲ್.03: ಕೊರೊನಾ ವೈರಸ್ ಮುಕ್ತ ಭಾರತಕ್ಕಾಗಿ ವೈದ್ಯಕೀಯ ಸಿಬ್ಬಂದಿ ಜೊತೆಗೆ ಪೊಲೀಸರು, ಪಾಲಿಕೆ ಕಾರ್ಮಿಕರು ಸೇರಿದಂತೆ ಹಲವರು ಶ್ರಮಿಸುತ್ತಿದ್ದಾರೆ. ದೇಶದ ಕೆಲವೆಡೆ ವೈದ್ಯಕೀಯ ಸಿಬ್ಬಂದಿ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆಗಳು ಬೆಳಕಿಗೆ ಬಂದಿವೆ.

ನರ್ಸ್ ಗಳು, ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವವರು ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ತಮ್ಮ ಏರಿಯಾದಲ್ಲಿ ಸ್ವಚ್ಛತೆ ಕಾಪಾಡುವ ಕಾರ್ಮಿಕರ ಮೇಲೆ ಅಲ್ಲಿನ ನಿವಾಸಿಗಳು ಹೂಮಳೆ ಗರೆದಿದ್ದಾರೆ.

ಬಿಹಾರದ ಗಯಾ ಪ್ರದೇಶದ ಗುರುದ್ವಾರ ರಸ್ತೆಯಲ್ಲಿ ಸ್ಯಾನಿಟೈಸರ್ ಸಿಂಪಡಿಸುವ ಕಾರ್ಮಿಕರ ಮೇಲೆ ನಗರದ ನಿವಾಸಿಗಳು ತಮ್ಮ ಮನೆಗಳ ಮಹಡಿ ಮೇಲೆಯೇ ನಿಂತು ಹೂವುಗಳನ್ನು ಎರಚಿದ್ದಾರೆ.

Bihar Natives Applauded Sanitation Workers By Showering Flower Petals On Them

ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಿದ ನಿವಾಸಿಗಳು:

ಬಿಹಾರದಲ್ಲಿ ಕೊರೊನಾ ವೈರಸ್ ಸೋಂಕಿತನಿಂದ ಜನರನ್ನು ರಕ್ಷಿಸಲು ನಗರದ ಬೀದಿ ಬೀದಿಗಳಲ್ಲಿ ಸ್ಯಾನಿಟೈಸರ್ ಗಳನ್ನು ಸಿಂಪಡಿಸಲಾಗುತ್ತಿದೆ. ಈ ಹಿನ್ನೆಲೆ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ನಿವಾಸಿಗಳು ಈ ರೀತಿ ನಡೆದುಕೊಂಡಿದ್ದಾರೆ. ಕಾರ್ಮಿಕರ ಮೇಲೆ ಹೂ ಎರಚುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಇದುವರೆಗೂ 29 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+